ಮನನೊಂದು ಶೌಚಾಲಯದ ಒಳಗೆ ತನ್ನ ಪ್ಯಾಂಟ್​​ನ್ನೇ ಬಳಸಿ ನೇಣಿಗೆ ಶರಣಾದ ಅತ್ಯಾಚಾರದ ಆರೋಪಿ

ಮನನೊಂದು ಶೌಚಾಲಯದ ಒಳಗೆ ತನ್ನ ಪ್ಯಾಂಟ್​​ನ್ನೇ ಬಳಸಿ ನೇಣಿಗೆ ಶರಣಾದ ಅತ್ಯಾಚಾರದ ಆರೋಪಿ

ವಿಜಯಪುರ; 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಪೊಲೀಸರು ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿತ್ತು. ಈಗ ವಿಚಾರಣೆ ವೇಳೆ ಪೊಲೀಸ್​​ ಕಸ್ಟಡಿಯಲ್ಲಿದ್ದಾಗಲೇ ಪೋಕ್ಸೋ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಸಿಂದಗಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಅಡಿ ಬಂಧನವಾಗಿದ್ದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶೌಚಾಲಯಕ್ಕೆ ಹೋಗಿದ್ದ ವೇಳೆ ಪ್ಯಾಂಟ್‌ ಬಳಸಿ ನೇಣಿಗೆ ಶರಣಾಗಿದ್ದಾನೆ.

ಇದನ್ನೂ ಓದಿ: ರೈಲುಹಳಿಯಲ್ಲಿ ಸಿಲುಕಿದ್ದ ‘ಮೇಕೆ ಮರಿ’ ರಕ್ಷಿಸಿದ ವೀರ, ತನ್ನ ಕಾಲನ್ನೇ ಕಳೆದುಕೊಂಡ..!

ತಮ್ಮ ಮಗಳ ಮೇಲೆ ಅತ್ಯಾಚಾರ ನಡೆದಿದೆ ಎಂದು ಬಾಲಕಿ ಪೋಷಕರು ದೂರು ನೀಡಿದ್ದರು. ಪೋಷಕರ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಈ ಆರೋಪಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ; ‘ನನ್ನ ಮಗನ್ನ ಯಾಕೆ ಬಂಧಿಸಿದ್ರೋ ಗೊತ್ತಿಲ್ಲ’ ಎಂದು ಬಿಕ್ಕಿಬಿಕ್ಕಿ ಅತ್ತ ಆರೋಪಿ ತಾಯಿ

Source: newsfirstlive.com Source link