ಅಮೆರಿಕಾದಲ್ಲಿ ಏರುತ್ತಿದೆ ಸಾವಿನ ಸಂಖ್ಯೆ..ಶವ ಸಾಗಿಸಲು ಟ್ರಕ್​ ನೀಡುವಂತೆ ಮನವಿ ಮಾಡಿದ ಒರೆಗಾನ್ ರಾಜ್ಯ

ಅಮೆರಿಕಾದಲ್ಲಿ ಏರುತ್ತಿದೆ ಸಾವಿನ ಸಂಖ್ಯೆ..ಶವ ಸಾಗಿಸಲು ಟ್ರಕ್​ ನೀಡುವಂತೆ ಮನವಿ ಮಾಡಿದ ಒರೆಗಾನ್ ರಾಜ್ಯ

ಅಮೆರಿಕಾ.. ವಿಶ್ವದ ದೊಡ್ಡಣ್ಣ.. ಇಡೀ ವಿಶ್ವದ ಉಸಾಬರಿ ಬೇಕು ಇದಕ್ಕೆ.. ಅದ್ರಲ್ಲೂ ಭಾರತದಲ್ಲಿ ಇಲಿ ಹೋದರೆ ಹುಲಿ ಹೋಯ್ತು ಅಂತಾ ಹಾವಳಿ ಎಬ್ಬಿಸುತ್ತವೆ ಅಲ್ಲಿನ ಮಾಧ್ಯಮಗಳು.. ಭಾರತದಲ್ಲಿ ಇದ್ದಕ್ಕಿದ್ದಂತೆ ಕೊರೊನಾ ಸೋಂಕು ಹೆಚ್ಚಾಗಿ ಕಂಡು ಕೇಳರಿಯದಂಥ ಪರಿಸ್ಥಿತಿ ನಿರ್ಮಾಣವಾದಾಗಲಂತೂ, ಅಮೆರಿಕದ ಮಾಧ್ಯಮಗಳು ಭಾರತ ಮುಳುಗಿಯೇ ಹೋಯ್ತು ಅನ್ನೋ ಮಟ್ಟದಲ್ಲಿ ಸುದ್ದಿ ಮಾಡಿದವು.. ಹಲವು ಸಂಪ್ರದಾಯಗಳನ್ನು ಒಳಗೊಂಡಿರುವ ಭಾರತದಲ್ಲಿ ಶವ ಸಂಸ್ಕಾರ ಕೂಡ ಒಂದು ನಿಯಮ. ಅದರ ಫೋಟೋಗಳನ್ನೇ ತಮ್ಮ ಮುಖಪುಟದಲ್ಲಿ ಪ್ರಕಟಿಸಿ ಭಾರತೀಯರ ಭಾವನೆಗಳೊಂದಿಗೆ ಅಮೆರಿಕಾ ಮಾಧ್ಯಮಗಳು ಆಟ ಆಡುತ್ತಿದ್ದವು. ಆದ್ರೀಗ.. ಅಮೆರಿಕಾದಲ್ಲೇ ಕೊರೊನಾ ಸಾವಿನ ಸಂಖ್ಯೆ ಮುಗಿಲು ಮುಟ್ಟಿದ್ದು, ಇಡೀ ದೇಶವೇ ಬೆಚ್ಚಿ ಬೀಳುವಂತಾಗಿದೆ.

blank

ಹೌದು.. ಜಗತ್ತಿನ ದೊಡ್ಡಣ್ಣ ಅಮೆರಿಕಾದಲ್ಲಿ ಕೋವಿಡ್ ಡೆಲ್ಟಾ ರೂಪಾಂತರದ ಆರ್ಭಟ ಮುಂದುವರೆದಿದೆ. ಕೋವಿಡ್ ಡೆಲ್ಟಾ ರೂಪಾಂತರವು ಸಮುದಾಯದಲ್ಲಿ ಹರಡುತ್ತಿದ್ದು, ಲಸಿಕೆ ಪಡೆಯದೆ ಇದ್ದವರಲ್ಲಿ ಕಾಳ್ಗಿಚ್ಚಿನಂತೆ ಹರಡಿ ಸಾವುಗಳ ಸಂಖ್ಯೆ ಮಿಂಚಿನ ಗತಿಯಲ್ಲೇರುತ್ತಿವೆ.14 ದಿನಗಳಲ್ಲಿ ಸೋಂಕಿನ ಪ್ರಮಾಣ ಶೇ.21% ಏರಿಕೆಯಾಗಿದ್ದು, ದಿನವೊಂದರ ಸಾವಿನ ಪ್ರಮಾಣ- 1,266 ಮಂದಿ.

