ಇದ್ದಕ್ಕಿದ್ದಂತೆ ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ಜಲಾಶಯ.. ಸ್ಥಳೀಯರಲ್ಲಿ ಆತಂಕ

ಇದ್ದಕ್ಕಿದ್ದಂತೆ ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ಜಲಾಶಯ.. ಸ್ಥಳೀಯರಲ್ಲಿ ಆತಂಕ

ಬಳ್ಳಾರಿ: ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಜಲಾಶಯವನ್ನೇ ನೆಚ್ಚಿಕೊಂಡಿರುವ ಜನರಲ್ಲಿ ಆತಂಕ ಉಂಟಾಗಿದೆ.

ಹೊಸಪೇಟೆಯಲ್ಲಿರೋ ತುಂಗಭದ್ರಾ ಜಲಾಶಯಕ್ಕೆ ಅಕ್ಕಪಕ್ಕದ ಕಾರ್ಖಾನೆಗಳು ತ್ಯಾಜ್ಯ ನೀರನ್ನು ನದಿಗೆ ಹರಿಸುತ್ತಿರೋದೆ ಡ್ಯಾಂ ನೀರಿನ ಬಣ್ಣ ಬದಲಾಗಲು ಕಾರಣ ಎಂಬ ಆರೋಪಗಳು ಕೇಳುತ್ತಿವೆ.

ತುಂಗಭದ್ರಾ ಜಲಾಶಯ 100.855 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ರಾಜ್ಯದ ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಗೆ ಹಾಗೂ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಕೃಷಿ ಜಮೀನು ಮತ್ತು ಕುಡಿಯಲು ನೀರು ಒದಗಿಸುತ್ತದೆ. ಈಗ ಜಲಾಶಯದ ನೀರು ಹಚ್ಚಹಸಿರು ಬಣ್ಣಕ್ಕೆ ತಿರುಗಿದ್ದರೂ ಕೂಡ, ನೀರಿನ ಬಣ್ಣ ಬದಲಾಗಲು ನಿಖರ ಕಾರಣ ಇಲ್ಲ ಅಂತಾ ಮಾಹಿತಿ ನೀಡಿದ ಅಧಿಕಾರಿಗಳು ಕುಡಿಯಲು ಡ್ಯಾಂ ನೀರು ಬಳಸಬಹದು ಅಂತಾ ಹೇಳಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ಸಿಲಿಂಡರ್ ಸ್ಫೋಟ; ಹೊತ್ತಿ ಉರಿದ ಮನೆ

Source: newsfirstlive.com Source link