ಲಾಹೋರ್​​ನಲ್ಲಿ ವೈದ್ಯರಿಂದ ಪ್ರತಿಭಟನೆ; ಆಸಿಡ್​ ಸಿಡಿಸಿ ವಿಕೃತಿ ಮೆರೆದ ಪಾಕ್​ ಸೇನೆ

ಲಾಹೋರ್​​ನಲ್ಲಿ ವೈದ್ಯರಿಂದ ಪ್ರತಿಭಟನೆ; ಆಸಿಡ್​ ಸಿಡಿಸಿ ವಿಕೃತಿ ಮೆರೆದ ಪಾಕ್​ ಸೇನೆ

ಲಾಹೋರ್​​: ಪಾಕಿಸ್ತಾನದ ಲಾಹೋರ್​​ನಲ್ಲಿ ನ್ಯಾಷನಲ್ ಲೈಸೆನ್ಸಿಂಗ್ ಎಕ್ಸಾಂ ವಿರುದ್ಧ ಕಿರಿಯ ವೈದ್ಯರು ಪ್ರತಿಭಟನೆ ಮುಂದುವರಿಸಿದ್ದಾರೆ. ಪಾಕಿಸ್ತಾನ ಮೆಡಿಕಲ್​​ ಕಮೀಷನ್ ಕೂಡಲೇ ನ್ಯಾಷನಲ್ ಲೈಸೆನ್ಸಿಂಗ್ ಎಕ್ಸಾಂ (NLE) ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕಿರಿಯ ವೈದ್ಯರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಇನ್ನು, ಪ್ರತಿಭಟನೆಯನ್ನು ಹತ್ತಿಕ್ಕಲು ಪಾಕಿಸ್ತಾನ ಸೇನಾಧಿಕಾರಿಗಳು ಕಿರಿಯ ವೈದ್ಯರ ಮೇಲೆ ಸಲ್ಫರಿಕ್ ಆಸಿಡ್ ದಾಳಿ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ವಿದೇಶಗಳು ಉನ್ನತ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಲಿದೆ. ನಾವು ಈಗಾಗಲೇ ಎಂಬಿಬಿಎಸ್​​ ಪಾಸ್​​ ಮಾಡಿದ್ದೇವೆ. ಈಗ ಪಾಕಿಸ್ತಾನ ಮೆಡಿಕಲ್ ಕಮೀಷನ್ ನ್ಯಾಷನಲ್​​​ ಲೈಸೆನ್ಸಿಂಗ್ ಎಕ್ಸಾಂ (NLE) ಕಂಡಕ್ಟ್​ ಮಾಡಲು ಮುಂದಾಗಿದೆ. ಎರಡು ಪರೀಕ್ಷೆಗಳು ಒಟ್ಟಿಗೆ ನಡೆಯುವುದರಿಂದ ಕ್ಲ್ಯಾಶ್​​ ಆಗಲಿದೆ. ಹೀಗಾಗಿ ಕೂಡಲೇ NLE ರದ್ದುಗೊಳಿಸಿ ಎಂದು ಪರೀಕ್ಷಾ ಕೇಂದ್ರಗಳ ಮುಂದೆ ಕಿರಿಯ ವೈದ್ಯರು ಪ್ರತಿಭಟನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಶೀಲ ಶಂಕಿಸಿ ಭಯಾನಕ ವಿಕೃತಿ ಮೆರೆದ ಪತಿ; ಬೈಯಿರಿ ಆದ್ರೆ ಬಂಧಿಸಬೇಡಿ ಎಂದ ಪತ್ನಿ

ಶಾಂತಿಯುತವಾಗಿ ನಡೆಯುತ್ತಿರುವ ಪ್ರತಿಭಟನೆ ಹತ್ತಿಕ್ಕಲು ಪಾಕ್​ ಸೇನೆ ಹರಸಾಹಸ ಮಾಡುತ್ತಿದೆ. ಕಿರಿಯ ವೈದ್ಯರ ಮೇಲೆ ಸಲ್ಫರಿಕ್​​ ಆಸಿಡ್​​ ದಾಳಿ ಸಿಡಿಸಿ ಪಾಕ್​​ ಸೇನೆ ವಿಕೃತಿ ಮೆರೆದಿದೆ. ಜತೆಗೆ ಲಾಠಿ ಚಾರ್ಜ್​​ ಮತ್ತು ಅಶ್ರುವಾಯು ಪ್ರಯೋಗ ಮಾಡಲಾಗುತ್ತಿದೆ ಎಂದು ಪ್ರತಿಭಟನಾನಿರತ ಕಿರಿಯ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Source: newsfirstlive.com Source link