ಲಹರಿ ತೆಕ್ಕೆಗೆ ‘ವಿಕ್ರಾಂತ್ ರೋಣ’ ಚಿತ್ರದ ಆಡಿಯೋ ಹಕ್ಕು.. ದಾಖಲೆಯ ಮೊತ್ತಕ್ಕೆ ಸೇಲ್

ಲಹರಿ ತೆಕ್ಕೆಗೆ ‘ವಿಕ್ರಾಂತ್ ರೋಣ’ ಚಿತ್ರದ ಆಡಿಯೋ ಹಕ್ಕು.. ದಾಖಲೆಯ ಮೊತ್ತಕ್ಕೆ ಸೇಲ್

ಲಹರಿ ಆಡಿಯೋ ಸಂಸ್ಥೆ ಸ್ಯಾಂಡಲ್​ವುಡ್​ನ ಸಂಗೀತ ಲೋಕದ ಸಾಮ್ರಾಟನಾಗೋಕೆ ಹೊರಟಂತೆ ಕಾಣ್ತಿದೆ.. ಯಾಕಂದ್ರೆ ಈಡೀ ವಿಶ್ವವೆ ಕಾಯ್ತಿರುವ ಕೆಜಿಎಫ್2 ಹಾಗೂ RRR ಚಿತ್ರದ ಆಡಿಯೋವನ್ನು ಕೋಟಿ ಕೋಟಿ ಕೊಟ್ಟು ತನ್ನ ತೆಕ್ಕೆಗೆ ತೆಗೆದು ಕೊಂಡಿದೆ ಲಹರಿ ಸಂಸ್ಥೆ. ಈಗ ಅದರ ಮುಂದುವರೆದ ಭಾಗವಾಗಿ ಲಹರಿ ಸಂಸ್ಥೆ ಸ್ಯಾಂಡಲ್​ವುಡ್​ನಲ್ಲಿ ಮಾತ್ರವಲ್ಲ ಅಕ್ಕ ಪಕ್ಕದೂರಿನಲ್ಲೂ ಸೌಂಡ್​ ಮಾಡ್ತಿರುವ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾದ ಸಂಗೀತ ಖಜಾನೆಗೆ ಕೈ ಹಾಕಿದೆ.

blank

ಲಹರಿ ಆಡಿಯೋ ಸಂಸ್ಥೆ ಉತ್ತಮ ಸಂಗೀತವಿರುವ ಸಿನಿಮಾಗಳನ್ನು ಸಂಗೀತ ಪ್ರಿಯರಿಗೆ ತಲುಪಿಸುವ ಕಾಯಕದಲ್ಲಿ ನಿರತವಾಗಿದೆ.. ಇತ್ತೀಚಿನ ದಿನಗಳಲ್ಲಿನ ಕೋಟಿ ಕೋಟಿ ಕೊಟ್ಟು ಹೈ ಬಜೆಟ್​ ಚಿತ್ರಗಳ ಗಾನ ಲಹರಿಯನ್ನು ತನ್ನ ತೆಕ್ಕಗೆ ಹಾಕಿಕೊಳ್ಳುವ ಮೂಲಕ ಗಮನ ಸೆಳೆದಿರುವ ಲಹರಿ ಸಂಸ್ಥೆ, ಈಗ ಮತ್ತೆ ಸುದ್ದಿಯಲ್ಲಿದೆ..

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಈಗ ಬಾಲಿವುಡ್​ಗೂ ಕ್ರಷ್; ‘ಮಿಷನ್ ಮಜ್ನು’ ಶೂಟಿಂಗ್​ ಕಂಪ್ಲೀಟ್​​..

