ಅಮೆರಿಕದಲ್ಲಿ ಮುಗಿಲು ಮುಟ್ಟಿದ ಕೊರೊನಾ ಸಾವಿನ ಸಂಖ್ಯೆ; ಮೃತದೇಹ ಇಡಲು ಟ್ರಕ್​ಗಳಿಗೆ ಮೊರೆ

ಅಮೆರಿಕದಲ್ಲಿ ಮುಗಿಲು ಮುಟ್ಟಿದ ಕೊರೊನಾ ಸಾವಿನ ಸಂಖ್ಯೆ; ಮೃತದೇಹ ಇಡಲು ಟ್ರಕ್​ಗಳಿಗೆ ಮೊರೆ

ಅಮೆರಿಕಾದ ಒರೆಗಾನ್ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಉತ್ತುಂಗಕ್ಕೇರಿದೆ. ಈ ಹಿನ್ನೆಲೆ ಸಾವನ್ನಪ್ಪಿದವರ ಮೃತದೇಹಗಳನ್ನ ಸಾಗಿಸಲು ಟ್ರಕ್​ಗಳಿಗಾಗಿ ಮನವಿ ಮಾಡಿದೆ.

ಇದನ್ನೂ ಓದಿ: ಅಫ್ಘಾನ್ ತೊರೆದು​ ಬೆಲ್ಜಿಯಂಗೆ ಬಂದಿಳಿದ ಪುಟ್ಟ ಮಗುವಿನ ಸಂಭ್ರಮಕ್ಕೆ ಜಗತ್ತು ಫಿದಾ..!

ಒರೆಗಾನ್ ರಾಜ್ಯದ ಕೆಲವು ರಾಜ್ಯಗಳಲ್ಲಿ ಸೋಂಕು ಹೆಚ್ಚಿದ ಹಿನ್ನೆಲೆ ಸಾವನ್ನಪ್ಪುತ್ತಿರುವ ಸಂಖ್ಯೆ ಭಾರೀ ಏರಿಕೆ ಕಂಡಿದೆ. ಈ ಹಿನ್ನೆಲೆ ರಾಜ್ಯ ಈಗಾಗಲೇ ಕೆಲವು ರೆಫ್ರಿಜರೇಟರಡ್ ಟ್ರಕ್​ಗಳನ್ನ ಮೃತದೇಹಗಳನ್ನ ಸಾಗಿಸಲು ಬಳಸುತ್ತಿದೆ ಎಂದು ಅಲ್ಲಿ ವಿಪತ್ತು ನಿರ್ವಹಣಾ ಇಲಾಖೆ ಹೇಳಿದೆ.

ಇದನ್ನೂ ಓದಿ: ಅಮೆರಿಕ ಪಾಲಿಗೆ ಕೆಲವು ದಿನಗಳು ‘ಮೋಸ್ಟ್ ಡೇಂಜರಸ್’, ಮತ್ತೊಂದು ಕಾಬೂಲ್ ದಾಳಿ ಸಾಧ್ಯತೆ

ಇಲ್ಲಿವರೆಗೆ ಟಿಲ್ಲಮೂಕ್ ಕೌಂಟಿ, ಜೋಸೆಫೈನ್ ಕೌಂಟಿಗಳು ಟ್ರಕ್​ಗಳಿಗಗಾಗಿ ಮನವಿ ಮಾಡಿವೆ ಎಂದು ವಿಪತ್ತು ನಿರ್ವಹಣಾ ಇಲಾಖೆಯ ವಕ್ತಾರ ಹೇಳಿಕೆ ನೀಡಿದ್ದಾರೆ. ಒರೆಗಾನ್​ನಾದ್ಯಂತ ವ್ಯಾಕ್ಸಿನ್ ಪಡೆಯದಿದ್ದವರಲ್ಲಿ ಡೆಲ್ಟಾ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಪರಿಣಾಮ ಇಂಥ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಟಿಲ್ಲಮೂಕ್ ಕೌಂಟಿಯ ಬೋರ್ಡ್ ಆಫ್ ಕಮಿಷನ್ ಕೊರೊನಾ ಸೋಂಕು ಕ್ರಿಟಿಕಲ್ ಹಂತಕ್ಕೆ ತಲುಪಿದೆ ಎಂದಿದ್ದಾರೆ.

Source: newsfirstlive.com Source link