ಸಾಮಾನ್ಯರಿಗೊಂದು ರಾಜಕಾರಣಿಗಳಿಗೊಂದು ನ್ಯಾಯ! ಕೊರೊನಾ ರೂಲ್ಸ್​ ಗಾಳಿ ತೂರಿ ಕಾಂಗ್ರೆಸ್ ಸಭೆ

ಸಾಮಾನ್ಯರಿಗೊಂದು ರಾಜಕಾರಣಿಗಳಿಗೊಂದು ನ್ಯಾಯ! ಕೊರೊನಾ ರೂಲ್ಸ್​ ಗಾಳಿ ತೂರಿ ಕಾಂಗ್ರೆಸ್ ಸಭೆ

ಮಂಡ್ಯ: ದೇಶಾದ್ಯಂತ ಮಹಾಮಾರಿ ಕೊರೊನಾ ಮೂರನೇ ಅಲೆ ಭೀತಿ ಸೃಷ್ಟಿಯಾಗಿದೆ. ಈ ಮಧ್ಯೆ ಕೊರೊನಾ ಸೋಂಕು ನಿಯಂತ್ರಣಕ್ಕೆ ತರಲು ಮಂಡ್ಯದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಆದರೆ, ಈ ಕೊರೊನಾ ರೂಲ್ಸ್​ ಸಾಮಾನ್ಯರಿಗೊಂದು ನ್ಯಾಯ, ರಾಜಕಾರಣಿಗಳಿಗೊಂದು ನ್ಯಾಯ ಎಂಬತಾಗಿದೆ.

ಹೌದು, ಸಾರ್ವಜನಿಕರಿಗೆ ಜಾಗೃತಿ ಮೂಡಸಬೇಕಾದ ರಾಜಕಾರಣಿಗಳೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಅಂದು ಬಿಜೆಪಿಗರು ಸಭೆ ಮಾಡಿ‌ ಕೊರೊನಾ ರೂಲ್ಸ್​ ಬ್ರೇಕ್​​ ಮಾಡಿದರು. ಇಂದು ಕಾಂಗ್ರೆಸ್​​ ರಾಜಕೀಯ ಸಭೆ ನಡೆಸಿ ಕೊರೊನಾ ನಿಯಮ ಉಲ್ಲಂಘಿಸಿದೆ.​

ನೂರಾರು ಜನರನ್ನು ಸೇರಿಸಿಕೊಂಡು ರಾಜಕಾರಣಿಗಳು ರಾಜ್ಯ ಕಾಂಗ್ರೆಸ್​ ಕಾರ್ಯಕಾರಣಿ ಸಭೆ ನಡೆಸುತ್ತಿದ್ದಾರೆ. ಮಂಡ್ಯದ ಬಂದೀಗೌಡ ಬಡವಾಣೆಯಲ್ಲಿ ಈ ಸಭೆ ನಡೆಯುತ್ತಿದೆ. 144 ಸೆಕ್ಷನ್ ಜಾರಿಯಲ್ಲಿದ್ದರೂ ರಸ್ತೆಯಲ್ಲಿ ಪೆಂಡಾಲ್ ಹಾಕಿ ನೂರಾರು ಮಂದಿ ಕೊರೋನಾ ರೂಲ್ಸ್​ ಗಾಳಿಗೆ ತೂರಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ಕೇಸ್​​​​; ಒಬ್ಬ ಆರೋಪಿಗೆ ಇತ್ತು ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಚಟ

Source: newsfirstlive.com Source link