ಸತ್ತರೆ ಉಚಿತ ಶವ ಸಂಸ್ಕಾರ: ಬಿಜೆಪಿ ಪ್ರಣಾಳಿಕೆ ಬಗ್ಗೆ ನ್ಯೂಸ್​ಫಸ್ಟ್​ ವರದಿಗೆ DKS ಮೆಚ್ಚುಗೆ

ಸತ್ತರೆ ಉಚಿತ ಶವ ಸಂಸ್ಕಾರ: ಬಿಜೆಪಿ ಪ್ರಣಾಳಿಕೆ ಬಗ್ಗೆ ನ್ಯೂಸ್​ಫಸ್ಟ್​ ವರದಿಗೆ DKS ಮೆಚ್ಚುಗೆ

ಬೆಳಗಾವಿ: ಕುಂದಾನಗರಿಯಲ್ಲಿ ಪಾಲಿಕೆ ಚುನಾವಣಾ ಕಾವು ಜೋರಾಗಿದೆ. ಸೆಪ್ಟೆಂಬರ್ 3ರಂದು ನಡೆಯಲಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಈ ಪ್ರತ್ಯೇಕ ಪ್ರಣಾಳಿಕೆಯಲ್ಲಿ ‘ಸತ್ತರೆ ಉಚಿತವಾಗಿ ಶವ ಸಂಸ್ಕಾರಕ್ಕೆ ವ್ಯವಸ್ಥೆ’ ಮಾಡ್ತೀವಿ ಎಂದು ಘೋಷಿಸಿದ್ದರ ಕುರಿತು ನ್ಯೂಸ್​ಫಸ್ಟ್​ ವರದಿ ಮಾಡಿತ್ತು. ಈಗ ನ್ಯೂಸ್​ಫಸ್ಟ್​ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​​​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮಾತಾಡಿದ ಡಿ.ಕೆ.ಶಿವಕುಮಾರ್​​, ಬಿಜೆಪಿ ಪ್ರಣಾಳಿಕೆಯಲ್ಲಿ ಸತ್ತವರಿಗೆ ಉಚಿತ ಶವಸಂಸ್ಕಾರ ಮಾಡಲಾಗುವುದು ಎಂದು ಪ್ರಸ್ತಾಪಿಸಿದ್ದರ ಕುರಿತು ವರದಿ ಮಾಡಿದ ನ್ಯೂಸ್​ಫಸ್ಟ್​ಗೆ ಅಭಿನಂದನೆಗಳು. ಹೀಗೆ ಬಿಜೆಪಿ ಪ್ರಣಾಳಿಕೆಯಲ್ಲಿದ್ದ ವಿಚಾರ ಜನರಿಗೆ ತಲುಪಿಸಿದ್ದಕ್ಕೆ ಸೆಲ್ಯೂಟ್​​ ಎಂದು ಶ್ಲಾಘಿಸಿದರು.

ಇದನ್ನೂ ಓದಿ: ‘ಸತ್ತರೆ ಉಚಿತವಾಗಿ ಶವ ಸಂಸ್ಕಾರ’: ಬಿಜೆಪಿ ಪ್ರಣಾಳಿಕೆ ಕಂಡು ಗಾಬರಿ ಬಿದ್ದ ಜನರು

ಉಚಿತ ಶವ ಸಂಸ್ಕಾರ ಪ್ರಸ್ತಾಪ ಮಾಡಿದ ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಜನರನ್ನ ಬದುಕಿಸುತ್ತೇವೆ ಎಂದು ಹೇಳಬೇಕು ಹೊರತು ಜನ ಸಾಯಿಲಿ ಅಂತ ಬಯಸೋದಲ್ಲ ಎಂದು ಬಿಜೆಪಿ ಪ್ರಣಾಳಿಕೆ ವಿರುದ್ಧ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

Source: newsfirstlive.com Source link