ಶೀಲ ಶಂಕಿಸಿ ಭಯಾನಕ ವಿಕೃತಿ ಮೆರೆದ ಪತಿ; ಬೈಯಿರಿ ಆದ್ರೆ ಬಂಧಿಸಬೇಡಿ ಎಂದ ಪತ್ನಿ

ಶೀಲ ಶಂಕಿಸಿ ಭಯಾನಕ ವಿಕೃತಿ ಮೆರೆದ ಪತಿ; ಬೈಯಿರಿ ಆದ್ರೆ ಬಂಧಿಸಬೇಡಿ ಎಂದ ಪತ್ನಿ

ಭೂಪಾಲ್​​: ಅಕ್ರಮ ಸಂಬಂಧದ ಶಂಕೆಯಿಂದ ಹೆಂಡತಿ ಗುಪ್ತಾಂಗಕ್ಕೆ ಗಂಡ ಹೊಲಿಗೆ ಹಾಕಿದ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ. 55 ವರ್ಷದ ವ್ಯಕ್ತಿಯೋರ್ವ ತನ್ನ ಹೆಂಡತಿ ಪಕ್ಕದ ಮನೆಯ ವ್ಯಕ್ತಿ ಜತೆಗೆ ಲೈಂಗಿಕ ಸಂಬಂಧ ಹೊಂದಿದ್ದಳು ಎಂದು ಅನುಮಾನಪಟ್ಟು ಈ ಕೃತ್ಯ ಎಸಗಿದ್ದಾನೆ.

ಆಗಸ್ಟ್​ 24ನೇ ತಾರೀಕಿನಂದು ಸಿಂಗ್ರೌಲಿ ಜಿಲ್ಲೆಯಲ್ಲಿ ರಾಯ್ಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ಹೆಂಡತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಹಲವು ಬಾರಿ ಜಗಳ ಮಾಡಿದ್ದ.

ಒಂದು ಈ ವಿಚಾರ ಸಂಬಂಧ ಜಗಳ ತಾರಕಕ್ಕೇರಿದಾಗ ತನ್ನ ಹೆಂಡತಿಯ ಗುಪ್ತಾಂಗಕ್ಕೆ ಹೊಲಿಗೆ ಹಾಕಿ ಗಂಡ ವಿಕೃತಿ ಮೆರೆದಿದ್ದಾನೆ. ನೋವಿನಿಂದ ನರಳಾಡುತ್ತಿದ್ದ ಈಕೆಯನ್ನು ಅಕ್ಕಪಕ್ಕದ ಮನೆಯವರು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಹೆಂಡತಿ ಗಂಡನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ; ‘ನನ್ನ ಮಗನ್ನ ಯಾಕೆ ಬಂಧಿಸಿದ್ರೋ ಗೊತ್ತಿಲ್ಲ’ ಎಂದು ಬಿಕ್ಕಿಬಿಕ್ಕಿ ಅತ್ತ ಆರೋಪಿ ತಾಯಿ

ತನ್ನ ವಿರುದ್ಧ ಕೇಸ್​​ ದಾಖಲಾಗುತ್ತಿದ್ದಂತೆಯೇ ಗಂಡ ಎಸ್ಕೇಪ್​​ ಆಗಿದ್ದಾನೆ. ಮೂಲಗಳ ಪ್ರಕಾರ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೆಂಡತಿ ಗಂಡನಿಗೆ ಕೇವಲ ವಾರ್ನಿಂಗ್​​ ಮಾಡಿ ಎಂದು ಉಲ್ಲೇಖಿಸಿದ್ದಾರಂತೆ. ಯಾವುದೇ ಕಾರಣಕ್ಕೂ ಹೊಡೆಯಬೇಡಿ, ಬೈದು ಬುದ್ದಿ ಹೇಳಿ. ಇನ್ನೊಮ್ಮೆ ಹೀಗೆ ರಿಪೀಟ್​​ ಮಾಡದಂತೆ ಬೆದರಿಕೆ ಹಾಕಿ ಎಂದು ಪೊಲೀಸರಿಗೆ ಹೆಂಡತಿ ಮನವಿ ಮಾಡಿದ್ದಾಳೆ.

Source: newsfirstlive.com Source link