ಪ್ರಯಾಣಿಸ್ತಿದ್ದ ವಿಮಾನದಲ್ಲೇ ಪ್ರಾಣಬಿಟ್ಟ ವ್ಯಕ್ತಿ; ಆತಂಕದಲ್ಲೇ ಪ್ರಯಾಣಿಸಿದರು 185 ಮಂದಿ..!

ಪ್ರಯಾಣಿಸ್ತಿದ್ದ ವಿಮಾನದಲ್ಲೇ ಪ್ರಾಣಬಿಟ್ಟ ವ್ಯಕ್ತಿ; ಆತಂಕದಲ್ಲೇ ಪ್ರಯಾಣಿಸಿದರು 185 ಮಂದಿ..!

ನವದೆಹಲಿ: ಮಲೇಷ್ಯಾದಿಂದ ತಮಿಳುನಾಡಿನ ತಿರುಚಿಗೆ ಹೊರಟಿದ್ದ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ವಿಮಾನದಲ್ಲಿ ಪ್ರಯಾಣಿಕರೊಬ್ಬರು ನಿಧನರಾಗಿದ್ದಾರೆ. ವಿಮಾನವು ಕೌಲಾಲಂಪುರದಿಂದ ಹೊರಟಿದ್ದಾಗ, ಎ ವೆಲುಮುರುಗನ್ ಅನ್ನೋರು ಉಸಿರು ಚೆಲ್ಲಿದ್ದಾರೆ.

ಮೃತ ವ್ಯಕ್ತಿ ಪುಡುಕೊಟ್ಟೈನ ನರಿಯಪಟ್ಟಿ ಗ್ರಾಮದವರು ಅಂತಾ ಗುರುತಿಸಲಾಗಿದೆ. ಇವರಿಗೆ 36 ವರ್ಷವಾಗಿತ್ತು. ಇವರು ಕಳೆದ ಹಲವು ತಿಂಗಳುಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಕೆಲವು ವರದಿಗಳ ಪ್ರಕಾರ ವಿಮಾನ ನಿಲ್ದಾಣದಿಂದ 60 ನಾಟಿಕಲ್ ಮೈಲ್ ದೂರವಿದ್ದಾಗ ವೈದ್ಯಕೀಯ ಸಹಾಯವನ್ನ ಏರ್​ ಇಂಡಿಯಾ ಎಕ್ಸ್​ಪ್ರೆಸ್ ಕೇಳಿದೆ.

ವಿಮಾನದಲ್ಲಿ 185 ಪ್ರಯಾಣಿಕರು ಇದ್ದರು..!

ಏರ್​​ಪೋರ್ಟ್​ ಡೈರೆಕ್ಟರ್ ಎಸ್​.ಧರ್ಮರಾಜ್ ನೀಡಿರುವ ಮಾಹಿತಿ ಪ್ರಕಾರ.. ವಿಮಾನದಿಂದ ಸೂಚನೆ ಬರುತ್ತಿದ್ದಂತೆ ಮೆಡಿಕಲ್ ಟೀಂ ರೆಡಿಯಾಗಿತ್ತು. ವಿಮಾನದಲ್ಲಿ 185 ಪ್ರಯಾಣಿಕರು ಇದ್ದರು, ಇನ್ನು ತಿರುಚಿಗೆ ಬೆಳಗ್ಗೆ 7.58ಕ್ಕೆ ಬಂದಿಳಿದಿದೆ. ಕೂಡಲೇ ಮೆಡಿಕಲ್ ಏರ್​​ಪೋರ್ಟ್​ ಟೀಂ ವಿಮಾನದೊಳಗೆ ಪ್ರವೇಶಿಸಿ ತಪಾಸಣೆ ಮಾಡಲಾಯಿತು ಎಂದರು.

ಕೊರೊನಾ ಇರಲಿಲ್ಲ
ಮಾತ್ರವಲ್ಲ ವೆಲುಮುರುಗನ್ ಸಂಬಂಧಿಕರು ಕೂಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕಾಯುತ್ತಿದ್ದರು. ಕೂಡಲೇ ಅವರ ಮೃತದೇಹವನ್ನ ವಿಮಾನದಿಂದ ಇಳಿಸಿ ಮಹಾತ್ಮ ಗಾಂಧಿ ಮೆಮೊರಿಯಲ್ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್​ ಮಾಡಲಾಯಿತು. ಇಂದು ಮರಣೋತ್ತರ ಪರೀಕ್ಷೆ ನಡೆದಿದೆ.

ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ.. ಘಟನೆಯ ಬಗ್ಗೆ ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಮೃತ ವ್ಯಕ್ತಿಗೆ ಕೊರೊನಾ ಸೋಂಕು ಇರಲಿಲ್ಲ. ಹೀಗಾಗಿ ಯಾರೂ ಕೂಡ ತಮ್ಮ ಆರೋಗ್ಯದ ಬಗ್ಗೆ ಭಯ ಪಡುವ ಅಗತ್ಯತೆ ಇರುವುದಿಲ್ಲ ಅಂತಾ ಆರೋಗ್ಯ ಇಲಾಖೆಯ ಉಪ ನಿರ್ದೇಶಕ ಎ ಸುಬ್ರಮಣಿ ತಿಳಿಸಿದ್ದಾರೆ.

Source: newsfirstlive.com Source link