ನಂದಿಬೆಟ್ಟದ ಬಳಿ ಮತ್ತೆ ಭೂಕುಸಿತ – ತಾತ್ಕಾಲಿಕ ರಸ್ತೆಯೂ ಸಂಪೂರ್ಣ ಬಂದ್

-ರಸ್ತೆ ನಿರ್ಮಾಣ ಆಗೋದು 2 ತಿಂಗಳು ಆಗಬಹುದು
-ಪ್ರವಾಸಿಗರ ಪಾಲಿಗೆ ದೂರವಾಗಲಿದೆ ನಂದಿಬೆಟ್ಟ

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದ ಬಳಿ ಭೂಕುಸಿತ ಪ್ರಕರಣ ಸಂಬಂಧ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದ್ದ ರಸ್ತೆಯೂ ಕೊಚ್ಚಿ ಹೋದ ಪರಿಣಾಮ ಇಂದಿನಿಂದ ತಾತ್ಕಾಲಿಕ ರಸ್ತೆಯೂ ಸಂಪೂರ್ಣ ಬಂದ್ ಮಾಡಲಾಗಿದೆ.

ಪರಿಣಾಮ ಇಂದಿನಿಂದ ನಂದಿಬೆಟ್ಟಕ್ಕೆ ವಾಹನಗಳ ಸಂಚಾರ ಕಂಪ್ಲೀಟ್ ಬಂದ್ ಆಗಿದೆ. ತಾತ್ಕಾಲಿಕ ರಸ್ತೆ ಮೂಲಕ ನಂದಿಬೆಟ್ಟದ ಮೇಲ್ಭಾಗದ ಹೋಟೆಲ್, ವಸತಿ ಗೃಹಗಳ ಸಿಬ್ಬಂದಿ ಸೇರಿದಂತೆ ಇತರೆ ಸಿಬ್ಬಂದಿ ಒಡಾಡಲು ಭೂಕುಸಿತ ಆದ ದಿನವೇ ಅದೇ ಸ್ಥಳದಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಗಿತ್ತು. ಆದರೆ ಈಗ ಆ ತಾತ್ಕಾಲಿಕ ರಸ್ತೆ ಹಾಗೂ ಮತ್ತಷ್ಟು ಡಾಂಬರು ರಸ್ತೆ ಕುಸಿತ ಆಗಿರುವುದರಿಂದ ಸಂಪೂರ್ಣವಾಗಿ ಇಂದಿನಿಂದ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ. ಇದನ್ನೂ ಓದಿ:ಕೃಷ್ಣಾ ಜನ್ಮಾಷ್ಟಮಿಗೆ ಮಾಡಿ ಡ್ರೈ ಫ್ರೂಟ್ಸ್ ಲಡ್ಡು

nandi hills

ಶಾಶ್ವತವಾಗಿ ಸೇತುವೆ ನಿರ್ಮಾಣ ಮಾಡುವ ಸಲುವಾಗಿ ಹಿಟಾಚಿ ಯಂತ್ರದಿಂದ ಮಣ್ಣು ತೆರವು ಕಾರ್ಯಾಚರಣೆಯನ್ನು ಲೋಕೋಪಯೋಗಿ ಇಲಾಖಾಧಿಕಾರಿಗಳು ಕೈಗೊಂಡಿದ್ದಾರೆ. ಸದ್ಯ ಈ ಶಾಶ್ವತ ಸೇತುವೆ ನಿರ್ಮಾಣ ಕಾರ್ಯ ಕೇವಲ 20 ದಿನಗಳಲ್ಲಿ ಮುಗಿಯುವುದಿಲ್ಲ. ಬದಲಾಗಿ ಇದು 2 ತಿಂಗಳಿಗಿಂತ ಹೆಚ್ಚಿನ ದಿನಗಳಾಗಬಹುದು. ಹೀಗಾಗಿ ಶಾಶ್ವತ ರಸ್ತೆ ನಿರ್ಮಾಣ ಕಾಮಗಾರಿ ಆಗುವವರೆಗೆ ನಂದಿಗಿರಿಧಾಮ ಪ್ರವಾಸಿಗರಿಗೆ ಪಾಲಿಗೆ ದೂರವಾಗಲಿದೆ. ಇದನ್ನೂ ಓದಿ:ಉಡುಪಿಯ ರೈತರಿಗೆ ನೆಮ್ಮದಿ ತಂದ ಮಳೆರಾಯ

Source: publictv.in Source link