ಸತತ 12 ಗಂಟೆಗಳ ವಿಚಾರಣೆ ಬಳಿಕ ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಅರೆಸ್ಟ್..!

ಸತತ 12 ಗಂಟೆಗಳ ವಿಚಾರಣೆ ಬಳಿಕ ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಅರೆಸ್ಟ್..!

ಮುಂಬೈ: ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಅವರನ್ನ ನಾರ್ಕೊಟಿಕ್ಸ್​ ಕಂಟ್ರೋಲ್ ಬ್ಯೂರೋ (ಎನ್​ಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ. ಡ್ರಗ್ಸ್​ ಪ್ರಕರಣದಲ್ಲಿ ಬರೋಬ್ಬರಿ 12 ಗಂಟೆಗಳ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು ಅವರನ್ನ ಬಂಧಿಸಿದ್ದಾರೆ ಅಂತಾ ವರದಿಯಾಗಿದೆ.

ಅರ್ಮಾನ್ ಅವರನ್ನ ಇಂದೇ ಎನ್​ಸಿಬಿ ಅಧಿಕಾರಿಗಳು ಕೋರ್ಟ್​ಗೆ ಹಾಜರುಪಡಿಸುವ ಸಾಧ್ಯತೆ ಇದೆ. ನಿನ್ನೆ ಅವರ ನಿವಾಸದ ಮೇಲೆ ತನಿಖಾಧಿಕಾರಿಗಳು ದಾಳಿ ನಡೆಸಿದ್ದರು. ಮುಂಬೈನ ನಿವಾಸದ ಮೇಲೆ ದಾಳಿ ಮಾಡಿದಾಗ ಡ್ರಗ್ಸ್​​ಗಳು ಪತ್ತೆಯಾಗಿದ್ದವು.

ಹೀಗಾಗಿ ತನಿಖಾಧಿಕಾರಿಗಳು ಅರ್ಮಾನ್ ಅವರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಡ್ರಗ್ಸ್​ ಪ್ರಕರಣದಲ್ಲಿ ಭಾಗಿಯಾಗಿರೋದಕ್ಕೆ ಸಾಕ್ಷಿ ಸಿಕ್ಕ ಬೆನ್ನಲ್ಲೇ ಹೆಚ್ಚಿನ ವಿಚಾರಣೆಗಾಗಿ ಅವರನ್ನ ಬಂಧಿಸಲಾಗಿದೆ. ಎನ್​ಸಿಬಿ ಮುಂಬೈ ವಲಯದ ನಿರ್ದೇಶಕ ಸಮೀರ್ ವಾಂಖೇಡೇ ನೇತೃತ್ವದಲ್ಲಿ ದಾಳಿ ನಡೆದಿತ್ತು.

Source: newsfirstlive.com Source link