ಭಾರೀ ಮೊತ್ತಕ್ಕೆ ಸೇಲ್ – ವಿಕ್ರಾಂತ್ ರೋಣ ಆಡಿಯೋ ರೈಟ್ಸ್ ಲಹರಿ ಮ್ಯೂಸಿಕ್‍ಗೆ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾದ ಆಡಿಯೋ ಹಕ್ಕನ್ನು ಲಹರಿ ಮ್ಯೂಸಿಕ್ ಸಂಸ್ಥೆ ಖರೀದಿಸಿದೆ.

ಕಿಚ್ಚ ಸುದೀಪ್ ನಟಿಸಿರುವ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಕೂಡ ಕಂಪ್ಲೀಟ್ ಹಂತದಲ್ಲಿದೆ. ಈಗಾಗಲೇ ಫಸ್ಟ್ ಲುಕ್ ಮತ್ತು ಚಿತ್ರದ ಪೋಸ್ಟರ್ ಮೂಲಕವೇ ಭಾರೀ ಕೂತೂಹಲ ಕೆರಳಿಸಿರುವ ವಿಕ್ರಾಂತ್ ರೋಣ ಸಿನಿಮಾ, ಇತ್ತೀಚೆಗಷ್ಟೇ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಫಸ್ಟ್ ಲುಕ್ ರಿಲೀಸ್ ಮಾಡಿ ಪ್ರೇಕ್ಷಕರಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.  ಇದನ್ನೂ ಓದಿ:ವಿಕ್ರಾಂತ್ ರೋಣ ಸಿನಿಮಾದಲ್ಲಿ ಗಡಂಗ್ ರಕ್ಕಮ್ಮನ ಪಾತ್ರ ರಿವೀಲ್

ಇದೀಗ ವಿಕ್ರಾಂತ್ ರೋಣ ಸಿನಿಮಾದ ಆಡಿಯೋ ಹಕ್ಕು ಮಾರಾಟವಾಗಿದ್ದು, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಲಹರಿ ಮ್ಯೂಸಿಕ್ ಸಂಸ್ಥೆ ಖರೀದಿಸಿದೆ ಮತ್ತು ಹಿಂದಿಯಲ್ಲಿ ಟಿ-ಸಿರೀಸ್ ಆಡಿಯೋ ಹಕ್ಕನ್ನು ಖರೀದಿಸಿದೆ. ಈ ಬಗ್ಗೆ ಲಹರಿ ಮ್ಯೂಸಿಕ್ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಿದೆ. ಅಲ್ಲದೇ ಎಲ್ಲಾ ಭಾಷೆಯಲ್ಲಿಯೂ ದುಬಾರಿ ಬೆಲೆಗೆ ವಿಕ್ರಾಂತ್ ರೋಣ ಸಿನಿಮಾದ ಆಡಿಯೋ ಹಕ್ಕು ಸೇಲ್ ಆಗಿದೆ ಎಂದು ಹೇಳಲಾಗುತ್ತಿದೆ.

blank

ಈ ನಡುವೆ ಸೆಪ್ಟೆಂಬರ್ 2ರಂದು ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಬೆಳಗ್ಗೆ 11 ಗಂಟೆಗೆ ಡೆಡ್ ಮ್ಯಾನ್ ಆಂಥೆಮ್ ಸಾಂಗ್ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಘೋಷಿಸಿದೆ. ಇದನ್ನೂ ಓದಿ:ವಿಕ್ರಾಂತ್ ರೋಣದಲ್ಲಿ ಸುದೀಪ್ ಜೊತೆ ಅದ್ಭುತ ಕಾಲ ಕಳೆದೆ: ಜಾಕ್ವೆಲಿನ್

ವಿಕ್ರಾಂತ್ ರೋಣ ಸಿನಿಮಾಕ್ಕೆ ನಿರ್ದೇಶಕ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ನಿರ್ಮಾಪಕ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಈ ಚಿತ್ರದ ವಿಶೇಷ ಹಾಡೋಂದಕ್ಕೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಡೀಸ್ ಸುದೀಪ್ ಜೊತೆ ಹೆಜ್ಜೆ ಹಾಕಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನೀತಾ ಅಶೋಕ್, ರವಿಶಂಕರ್ ಗೌಡ ಸೇರಿದಂತೆ ಹಲವಾರು ಕಲಾವಿದರು ಬಣ್ಣಹಚ್ಚಿದ್ದು, ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಗೊಳ್ಳುತ್ತಿದೆ.

Source: publictv.in Source link