ಹುಡುಕಿದಷ್ಟು ಸಿಗ್ತಿದೆ ಮಾದಕ ವಸ್ತು.. ಟ್ರಕ್​ನಲ್ಲಿ ಪತ್ತೆಯಾಯ್ತು 3.4 ಟನ್​ ಗಾಂಜಾ..!

ಹುಡುಕಿದಷ್ಟು ಸಿಗ್ತಿದೆ ಮಾದಕ ವಸ್ತು.. ಟ್ರಕ್​ನಲ್ಲಿ ಪತ್ತೆಯಾಯ್ತು 3.4 ಟನ್​ ಗಾಂಜಾ..!

ಬೆಂಗಳೂರು: ಎನ್​ಸಿಬಿ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಿಂದ ಟ್ರಕ್​​ನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 3400 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ.

ಬೆಂಗಳೂರು-ಹೈದರಾಬಾದ್ ಎನ್​ಸಿಬಿ ಅಧಿಕಾರಿಗಳ ಜಂಟಿ ಕಾರ್ಯಚರಣೆ ನಡೆಸಿ ಮಹಾರಾಷ್ಟ್ರ ನೋಂದಣಿಯಿರುವ ಟ್ರಕ್​ನಲ್ಲಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಗಾಂಜಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

blank

ಇದನ್ನೂ ಓದಿ: ರೈಲುಹಳಿಯಲ್ಲಿ ಸಿಲುಕಿದ್ದ ‘ಮೇಕೆ ಮರಿ’ ರಕ್ಷಿಸಿದ ವೀರ, ತನ್ನ ಕಾಲನ್ನೇ ಕಳೆದುಕೊಂಡ..!

blank

141 ಗೋಣಿ ಚೀಲಗಳಲ್ಲಿ ಗಾಂಜಾ ತುಂಬಿಸಿ ಅದರ ಮೇಲೆ ಸಸಿಗಳನ್ನಿಟ್ಟುಕೊಂಡು, ಹೈದರಾಬಾದ್ ರಿಂಗ್ ರೋಡ್ ಟೋಲ್ ಪ್ಲಾಜಾ ಬಳಿ ಹೋಗುತ್ತಿದ್ದ ಟ್ರಕ್​ನ ಮೇಲೆ ದಾಳಿ ಮಾಡಿದ ಎನ್‌.ಸಿ.ಬಿ ತಂಡ ಟ್ರಕ್​  ಪರಿಶೀಲಿಸಿದಾಗ ಗಾಂಜಾ ಇರುವುದು ಪತ್ತೆಯಾಗಿದೆ.

ಸದ್ಯ ಮೂವರನ್ನು ವಶಪಡಿಸಿಕೊಂಡಿರುವ ಪೊಲೀಸರು ಗಾಂಜಾ ಕಿಂಗ್​ಪಿನ್​ಗಾಗಿ ವಿಚಾರಣೆ ನಡೆಸುತ್ತಿರುವುದಾಗಿ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

blank

ಇದನ್ನೂ ಓದಿ: ಈ ಕಿಲಾಡಿ ಕಳ್ಳರು ಚಿನ್ನದ ಸರ ಎಗರಿಸಲು ಬಳಸಿದ್ದು ‘ಓಲಾ’ ಕಾರ್

Source: newsfirstlive.com Source link