ಗ್ಯಾಂಗ್ ರೇಪ್: ಆರೋಪಿಗಳನ್ನು ನೇಣಿಗೇರಿಸುವಂತೆ ಗೋಡೆ ಬರಹಗಳ ಮೂಲಕ ಕಲಾವಿದರ ಆಗ್ರಹ

ಗ್ಯಾಂಗ್ ರೇಪ್: ಆರೋಪಿಗಳನ್ನು ನೇಣಿಗೇರಿಸುವಂತೆ ಗೋಡೆ ಬರಹಗಳ ಮೂಲಕ ಕಲಾವಿದರ ಆಗ್ರಹ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತು ಆರೋಪಿಗಳನ್ನು ನೇಣಿಗೆ ಹಾಕಿ ಎಂದು ಕಲಾವಿದರಿಬ್ಬರು ಗೋಡೆ ಬರಹದ ಮೂಲಕ ಒತ್ತಾಯಿಸಿದ್ದಾರೆ.

ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ನೇಣಿಗೇರಿಸಬೇಕು ಎಂದು ಜಾಗೃತಿ ಬರಹದ ಮೂಲಕ ನಗರದ ರವಿವರ್ಮ ಆರ್ಟ್ ಕಾಲೇಜು ವಿದ್ಯಾರ್ಥಿಗಳಾದ ರಾಹುಲ್ ಮನೋಹರ ಹಾಗೂ ಸುಮಂತ್ ಗೌಡ ಒತ್ತಾಯಿಸಿದ್ದಾರೆ.

blank

ಇದನ್ನೂ ಓದಿ: ಅತ್ಯಾಚಾರ ಕೇಸ್​​​​; ಒಬ್ಬ ಆರೋಪಿಗೆ ಇತ್ತು ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಚಟ

ಮೈಸೂರಿನ ದೇವರಾಜ ಮೊಹಲ್ಲಾದ ದಿವಾನ್ಸ್ ರಸ್ತೆಯ ಪಾಳು ಗೋಡೆಯಲ್ಲಿ, RAPE ಅಕ್ಷರಗಳಿಗೆ ಆರೋಪಿಗಳನ್ನು ನೇಣು ಹಾಕಿರುವ ಕ್ರೀಯಾತ್ಮಕ ಚಿತ್ರಗಳನ್ನು ಬಿಡಿಸಿ ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ. ಜೊತೆಗೆ ಜಾಗೃತಿ ಚಿತ್ರಗಳ ಮೂಲಕ ಮಹಿಳೆಯರ ರಕ್ಷಣೆ ಮಾಡಿ ಎಂದು ಸಂದೇಶ ಸಾರುತ್ತಿದ್ದಾರೆ.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ; ‘ನನ್ನ ಮಗನ್ನ ಯಾಕೆ ಬಂಧಿಸಿದ್ರೋ ಗೊತ್ತಿಲ್ಲ’ ಎಂದು ಬಿಕ್ಕಿಬಿಕ್ಕಿ ಅತ್ತ ಆರೋಪಿ ತಾಯಿ

Source: newsfirstlive.com Source link