ಅತ್ಯಾಚಾರ ಕೇಸ್​​​​; ಒಬ್ಬ ಆರೋಪಿಗೆ ಇತ್ತು ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಚಟ

ಅತ್ಯಾಚಾರ ಕೇಸ್​​​​; ಒಬ್ಬ ಆರೋಪಿಗೆ ಇತ್ತು ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಚಟ

ಬೆಂಗಳೂರು: ಮೈಸೂರು ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತನಿಖಾಧಿಕಾರಿಗಳು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖಾಧಿಕಾರಿಗಳು ಆರೋಪಿಗಳ ವಿಚಾರಣೆ ಮುಂದುವರಿಸಿದ್ದು, ಅಚ್ಚರಿ ವಿಚಾರಗಳು ಬೆಳಕಿಗೆ ಬರುತ್ತಿವೆ. ಆರೋಪಿಗಳಲ್ಲಿ ಓರ್ವನಿಗೆ ಮಹಿಳೆಯರನ್ನ ಲೈಂಗಿಕವಾಗಿ ಬಳಸಿಕೊಳ್ಳುವ ಚಟ ಇತ್ತು ಎಂದು ತಿಳಿದು ಬಂದಿದೆ.

ಘಟನಾ ಸ್ಥಳದಲ್ಲಿ ಪ್ರತಿ ಬಾರಿ ರಾಬರಿ ಆರೋಪಿಗಳು ಮಾಡುತ್ತಿದ್ದರು. ಐವರಲ್ಲಿ ಓರ್ವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಇನ್ನುಳಿದವರು ಚಿನ್ನ, ಹಣಕ್ಕೆ ಆಸೆ ಬೀಳುತ್ತಿದ್ದರು ಎಂದು ಪೊಲೀಸ್​​ ತನಿಖೆ ವೇಳೆ ಬಯಲಾಗಿದೆ.

ತನಿಖೆ ವೇಳೆ ಪೊಲೀಸರಿಗೆ ಅಚ್ಚರಿಯ ಮಾಹಿತಿಗಳು ಸಿಕ್ಕಿವೆ. ಆಗಸ್ಟ್ 24ರಂದು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಎಲ್ಲಾ ಆರೋಪಿಗಳು ಈಗ ಜೈಲುಕಂಬಿ ಎಣಿಸುತ್ತಿದ್ದಾರೆ.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ; ‘ನನ್ನ ಮಗನ್ನ ಯಾಕೆ ಬಂಧಿಸಿದ್ರೋ ಗೊತ್ತಿಲ್ಲ’ ಎಂದು ಬಿಕ್ಕಿಬಿಕ್ಕಿ ಅತ್ತ ಆರೋಪಿ ತಾಯಿ

Source: newsfirstlive.com Source link