ಇತ್ತೀಚಿಗಷ್ಟೇ ಕೆಜಿಎಫ್ 2 ಚಿತ್ರಕದ ಆಡಿಯೋಗೆ 7.2 ಕೋಟಿ , RRR ಚಿತ್ರದ ಆಡಿಯೋಗೆ ಲಹರಿ ಸಂಸ್ಥೆ 25 ಕೋಟಿಗೆ ಖರೀದಿ ಮಾಡಿತ್ತು. ಈಗ ಮತ್ತೆ ಲಹರಿ ಸಂಸ್ಥೆ ಸ್ಯಾಮಡಲ್​ವುಡ್​ನ ಸಂಗೀತ ಲೋಕದಲ್ಲಿ ಮತ್ತೊಂದು ಭೇಟೆಯಾಡುವ ಮೂಲಕ ಸುದ್ದಿಯಲ್ಲಿದೆ. ಅಷ್ಟಕ್ಕೂ ಲಹರಿ ಕೋಟಿ ಕೋಟಿ ಕೊಟ್ಟು ತನ್ನ ತೆಕ್ಕೆಗೆ ಬಾಚಿಕೊಂಡಿರುವ ಆ ಸಿನಿಮಾ ಯಾವುದು ಅನ್ನೋ ಪ್ರಶ್ನೆಗೆ ಉತ್ತರ ವಿಕ್ರಾಂತ್​ ರೋಣ.

blank

ಯೆಸ್​ ಕೆಜಿಎಫ್ 2, RRR ನಂತ್ರ ಮತ್ತೆ ದುಬಾರಿ ಬೆಲೆ ಕೊಟ್ಟು ಲಹರಿ ಸಂಸ್ಥೆ ಕಿಚ್ಚ ಸುದೀಪ್​ ಅಭಿನಯದ ವಿಕ್ರಾಂತ್​ ರೋಣ ಚಿತ್ರದ ಆಡಿರೋ ಹಕ್ಕನ್ನು ಖರೀದಿ ಮಾಡಿದೆ. ಬಲ್ಲ ಮೂಲಗಳ ಪ್ರಕಾರ ವಿಕ್ರಾಂತ್​ ರೋಣ ಚಿತ್ರದ ಆಡಿಯೋಗೆ ಬರೋಬರಿ 3 ಕೋಟಿ ಕೊಟ್ಟು ಲಹರಿ ಸಂಸ್ಥೆ ಖರೀದಿ ಮಾಡಿದೆ ಎಂದು ತಿಳಿದು ಬಂದಿದೆ..

ಇದನ್ನೂ ಓದಿ: ಪ್ರೀತಿಯ ಮಾವನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಸಮಂತಾ ಹೇಳಿದ್ದೇನು?

blank

ವಿಶೇಷ ಅಂದ್ರೆ ಕನ್ನದ ಕೆಜಿಎಫ್​ ಚಿತ್ರ ಬಿಟ್ಟರೆ ಬೇರೆ ಯಾವ ಚಿತ್ರದ ಆಡಿಯೋ 2 ಕೋಟಿಗೂ ಹೆಚ್ಚಿನ ಬೆಲೆ ಸೇಲಾಗಿರಲಿಲ್ಲ. ಈಗ ವಿಕ್ರಾಂತ್ ರೋಣ ಚಿತ್ರ ಬರೋಬ್ಬರಿ ಮೂರು ಕೋಟಿಗೆ ಸೇಲಾಗಿದ್ದು ಕೆಜಿಎಫ್ 2 ನಂತರದ ಸ್ಥಾನದಲ್ಲಿ ವಿಕ್ರಾಂತ್​ ರೋಣ ದಾಖಲೆ ಬರೆದಿದ್ದಾನೆ. ನಿನ್ನೆಯಷ್ಟೇ ವಿಕ್ರಾಂತ್​ ರೋಣ ಅಡಿಯೋ ರೈಟ್​ ಲಹರಿ ಪಾಲಾಗಿದ್ದು, ಯಾವಾಗ ಚಿತ್ರದ ಆಡಿಯೋ, ಯಾವಾಗ ಜನರಿಗೆ ತಲುಪಲಿದೆ ಅನ್ನೋ ಕ್ಯೂರಿಯಾಸಿಟಿ ಕ್ರಿಯೇಟ್​ ಮಾಡಿದೆ.. ಅದರೆ ಈ ಕುತೂಹಲವನ್ನು ಲಹರಿ ಸಂಸ್ಥೆ ಯಾವಾಗ ತಣಿಸಲಿದೆ ಕಾದು ನೋಡಬೇಕು.

ಇದನ್ನೂ ಓದಿ: ಸೈಲೆಂಟಾಗಿ ಮತ್ತೆ ಆ್ಯಕ್ಟೀವ್ ಆದ ​‘ಬ್ಯಾಡ್​ ಮ್ಯಾನರ್ಸ್​’..!

Source: newsfirstlive.com Source link