ಈ ಕಿಲಾಡಿ ಕಳ್ಳರು ಚಿನ್ನದ ಸರ ಎಗರಿಸಲು ಬಳಸಿದ್ದು ‘ಓಲಾ’ ಕಾರ್

ಈ ಕಿಲಾಡಿ ಕಳ್ಳರು ಚಿನ್ನದ ಸರ ಎಗರಿಸಲು ಬಳಸಿದ್ದು ‘ಓಲಾ’ ಕಾರ್

ಬೆಂಗಳುರು: ಬೈಕ್​ಗಳಲ್ಲಿ ಬಂದು ಚಿನ್ನದ ಸರ ಎಗರಸಿ ಪರಾರಿಯಾಗುವುದು ಮಾಮೂಲಿ, ಆದರೆ ಇಲ್ಲಿ ಖತರ್ನಾಕ್​ ಕಳ್ಳರು ಕಾರಲ್ಲಿ ಬಂದು ಸರ ಎಗರಸಿ ನಾವು ಸ್ವಲ್ಪ ಡಿಫರೆಂಟ್​ ಅಂತಾ ತೋರ್ಸೊಕೆ ಹೋಗಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅದ್ರಲ್ಲೂ ಓಲಾ ಕಾರ್ ಬಳಸಿ ಚಿನ್ನ ಎಗರಿಸಿದ್ದರು.

ಹೌದು ನಗರದಲ್ಲಿ ಓಲಾ ಕಾರಿನಲ್ಲಿ ಬಂದು ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದ ಖದೀಮರ ತಂಡವೊಂದನ್ನ ರಾಜಾನುಕುಂಟೆ ಪೊಲೀಸರು ಬಂಧಿಸಿದ್ದಾರೆ. ನಿಂಗನಗೌಡ, ವಿರೂಪಾಕ್ಷ ಮತ್ತು ಚಂದ್ರು ಬಂಧಿತರು.

ಇದನ್ನೂ ಓದಿ: ರೈಲುಹಳಿಯಲ್ಲಿ ಸಿಲುಕಿದ್ದ ‘ಮೇಕೆ ಮರಿ’ ರಕ್ಷಿಸಿದ ವೀರ, ತನ್ನ ಕಾಲನ್ನೇ ಕಳೆದುಕೊಂಡ..!

ಸರಗಳ್ಳತನಕೆ ಇಳಿದಿದ್ದ ಈ ಕಳ್ಳರು ಓಲಾ ಕ್ಯಾಬ್​ನ್ನು ಬಳಸಿಕೊಂಡಿದ್ದಾರಂತೆ. ನಗರದ ಹೊರವಲಯದಲ್ಲಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಮಹಿಳೆಯನ್ನು ಟಾರ್ಗೆಟ್​ ಮಾಡಿ, ಕಾರಿನಲ್ಲಿ ಬಂದು ಕುತ್ತಿಗೆಯಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿ ಎಸ್ಕೇಪ್​ ಆಗಿದ್ದಾರೆ.
ಬಳಿಕ ಸರ ಕಳೆದುಕೊಂಡ ಮಹಿಳೆ ರಾಜಾನುಕುಂಟೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಕಾರ್ಯ ಪ್ರವೃತ್ತರಾದ ಪೊಲೀಸರು ಮಹಿಳೆಯ ಹೇಳಿಕೆ ಪಡೆದುಕೊಂಡು ಚಾಲಾಕಿ ಕಳ್ಳರಿಗೆ ಬಲೆ ಬೀಸಿದ್ದಾರೆ.

blank

ಹಳದಿ ಬೋರ್ಡ್ ಕಾರಿನಲ್ಲಿ ಬಂದಿದ್ದ ಗ್ಯಾಂಗ್ ನ ವ್ಯಕ್ತಿಗಳು ಸರ ಕಿತ್ತೊಯ್ದಿದ್ದಾರೆ ಎಂಬ ಹೇಳಿಕೆ ಪಡೆದ ಪೊಲೀಸರು, ಸೂಕ್ತ ಮಾಹಿತಿ ಸಿಗದೆ ಪರದಾಡಿದ್ದಾರೆ. ಈ ವೇಳೆ ಓಲಾ ಕಚೇರಿಯಲ್ಲಿ ಸರಗಳ್ಳತನವಾದ ರೂಟ್ ನಲ್ಲಿದ್ದ ಕಾರಿನ ವಿವರ ಸಂಗ್ರಹಿಸಿದ ಪೊಲೀಸರು ಇಟಿಯೋಸ್ ಕಾರು ರಾಜಾನುಕುಂಟೆ ಬಳಿ ಓಡಾಡಿರುವುದು ಪತ್ತೆಯಾಗಿದ್ದು ಬಳಿಕ ಅಲ್ಲಿಯ ಸಿಸಿಟಿವಿಗಳ ಪರಿಶೀಲನೆ ನಡೆಸಿದ್ದಾರೆ.
ಕಾರಿನ ವಿವರ ಸಂಗ್ರಹಿಸಿ ತೀವ್ರ ಶೋಧ ನಡೆಸಿದ ಪೊಲೀಸರು ಕಾರು ಪತ್ತೆ ಹಚ್ಚಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ರಸ್ತೆ ಮಧ್ಯೆ ಬಿದ್ದಿದ್ದ ಕೈ ಕಂಡು ಕಂಗಾಲಾದ ಜನ.. ಪೊಲೀಸರು ಬಂದು ನೋಡಿದಾಗ ಬಯಲಾಯ್ತು ಸತ್ಯ

ಆ ಬಳಿಕ ವಿಚಾರಣೆ ನಡೆಸಿದಾಗ ಇಷ್ಟು ದಿನ ಪಲ್ಸರ್​ ಬೈಕ್​ನಲ್ಲಿ ಕಳ್ಳತನ ಮಾಡ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ಸದ್ಯ ಮೂವರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿರುವ ರಾಜಾನುಕುಂಟೆ ಪೊಲೀಸರು, ಕಾರು ಸೀಜ್ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Source: newsfirstlive.com Source link