ಸೈಲೆಂಟಾಗಿ ಮತ್ತೆ ಆ್ಯಕ್ಟೀವ್ ಆದ ​‘ಬ್ಯಾಡ್​ ಮ್ಯಾನರ್ಸ್​’..!

ಸೈಲೆಂಟಾಗಿ ಮತ್ತೆ ಆ್ಯಕ್ಟೀವ್ ಆದ ​‘ಬ್ಯಾಡ್​ ಮ್ಯಾನರ್ಸ್​’..!

‘ಬ್ಯಾಡ್​ ಮ್ಯಾನರ್ಸ್​’.. ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಸುಕ್ಕಾ ಸೂರಿ ಹಾಗೂ ಯಂಗ್​ ರೆಬೆಲ್​ ಸ್ಟಾರ್​ ಅಭಿಷೇಕ್​ ಅಂಬರೀಶ್​ ಕಾಂಬೋ ಒಂದಾಗ್ತಿದಂತೆ, ‘ಬ್ಯಾಡ್​ ಮ್ಯಾನರ್ಸ್​’ ಚಿತ್ರದ ಮೇಲಿನ ಕ್ರೇಜ್​ಗೇನು ಕೊರತೆ ಇಲ್ಲ.. ಸೂರಿ ಅವರ ಪ್ಲಾನ್​ ಅಂತೆ ಎಲ್ಲಾ ಆಗಿದ್ರೆ ಇಷ್ಟೋತ್ತಿಗೆ ‘ಬ್ಯಾಡ್​ ಮ್ಯಾನರ್ಸ್​’ಸಿನಿಮಾ ಶೂಟಿಂಗ್ ಮುಗಿಸಿ. ಟೀಸರ್​ ಇಲ್ಲ ಟ್ರೈಲರ್​ ಲಾಂಚ್ ಮಾಡ್ತಿದ್ರು.. ಅದ್ರೆ ಕಿಲ್ಲರ್​ ಕೊರೊನಾ ಈ ಎಲ್ಲಾ ಸಂಭ್ರಮಕ್ಕೂ ಬ್ರೇಕ್​ ಹಾಕಿದೆ.. ಇದರ ನಡುವೆ ಸೈಲೆಟ್ ಆಗಿ ಸೂರಿ ಮತ್ತೆ ‘‘ಬ್ಯಾಡ್​ ಮ್ಯಾನರ್ಸ್​’ ಟೀಂ ಜೊತೆ ಕಾಣಿಸಿದ್ದಾರೆ..

blank

ಜೂನಿಯರ್​ ಜಲೀಲ್​ ಅಭಿಷೇಕ್​ ಅಂಬರೀಶ್​ ತನ್ನ ಅಪ್ಪನ ಆಸೆಯಂತೆ ಮೊದಲನೇ ಚಿತ್ರ ಅಮರ್​ ಸಿನಿಮಾದಲ್ಲಿ ಲವರ್​ ಬಾಯ್​ ಆಗಿ ಮಿಂಚಿದ್ರು.. ತನ್ನ ಅಪ್ಪನ ಆಸೆ ಈಡೇರಿಸಿದ ಅಭಿ, ಮಾಸ್​ ಹೀರೋ ಆಗಿ ಕಾಣಿಸಬೇಕೆಂಬ ತನ್ನ ಆಸೆಯನ್ನು ಬ್ಯಾಡ್​ ಮ್ಯಾನರ್ಸ್​ ಚಿತ್ರದ ಮೂಲಕ ಈಡೇರಿಸಿ ಕೊಳ್ಳಲು ಹೊರಟಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಈಗ ಬಾಲಿವುಡ್​ಗೂ ಕ್ರಷ್; ‘ಮಿಷನ್ ಮಜ್ನು’ ಶೂಟಿಂಗ್​ ಕಂಪ್ಲೀಟ್​​..

ಎರಡನೇ ಚಿತ್ರಕ್ಕೆ ಅಳೆದು ತೂಗಿ ನಿರ್ದೇಶಕರ ಆಯ್ಕೆ ಮಾಡಿಕೊಂಡಿರುವ ಅಭಿ, ಸೈಲೆಂಟ್​ ಆಗಿ ಸುಕ್ಕಾ ಸೂರಿ ಜೊತೆ ಹೆಜ್ಜೆ ಹಾಕಿದ್ದಾರೆ. ಅಷ್ಟೇ ಅಲ್ಲಾ ಅಭಿ ‘ಬ್ಯಾಡ್ ‌ಮ್ಯಾನರ್ಸ್‌’ ಚಿತ್ರಕ್ಕಾಗಿ ನಿರ್ದೇಶಕ ಸೂರಿಗೆ ಸಂಪೂರ್ಣವಾಗಿ ಶರಣಾಗಿದ್ದಾರೆ. ಚಿತ್ರಕ್ಕಾಗಿ ದೇಹವನ್ನು ಹುರಿ ಗೊಳಿಸಿ, ಪೊಲೀಸ್​ ಪಾತ್ರಕ್ಕೆ ತಕ್ಕಂತೆ ಫಿಟ್​ ಆಗಿ ‘ಬ್ಯಾಡ್ ‌ಮ್ಯಾನರ್ಸ್‌’ ಟೀಂ ಜೊತೆ ಶೂಟಿಂಗ್​ ಆಖಾಡಕ್ಕೆ ಇಳಿದಿದ್ರು. ಆದ್ರೆ ಕಿಲ್ಲರ್​ ಕೊರೊನಾ ‘ಬ್ಯಾಡ್​​ ಮ್ಯಾನರ್ಸ್’ ಚಿತ್ರಕ್ಕೆ ಬ್ರೇಕ್​ ಹಾಕಿತ್ತು.

