ಕೇಂದ್ರದ ವಿರುದ್ಧ ತೀವ್ರಗೊಂಡ ರೈತರ ಹೋರಾಟ; ಸೆ.25ಕ್ಕೆ ಭಾರತ ಬಂದ್​ಗೆ ಕರೆ

ಕೇಂದ್ರದ ವಿರುದ್ಧ ತೀವ್ರಗೊಂಡ ರೈತರ ಹೋರಾಟ; ಸೆ.25ಕ್ಕೆ ಭಾರತ ಬಂದ್​ಗೆ ಕರೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟವನ್ನು ರೈತ ಸಂಘಟನೆಗಳು ಮತ್ತಷ್ಟು ತೀವ್ರಗೊಳಿಸಿವೆ. ಹೀಗಾಗಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಕಿಸಾನ್​​​​ ಮೋರ್ಚಾ ಸಂಘಟನೆ ಸೆಪ್ಟೆಂಬರ್​​ 25ನೇ ತಾರೀಕು ಭಾರತ ಬಂದ್​​ ಘೋಷಿಸಿದೆ.

ಕಳೆದ ವರ್ಷ ನವೆಂಬರ್​​ ತಿಂಗಳಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಶುರುವಾದ ರೈತ ಸಂಘಟನೆಗಳ ಹೋರಾಟ ಇನ್ನೂ ಮುಂದುವರಿದಿದೆ. ದೇಶದಲ್ಲಿ ಸದ್ಯದಲ್ಲೇ ಕೊರೋನಾ ಮೂರನೇ ಅಲೆ ಎದುರಾಗುತ್ತಿದ್ದರೂ ಹಿಂದೇಟು ಹಾಕದೇ ರೈತರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ರದ್ದುಗೊಳಿಸಬೇಕು. ಈ ಬೇಡಿಕೆಯಿಂದ ನಾವು ಹಿಂದೆ ಸರಿಯುವ ಮಾತೇ ಇಲ್ಲ. ನಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಭಾರತ ಬಂದ್​​​ಗೆ ಕರೆ ನೀಡಿದ್ದೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಮತ್ತು ರೈತ ಹೋರಾಟಗಾರ ಆಶಿಶ್ ಮಿತ್ತಲ್ ಹೇಳಿದ್ದಾರೆ.

ಇದನ್ನೂ ಓದಿ: ಅವಶ್ಯಕತೆ ಬಿದ್ದರೆ ಅವರದ್ದೇ ನೆಲಕ್ಕೆ ನುಗ್ಗಿ ಉಗ್ರವಾದಿಗಳನ್ನ ಮಟ್ಟ ಹಾಕುತ್ತೇವೆ- ರಾಜನಾಥ್ ಸಿಂಗ್

ಸುಮಾರು ಹತ್ತು ತಿಂಗಳಿನಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ರದ್ದುಪಡಿಸಲು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದುವರೆಗೂ ಕೇಂದ್ರ ಸರ್ಕಾರ ರೈತರ ಜೊತೆಗೆ 11 ಸುತ್ತಿನ ಮಾತುಕತೆ ನಡೆಸಿದೆ. ಆದರೂ, ಈ ಸಮಸ್ಯೆ ಇತ್ಯರ್ಥವಾಗುತ್ತಿಲ್ಲ.

Source: newsfirstlive.com Source link