ಕೋಲಾರದಲ್ಲೂ ಕೇರಳ ಮೂಲದ 15 ವಿದ್ಯಾರ್ಥಿಗಳಿಗೆ ಕೊರೊನಾ ದೃಢ; ಹೆಚ್ಚಿದ ಆತಂಕ

ಕೋಲಾರದಲ್ಲೂ ಕೇರಳ ಮೂಲದ 15 ವಿದ್ಯಾರ್ಥಿಗಳಿಗೆ ಕೊರೊನಾ ದೃಢ; ಹೆಚ್ಚಿದ ಆತಂಕ

ಕೋಲಾರ: ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾದ ಬೆನ್ನಲ್ಲೇ ಇದೀಗ ರಾಜ್ಯದ ಜಿಲ್ಲೆಗಳಲ್ಲಿಯೂ ಕೂಡ ಕೊರೊನಾ ಹಾವಳಿ ಜೋರಾಗಿದೆ. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೇರಳ ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆಯಾಗಿ ಭೀತಿ ಸೃಷ್ಟಿಸಿದ ಬೆನ್ನಲ್ಲೇ ರಾಜ್ಯದ ಕೋಲಾರ ಜಿಲ್ಲೆಯಲ್ಲಿ ಓದುತ್ತಿರುವ ಕೇರಳದ 15 ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆಯಾಗಿದ್ದು ಆತಂಕ ಉಂಟು ಮಾಡಿದೆ.

ನಗರದ ನೂರ್ ಅನೀಸ್ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿರುವ ಕೇರಳ ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಈ ವಿದ್ಯಾರ್ಥಿಗಳು ಎರಡು ದಿನಗಳ ಹಿಂದಷ್ಟೇ ಕೇರಳದಿಂದ ಆಗಮಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.

blank

ಇದನ್ನೂ ಓದಿ: ಕೊರೊನಾದಿಂದ ಗುಣಮುಖರಾದವರಿಗೆ ಒಂದೇ ಡೋಸ್ ಕೊವ್ಯಾಕ್ಸಿನ್ ಪರಿಣಾಮಕಾರಿ- ICMR

ಕಾಲೇಜಿನಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಇನ್ನುಳಿದ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ. ಸದ್ಯ ಸೋಂಕಿತ ವಿದ್ಯಾರ್ಥಿಗಳನ್ನು ಕೊರೊನಾ ಕೇರ್ ಸೆಂಟರ್​ಗೆ ಶಿಫ್ಟ್ ಮಾಡಲಾಗಿದ್ದು, ನೂರ್ ಅನೀಸ್ ನರ್ಸಿಂಗ್ ಕಾಲೇಜ್ ಅನ್ನ ಸೀಲ್ ಡೌನ್ ಮಾಡಲಾಗಿದೆ.

Source: newsfirstlive.com Source link