ಶ್ರೀ ಕೃಷ್ಣ ಜನ್ಮಾಷ್ಟಮಿಗೆ ರಂಗೇರಿದ ಕೃಷ್ಣನೂರು.. ತಯಾರಾಗ್ತಿದೆ ನಾನಾ ಬಗೆಯ ತಿಂಡಿ ತಿನಿಸು

ಶ್ರೀ ಕೃಷ್ಣ ಜನ್ಮಾಷ್ಟಮಿಗೆ ರಂಗೇರಿದ ಕೃಷ್ಣನೂರು.. ತಯಾರಾಗ್ತಿದೆ ನಾನಾ ಬಗೆಯ ತಿಂಡಿ ತಿನಿಸು

ಉಡುಪಿ: ನಾಳೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಈಗಾಗಲೇ ಹಲವಾರು ಮಂದಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಬಣ್ಣಬಣ್ಣದ ಹೂಗಳಿಂದ ತುಂಬಿ ತುಳುಕುತ್ತಿರುವ ಕೃಷ್ಣನೂರು ರಂಗೇರಿದೆ.

blank

 

ಇದೀಗ ನಾವು ಶ್ರಾವಣ ಮಾಸದಲ್ಲಿದ್ದೇವೆ. ಈ ಮಾಸದಲ್ಲಿ ಒಂದರ ಮೇಲೊಂದು ಹಬ್ಬಗಳು ಬರುತ್ತಲೇ ಇವೆ. ರಕ್ಷಾ ಬಂಧನ ಆಚರಣೆಯ ನಂತರ ಬರುವ ಪ್ರಮುಖ ಹಬ್ಬವೆಂದರೆ ಅದುವೇ ಕೃಷ್ಣ ಜನ್ಮಾಷ್ಟಮಿ ಅಥವಾ ಕೃಷ್ಣಾಷ್ಟಮಿ. ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ಅದು ಆಗಸ್ಟ್ 30 ರಂದು ಸೋಮವಾರ ಬಂದಿದೆ. ಆಗಸ್ಟ್ 30 ರಂದು, ಕೃಷ್ಣ ಜನ್ಮಾಷ್ಟಮಿಯನ್ನು ಭಕ್ತರು ಸಡಗರ ಸಂಭ್ರಮದಿಂದ ಆಚರಿಸಿತ್ತಾರೆ.

blank

ಇನ್ನು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಅಷ್ಟಮಿಯ ಶುಭ ದಿನದ ಪ್ರಯುಕ್ತ ಭಕ್ತರಿಗೆ ನಾನಾ ಬಗೆಯ ಸಿಹಿ ತಿನಿಸುಗಳ ವಿತರಣೆ ನಡೆಯಲಿದ್ದು, ಈಗಾಗಲೇ ಕೃಷ್ಣ ಮಠದಲ್ಲಿ ತಿಂಡಿಗಳು ತಯಾರಿ ಜೋರಾಗಿ ನಡೆಯುತ್ತಿದೆ.‌ ಉಂಡೆ, ಚಕುಲಿ, ಕೋಡುಬಳೆ, ಲಡ್ಡು, ಹೀಗೆ ನಾನಾ ಬಗೆಯ ತಿಂಡಿಗಳನ್ನು ತಯಾರಿಸಿ, ಪ್ಯಾಕ್ ಮಾಡಲಾಗುತ್ತಿದೆ. ನಾಳೆ ಅಷ್ಟಮಿ ಸಂಭ್ರಮ ಜೊತೆಗೆ, ನಾಡಿದ್ದು ವಿಟ್ಲಪಿಂಡಿ ಮೊಸರು ಕುಡಿಕೆ ಉತ್ಸವ ನಡೆಯಲಿದೆ.

blank blank blank

 

 

Source: newsfirstlive.com Source link