ಮನ್​ ಕೀ ಬಾತ್​​ನಲ್ಲಿ ದೇಶದ ಯುವ ಜನಾಂಗವನ್ನ ಕೊಂಡಾಡಿದ್ಯಾಕೆ ಪ್ರಧಾನಿ ಮೋದಿ?

ಮನ್​ ಕೀ ಬಾತ್​​ನಲ್ಲಿ ದೇಶದ ಯುವ ಜನಾಂಗವನ್ನ ಕೊಂಡಾಡಿದ್ಯಾಕೆ ಪ್ರಧಾನಿ ಮೋದಿ?

ನವದೆಹಲಿ: 80 ನೇ ಮನ್​ಕಿ ಬಾತ್ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ.. ನಮ್ಮ ದೇಶದ ಆಟಗಾರರು ಟೋಕಿಯೋ ಒಲಿಂಪಿಕ್ಸ್​ನಲ್ಲಿ ಗೆದ್ದು ತಂದ ಒಂದೊಂದು ಪದಕವೂ ಸಹ ಬಹಳ ವಿಶೇಷವಾದುದು ಎಂದಿದ್ದಾರೆ. ಅಲ್ಲದೇ ನಮ್ಮ ದೇಶದ ಯುವಕರು ಮನಸ್ಸು ಮಾಡಿದ್ರೆ ಎಂಥದ್ದೇ ಕಠಿಣ ಸವಾಲನ್ನೂ ಎದುರಿಸಬಲ್ಲರು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ಸಾಧನೆ ಇಡೀ ದೇಶಕ್ಕೆ ಸ್ಪೂರ್ತಿ- ಭವಿನಾ ಪಟೇಲ್​​ಗೆ ಶುಭ ಕೋರಿದ ಪ್ರಧಾನಿ ಮೋದಿ

ಮೇಜರ್ ಧ್ಯಾನ್ ಚಂದ್​ಗೆ ಟ್ರಿಬ್ಯೂಟ್ ಸಲ್ಲಿಸಿದ ಪ್ರಧಾನಿ ಮೋದಿ.. ಭಾರತ ಒಲಿಂಪಿಕ್ಸ್​ನಲ್ಲಿ ಹೆಚ್ಚು ಪದಕಗಳನ್ನ ಗೆಲ್ಲದೇ ಇರಬಹುದು.. ಆದರೆ ಇಂದು ಯುವಕರು ಕ್ರೀಡೆಗಳನ್ನು ಹೆಚ್ಚೆಚ್ಚು ಅವಕಾಶಗಳನ್ನ ಅನ್ವೇಷಿಸುವಂತಾಗಿದೆ ಎಂದಿದ್ದಾರೆ. ಇಂಥ ಸಂದರ್ಭವನ್ನು ನಿಲ್ಲಲು ನಾವು ಬಿಡಲಾಗದರು.. ಇಂಥ ಸಂದರ್ಭವನ್ನು ಜೀವನದ ಪ್ರತಿ ನಡಿಗೆಯಲ್ಲೂ ಇರುವಂತೆ ಶಾಶ್ವತಗೊಳಿಸಬೇಕಿದೆ ಎಂದು ಹೇಳಿದ್ರು.

ಇದನ್ನೂ ಓದಿ: ಇಂದು ಒಂದು ಕೋಟಿ ಮಂದಿಗೆ ವ್ಯಾಕ್ಸಿನೇಷನ್; ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ

ಇನ್ನು ಸಂಸ್ಕೃತ ಭಾಷೆಯ ಬಗ್ಗೆಯೂ ಉಲ್ಲೇಖಿಸಿದ ಪ್ರಧಾನಿ ಮೋದಿ ಸಂಸ್ಕೃತ ನಮ್ಮ ದೇಶದ ಸಾಂಸ್ಕೃತಿಕ ಬಂಧವನ್ನ ಗಟ್ಟಿಗೊಳಿಸಿದೆ ಎಂದರು. ಇನ್ನು ಇದೇ ವೇಳೆ ಖಾದಿ ಪ್ರಾಡಕ್ಟ್​ಗಳನ್ನ ಖರೀದಿಸುವ ಮೂಲಕ ನೇಯ್ಗೆಯವರ ನೆರವಿಗೆ ಬನ್ನಿ ಎಂದು ಕರೆಕೊಟ್ಟರು.

Source: newsfirstlive.com Source link