ಒಂದೆಡೆ ಕೊರೊನಾ ಸೋಂಕಿನ ಅಬ್ಬರಕ್ಕೆ ಅಮೆರಿಕಾ ತತ್ತರಿಸಿ ಹೋಗಿದ್ರೆ, ಒರೆಗಾನ್ ​ ರಾಜ್ಯ ಮೃತ ದೇಹಗಳನ್ನು ಸಾಗಿಸಲು ಶೈತ್ಯಾಗಾರದ ಟ್ರಕ್​ಗಳನ್ನು ನೀಡುವಂತೆ ವಿನಂತಿ ಮಾಡಿಕೊಂಡಿದೆ.

ಅಮೆರಿಕಾದ ಒರೆಗಾನ್ ರಾಜ್ಯದಲ್ಲಿ ಕೋವಿಡ್ ನಿಂದ ಸಾವಿನ ಸಂಖ್ಯೆ ಏರುತ್ತಿದ್ದು, ಮೃತ ದೇಹಗಳನ್ನು ಸಾಗಿಸಲು ಶೈತ್ಯಾಗಾರ ಟ್ರಕ್ ವಿತರಣೆಯನ್ನು ಆರಂಭಿಸಲಾಗಿದೆ. ಈಗಾಗಲೇ ಒಂದು ಟ್ರಕ್​ ಕಾರ್ಯಾಚರಣೆಯಲ್ಲಿದ್ದು ಇನ್ನೊಂದು ಟ್ರಕ್​ನ್ನು ಕಳುಹಿಸಲಾಗುತ್ತಿದೆ ಎಂದು ರಾಜ್ಯ ತುರ್ತು ನಿರ್ವಹಣಾ ವಿಭಾಗ ತಿಳಿಸಿದೆ.

ಇದನ್ನೂ ಓದಿ: ಉಗ್ರರ ಆತ್ಮಾಹುತಿ ದಾಳಿಗೆ ಅಮೆರಿಕ ಪ್ರತೀಕಾರ; ಏರ್​​ಸ್ಟ್ರೈಕ್ ಮೂಲಕ ಸೇಡು ತೀರಿಸಿಕೊಂಡ ದೊಡ್ಡಣ್ಣ

ಕೊರೊನಾ ಅಬ್ಬರಕ್ಕೆ ಅಮೆರಿಕಾದ ಹಲವೆಡೆ ICU ಗಳು ತುಂಬಿ ತುಳುಕುತ್ತಿದ್ದು, ಹಾಸಿಗೆ ಸಿಗದೆ ರೋಗಿಗಳು ಪರದಾಡೋ ಸ್ಥಿತಿ ನಿರ್ಮಾಣವಾಗಿದೆ. ಒಂದೇ ದಿನದಲ್ಲಿ 1,55,365 ಹೊಸ ಪ್ರಕರಣ ಪತ್ತೆಯಾಗಿದ್ದು, ಕೊರೊನಾ ಕೇಕೆ ಹಾಕುತ್ತಿದೆ. ಇದರಿಂದ ಇತರೆ ರೋಗಿಗಳ ಚಿಕಿತ್ಸೆಗೂ ಪರದಾಟ ಶುರುವಾಗಿದೆ. 98,337 ಮಂದಿ ಒಂದೇ ದಿನ ಆಸ್ಪತ್ರೆಗೆ ದಾಖಲಾಗಿದ್ದು, ಶೇಕಡ 84%ರಷ್ಟು ICU ಗಳು ಭರ್ತಿಯಾಗಿವೆ. ಈ ನಡುವೆ ಟಿಲ್ಲಮೂಕ್ ಕೌಂಟಿ ಆಯುಕ್ತರ ಮಂಡಳಿ ಕೋವಿಡ್ ಹರಡುವಿಕೆಯು “ನಿರ್ಣಾಯಕ ಹಂತವನ್ನು ತಲುಪಿದೆ” ಎಂದು ಹೇಳಿ ಆತಂಕ ಸೃಷ್ಟಿಸಿದೆ.

  • ಸೋಂಕು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಅಮೆರಿಕ ಮತ್ತಷ್ಟು ಕಠಿಣ ಕ್ರಮ ಜಾರಿಗೆ ಮುಂದಾಗಿದೆ.
  • ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯ ಮಾಸ್ಕ್​ ಬಳಕೆ & ಸಾಮಾಜಿಕ ಅಂತರ
  • ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಕೋವಿಡ್​ ನಿಯಮಗಳ ಪಾಲನೆ
  • ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳಿಗೆ ಆನ್​ಲೈನ್​ ತರಗತಿಗೆ ಕ್ರಮ
  • ಪ್ರತಿಯೊಬ್ಬರು ಕಡ್ಡಾಯವಾಗಿ ಕೋವಿಡ್​ ಲಸಿಕೆ ಪಡೆಯುವುದು
  • ಹೊರಭಾಗದಿಂದ ಬರುವವರಿಗೆ ಕಡ್ಡಾಯವಾಗಿ ಲಸಿಕೆ ಹಾಗೂ ತಪಾಸಣೆ

Source: newsfirstlive.com Source link