ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ಕೇವಲ ಪೋಟೋ ಫ್ರೆಂಡ್ಸ್- ಸಚಿವ ಶ್ರೀರಾಮುಲು

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ಕೇವಲ ಪೋಟೋ ಫ್ರೆಂಡ್ಸ್- ಸಚಿವ ಶ್ರೀರಾಮುಲು

ಧಾರವಾಡ: ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ಕೇವಲ ಪೋಟೋ ಫ್ರೆಂಡ್ಸ್, ಅವರು ದೆಹಲಿಗೆ ಹೋದಾಗ ಮಾತ್ರ ಒಂದಾಗಿರ್ತಾರೆ ಎಂದು ಸಾರಿಗೆ ಸಚಿವ ಸಚಿವ ಶ್ರೀರಾಮುಲು ಲೇವಡಿ ಮಾಡಿದ್ದಾರೆ.

blank

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಮತ್ತು ಡಿಕೆಎಸ್​ ನಡುವೆ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ ಇದೆ. ಅವರು ದೆಹಲಿಗೆ ಹೊದಾಗ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ ಮುಂದೆ ಮಾತ್ರ ಒಬ್ಬರಿಗೊಬ್ಬರು ಹೆಗಲ ಮೇಲೆ ಕೈ ಹಾಕಿಕೊಂಡಿರ್ತಾರೆ, ಹೊರಗಡೆ ಇಬ್ಬರ ಮಧ್ಯೆ ಸಿಎಂ ಸ್ಥಾನಕ್ಕಾಗಿ ಪೈಪೋಟಿ ಇದೆ. ಅವರು ಕೇವಲ ಪೋಟೋ ಫ್ರೇಂಡ್ಸ್​ ಎಂದಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಧೂಳಿಗೆ ನಮ್ಮ ಬಟ್ಟೆ ಬಣ್ಣವೇ ಚೇಂಜ್ ಆಗಿ ಹೋಗುತ್ತೆ- ಡಿ.ಕೆ. ಶಿವಕುಮಾರ್ ಹೀಗಂದಿದ್ದೇಕೆ..?

ಹು-ಧಾ ಪಾಲಿಕೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೆವೆ ಎಂದಿರುವ ಅವರು ಹುಬ್ಬಳ್ಳಿ ತಗ್ಗು-ಗುಂಡಿಗಳ ನಗರ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್​ ಅವರು ಕನಕಪುರದಿಂದ ಬಂದವ್ರು, ನಗರದಲ್ಲಿ ಪ್ರಹ್ಲಾದ್ ಜೋಶಿ, ಶೆಟ್ಟರ್ ಅಭಿವೃದ್ಧಿ ಮಾಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ‘ಸತ್ತರೆ ಉಚಿತವಾಗಿ ಶವ ಸಂಸ್ಕಾರ’: ಬಿಜೆಪಿ ಪ್ರಣಾಳಿಕೆ ಕಂಡು ಗಾಬರಿ ಬಿದ್ದ ಜನರು

Source: newsfirstlive.com Source link