ಅವಶ್ಯಕತೆ ಬಿದ್ದರೆ ಅವರದ್ದೇ ನೆಲಕ್ಕೆ ನುಗ್ಗಿ ಉಗ್ರವಾದಿಗಳನ್ನ ಮಟ್ಟ ಹಾಕುತ್ತೇವೆ- ರಾಜನಾಥ್ ಸಿಂಗ್

ಅವಶ್ಯಕತೆ ಬಿದ್ದರೆ ಅವರದ್ದೇ ನೆಲಕ್ಕೆ ನುಗ್ಗಿ ಉಗ್ರವಾದಿಗಳನ್ನ ಮಟ್ಟ ಹಾಕುತ್ತೇವೆ- ರಾಜನಾಥ್ ಸಿಂಗ್

ನವದೆಹಲಿ: ತಮಿಳುನಾಡಿನಲ್ಲಿ ರಕ್ಷಣಾ ಸೇವೆಯ ಸಿಬ್ಬಂದಿ ಕಾಲೇಜನ್ನು ಉದ್ದೇಶಿಸಿ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಮಾತನಾಡಿದರು. ಈ ವೇಳೆ ವೈರಿ ದೇಶಗಳ ಒಳಗೆ ನುಗ್ಗಿ ಹೊಡೆಯುವುದಕ್ಕೂ ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ಎರಡು ಯುದ್ಧಗಳನ್ನ ಸೋತ ನಂತರ ನಮ್ಮ ನೆರೆಹೊರೆಯ ದೇಶಗಳು ಪ್ರಾಕ್ಸಿ ಯುದ್ಧ ಮತ್ತು ಭಯೋತ್ಪಾದಕತೆಯನ್ನು ಪುನರ್ ಸ್ಥಾಪಿಸುತ್ತಿದೆ. ಅವು ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ, ಹಣಕಾಸು ಮತ್ತು ಟ್ರೈನಿಂಗ್ ನೀಡುವ ಮೂಲಕ ಭಾರತವನ್ನು ಟಾರ್ಗೆಟ್ ಮಾಡುತ್ತಿವೆ.

ಇದನ್ನೂ ಓದಿ: ಕಾಬೂಲ್ ಬ್ಲಾಸ್ಟ್​ನಲ್ಲಿ ಅಮೆರಿಕನ್ನರ ಸಾವು; ಈಗ್ಲಾದರೂ ಎಚ್ಚರಗೊಳ್ಳುತ್ತಾರಾ ಅಮೆರಿಕ ಅಧ್ಯಕ್ಷ..?

ಇದೇ ರೀತಿ ಉತ್ತರ ವಲಯದಲ್ಲೂ ಸಹ ಕಳೆದ ವರ್ಷ ಬಾರ್ಡರ್​ನ ಸ್ಟೇಟಸ್ ಕೋ ಉಲ್ಲಂಘಿಸುವ ಪ್ರಯತ್ನಗಳು ನಡೆದಿದ್ದವು. ಅಲ್ಲಿಯೂ ಕೂಡ ನಾವು ಧೈರ್ಯದಿಂದ ಹೋರಾಡಿದ್ದೇವೆ.

ಇದನ್ನೂ ಓದಿ: ‘ದೊಡ್ಡಣ್ಣ’ ಅನ್ನೋ ಬ್ರಾಂಡ್​ ವ್ಯಾಲ್ಯೂ ಮಣ್ಣುಪಾಲು ಮಾಡಿದ ತಾಲಿಬಾನ್..!

ಭಾರತದ ಗಡಿಯಲ್ಲಿ ಸಾಕಷ್ಟು ಸವಾಲುಗಳು ಇದ್ದರೂ ಭಾರತದ ರಾಷ್ಟ್ರೀಯ ಭದ್ರತೆ ಸುರಕ್ಷಿತವಾಗಿದೆ ಅನ್ನೋದರ ಬಗ್ಗೆ ಯಾವ ಸಾಮಾನ್ಯ ಭಾರತೀಯನಿಗೂ ಸಂಶಯವಿಲ್ಲ. ಈ ವಿಶ್ವಾಸ ಸಾವಕಾಶವಾಗಿ ಮತ್ತಷ್ಟು ಗಟ್ಟಿಯಾಗುತ್ತಾ ಹೋಗುತ್ತಿದೆ.. ಭಾರತ ತನ್ನ ಗಡಿಯಲ್ಲಿನ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕಿಯೇ ಹಾಕುತ್ತೆ.. ಜೊತೆಗೆ ಅವಶ್ಯಕತೆ ಬಿದ್ದಾಗ ಅವರ ನೆಲಕ್ಕೂ ಹೋಗಿ ಉಗ್ರವಾದಿಗಳನ್ನು ಮಟ್ಟಹಾಕುವುದರ ಬಗ್ಗೆಯೂ ಜನರಿಗೆ ಸಂಶಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

Source: newsfirstlive.com Source link