blank

ಕೊರೊನಾ 2ನೇ ಅಲೆಯ ಅರ್ಭಟಕ್ಕೆ ಸೈಲೆಂಟ್​ ಆಗಿದ್ದ ‘ಬ್ಯಾಡ್ ‌ಮ್ಯಾನರ್ಸ್‌’ ಚಿತ್ರತಂಡ ಈಗ ಮತ್ತೆ ಸೈಲೆಂಟ್​ ಆಗಿ ಆಕ್ಟೀವ್​ ಮೂಡ್​ಗೆ ಬಂದಿದೆ. ಕಳೆದ ಒಂದು ವರ್ಷದಲ್ಲಿ ಕೇವಲ 2 ಶೆಡ್ಯೂಲ್​ ಶೂಟಿಂಗ್​ ಮುಗಿಸಿರುವ ನಿರ್ದೇಶಕ ಸೂರಿ ಈಗ ಸದ್ದಿಲ್ಲದೇ 3ನೇ ಶೆಡ್ಯೂಲ್​ಗೆ ಪ್ಲಾನ್​ ಮಾಡ್ತಿದ್ದಾರೆ.

ಕಳೆದ ಐದಾರು ತಿಂಗಳಿನಿಂದ ಮನೆ ಸೇರಿದ್ದ ಸುಕ್ಕಾ ಸೂರಿ, ನಿನ್ನೆಯಷ್ಟೇ ನಿರ್ಮಾಪಕ ಸುಧೀರ್‌ ಹಾಗೂ ಡೈಲಾಗ್​ ರೈಟರ್​ ಮಾಸ್ತಿ ಜೊತೆಗೂಡಿ ಯಂಗ್​ ರೆಬಲ್​ ಮನೆಗೆ ಹೋಗಿದ್ದಾರೆ. ಈ ವೇಳೆ ಸೂರಿ 3ನೇ ಶೆಡ್ಯೂಲ್​ ಬಗ್ಗೆ ಮಾತುಕತೆ ಮುಗಿಸಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಶೂಟಿಂಗ್​ ಅಖಾಡಕ್ಕೆ ಇಳಿಯಲು ಪ್ಲಾನ್ ಮಾಡ್ತಿದ್ದಾರೆ ಎಂಬ ಮಾಹಿತಿ ಚಿತ್ರಪ್ರೇಮಿಗಳೆ ತಂಡಕ್ಕೆ ಲಭ್ಯವಾಗಿದೆ. ಮೊದಲ ಎರಡು ಹಂತದ ಶೂಟಿಂಗ್​ ಅನ್ನು ಮೈಸೂರು ಮಂಡ್ಯ ಸುತ್ತ ಮುತ್ತ ಚಿತ್ರೀಕರಣ ಮಾಡಿದ್ದ ಸೂರಿ 3ನೇ ಹಂತದ ಶೂಟಿಂಗ್​ಗೆ ಯಾವ ಲೊಕೇಶನ್ ಆಯ್ಕೆ ಮಾಡಿದ್ದಾರೆ ಎಂಬುದು ಗೌಪ್ಯವಾಗಿದ್ದು ಮುಂದಿನ ವಾರದಲ್ಲಿ ಸೂರಿ ಇದರ ಬಗ್ಗೆ ಮಾಹಿತಿ ಹಂಚಿ ಕೊಳ್ಳಲಿದ್ದಾರೆ.

ಇದನ್ನೂ ಓದಿ: ಜಿಮ್​​ನಲ್ಲಿ ಒಟ್ಟಿಗೇ ವರ್ಕೌಟ್​ ಮಾಡಿದ ರಶ್ಮಿಕಾ ಮಂದಣ್ಣ, ದೇವರಕೊಂಡ

blank

ಲಾಕ್​ ಡೌನ್​ನಲ್ಲಿ ವರ್ಕ್​ಔಟ್​ ಇಲ್ಲದೆ ಕೊಂಚ ದಪ್ಪ ಆಗಿರುವ ಅಭಿ ಈಗ ಮತ್ತೆ ಜಿಮ್​ನಲ್ಲಿ ಬೆವರು ಹರಿಸ್ತಿದ್ದ್ದು, ಪಾತ್ರಕ್ಕೆ ತಕ್ಕಂತೆ ಫಿಟ್​ ಆಗ್ತಿದಂತೆ , ಪೊಲೀಸ್​ ಪಾತ್ರಧಾರಿಯಾಗಿ ಅಭಿ ಸೂರಿ ಗರಡಿ ಸೇರಲಿದ್ದಾರೆ. ಇನ್ನು ‘ಬ್ಯಾಡ್ ‌ಮ್ಯಾನರ್ಸ್‌’ ಚಿತ್ರದ ಇಬ್ಬರು ನಾಯಕಿಯರಿದ್ದು, ರಚಿತಾ ರಾಮ್ ಮತ್ತು ಮೈಸೂರಿನ ಬೆಡಗಿ ಪ್ರಿಯಾಂಕಾ ಕುಮಾರ್ ಬ್ಯಾಡ್​ ಮ್ಯಾನರ್ಸ್ ಚಿತ್ರದ ಮೂಲಕ ಸ್ಯಾಂಡಲ್​ವುಡ್​ ಎಂಟ್ರಿಕೊಟ್ಟಿದ್ದಾರೆ.

Source: newsfirstlive.com Source link