ಕಾಬೂಲ್​ನಲ್ಲಿ ಬಾಂಬ್​ ದಾಳಿ ನಡೆಸಿದ ISIS-K ಉಗ್ರ ಸಂಘಟನೆಯಲ್ಲಿ ಕೇರಳದ 14 ಮಂದಿ

ಕಾಬೂಲ್​ನಲ್ಲಿ ಬಾಂಬ್​ ದಾಳಿ ನಡೆಸಿದ ISIS-K ಉಗ್ರ ಸಂಘಟನೆಯಲ್ಲಿ ಕೇರಳದ 14 ಮಂದಿ

ಕಾಬೂಲ್ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ. 170ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಈ ದುರಂತಕ್ಕೆ ಕಾರಣವಾಗಿದ್ದು ಉಗ್ರ ಸಂಘಟನೆ ಐಎಸ್​ಐಎಸ್​-ಕೆ. ಈ ಸಂಘಟನೆಗೆ ಇತ್ತೀಚೆಗೆ ಬರೋಬ್ಬರಿ 14 ಮಂದಿ ಕೇರಳಿಗರು ಸೇರಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ತಾಲಿಬಾನಿಗಳಿಂದ ಮತ್ತೊಂದು ಪೈಶಾಚಿಕ ಕೃತ್ಯ; ಫೇಮಸ್ ಹಾಡುಗಾರನನ್ನ ಹತ್ಯೆಗೈದ ಪಾಪಿಗಳು

ಈ ಉಗ್ರ ಭಯೋತ್ಪಾದಕ ಸಂಘಟನೆಯಲ್ಲಿ ಹದಿನಾಲ್ಕು ಮಂದಿ ಕೇರಳಿಗರಿದ್ದು ಇವರು ಬಗ್ರಾಮ್ ಜೈಲಿನಲ್ಲಿದ್ದರು. ತಾಲಿಬಾನ್ ಜೈಲಿನಲ್ಲಿದ್ದ ಭಯೋತ್ಪಾದಕರು ಮತ್ತು ಉಗ್ರಗಾಮಿ ಸಂಘಟನೆಯಲ್ಲಿದ್ದವರನ್ನ ರಿಲೀಸ್ ಮಾಡಿದ್ದಾರೆ. ಅದ್ರಲ್ಲಿ 14 ಮಂದಿ ಕೇರಳದವರಿದ್ದು ಅಷ್ಟೂ ಮಂದಿ ಕಾಬೂಲ್​ನಲ್ಲಿದ್ದಾರೆ. ಈ 14 ಮಂದಿ ಪೈಕಿ ಓರ್ವ ಮಾತ್ರ ಕುಟುಂಬವನ್ನ ಸಂಪರ್ಕಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೇರಳದಲ್ಲಿರುವ ತಮ್ಮ ಕುಟುಂಬಸ್ಥರನ್ನು ಈತ ಸಂಪರ್ಕಿಸಿದ್ದ ಎನ್ನಲಾಗಿದೆ.

Source: newsfirstlive.com Source link