ಅಭಿಮಾನಿಗೆ ನಿರಾಸೆ ಮಾಡಲಿಲ್ಲ; ಅನಿವಾರ್ಯತೆಯಲ್ಲೂ ವಿಡಿಯೋ ಕಾಲ್ ಮಾಡಿ ನವ ಜೋಡಿಗೆ ಹಾರೈಸಿದ ಉಪ್ಪಿ

ಅಭಿಮಾನಿಗೆ ನಿರಾಸೆ ಮಾಡಲಿಲ್ಲ; ಅನಿವಾರ್ಯತೆಯಲ್ಲೂ ವಿಡಿಯೋ ಕಾಲ್ ಮಾಡಿ ನವ ಜೋಡಿಗೆ ಹಾರೈಸಿದ ಉಪ್ಪಿ

ರಿಯಲ್​ ಸ್ಟಾರ್​ ಉಪೇಂದ್ರ ಅವರನ್ನು ಅವರ ಅಭಿಮಾನಿಗಳು ಪ್ರೀತಿಯಿಂದ ಅಭಿಮಾನಿಗಳ ಚಕ್ರವರ್ತಿ ಅಂತ ಕರಿತಾರೆ.. ಅದೇ ರೀತಿ ಉಪ್ಪಿ ಕೂಡ ಅಭಿಮಾನಿಗಳ ಪಾಲಿಗೆ ಸ್ಟಾರ್​ ಥರಾ ಯಾವತ್ತೂ ನಡೆದುಕೊಂಡಿಲ್ಲ. ಬದಲಿಗೆ ತಾವೊಬ್ಬ ಕಾಮನ್​ಮ್ಯಾನ್​ ಅನ್ನೋ ತರನೇ ಅಭಿಮಾನಿಗಳ ಜೊತೆ ಇರ್ತಾರೆ ಉಪ್ಪಿ.. ಇದಕ್ಕೆ ಸಾಕ್ಷಿ ಎಂಬತೆ ಸೂಪರ್​ ಸ್ಟಾರ್ ಉಪೇಂದ್ರ ತನ್ನ ಅಭಿಮಾನಿಗೆ ಅವರ ಮದುವೆ ದಿನವೇ ಸರ್ಪ್ರೈಸ್​ ಗಿಫ್ಟ್ ಕೊಟ್ಟಿದ್ದಾರೆ.. ಉಪ್ಪಿ ತನ್ನ ಅಭಿಮಾನಿಗೆ ಮ್ಯಾರೇಜ್​ ದಿನವೇ ಕೊಟ್ಟ ಉಡುಗೊರೆಗೆ ಉಪೇಂದ್ರ ಅವರ ಅಭಿಮಾನಿ ದೇವರುಗಳು ಪುಲ್​ ಫಿಧಾ ಆಗಿದ್ದಾರೆ.

blank

ಸೂಪರ್​ ಸ್ಟಾರ್​ ಉಪೇಂದ್ರ ಸಿನಿಮಾ, ಪ್ರಜಾಕೀಯ, ಫ್ಯಾಮಿಲಿಗೆ ಎಷ್ಟು ಟೈಂ ಕೊಡ್ತಾರೋ ಅಷ್ಟೇ ಟೈಂ ಅನ್ನು ಅವರ ಅಭಿಮಾನಿಗಳಿಗೆ ಮೀಸಲಿಟ್ಟಿದ್ದಾರೆ.. ಸೋಷಿಯಲ್​ ಮೀಡಿಯಾದಲ್ಲಿ ಸುಲಭವಾಗಿ ಅಭಿಮಾನಿ ದೇವರುಗಳಿಗೆ ಸಿಗ್ತಾರೆ ಉಪ್ಪಿ.ಅಷ್ಟೇ ಅಲ್ಲಾ ತಮ್ಮನು ನೋಡಲು ಮನೆಗೆ ಬರುವ ಫ್ಯಾನ್ಸ್​ಗಳಿಗೆ ಉಪ್ಪಿ ನಿರಾಸೆ ಮಾಡಿದ ದಿನವೇ ಇಲ್ಲ..

ಅದರಲ್ಲೂ ಉಪೇಂದ್ರ ಅವರು ಅವರ ಹುಟ್ಟು ಹಬ್ಬದ ದಿನವನ್ನು ಫ್ಯಾನ್ಸ್​ಗಳಿಗಾಗೆ ಮೀಸಲಿಡ್ತಾರೆ. ಅಭಿಮಾನಿಗಳ ಕಷ್ಟ ಸುಖದಲ್ಲಿ ಭಾಗಿಯಾಗ್ತಾರೆ. ಅದೇ ರೀತಿ ಉಪ್ಪಿ ಅವರ ಅಭಿಮಾನಿಯೊಬ್ಬರಿಗೆ ಅಭಿಮಾನಿ ಮದುವೆ ದಿನವೇ ಸರ್ಪೈಸ್​ ಕೊಟ್ಟಿದ್ದಾರೆ. ಹೌದು ವಿನಯ್​ ಎಂಬುವವರು ಸುಮಾರು 15 ವರ್ಷಗಳಿಂದ ಉಪ್ಪಿ ಅಭಿಮಾನಿಯಾಗಿದ್ದು, ಕಳದ ಮೂರು ದಿನಗಳ ಹಿಂದೆ ಅಂದರೆ ಆಗಸ್ಟ್​ 26 ನೇ ತಾರೀಖು ಮದುವೆಯಾಗಿದ್ದಾರೆ.

blank

ವಿಶೇಷ ಅಂದ್ರೆ ವಿನಯ್ ಅವರ ಆಮಂತ್ರಣ ಪತ್ರಿಕೆಯಲ್ಲೂ ಉಪೇಂದ್ರ ದಂಪತಿ ಹೆಸರು ಹಾಕಿಸುವ ಮೂಲಕ ತಮ್ಮ ಅಭಿಮಾನ ತೋರಿದ್ದಾರೆ. ಆದ್ರೆ ಉಪ್ಪಿ ತಮ್ಮ ಪ್ರೀತಿಯ ಅಭಿಮಾನಿ ಮದುವೆಗೆ ಸಾಕ್ಷಿಯಾಗಲು ಸಾಧ್ಯವಾಗಿಲ್ಲ.. ಯಾಕಂದ್ರೆ ಉಪ್ಪಿ ಅಭಿಮಾನಿ ದೂರದ ಕುಂದಾಪುರದ ಬಳಿಯಿರುವ ಬಾರ್ಕೂರು ಎಂಬಲಿ ವಿವಾಹವಾಗಿದ್ದಾರೆ.. ಕೊರೊನ ಕಾರಣ ಉಪ್ಪಿ ಅಭಿಮಾನಿಯ ಮದುವೆಗೆ ಹೋಗಲು ಸಾಧ್ಯವಾಗಿಲ್ಲ. ಹಾಗಂತ ಉಪೇಂದ್ರ ಸುಮ್ಮನಾಗದೇ ತಾವಿದ್ದ ಜಾಗದಿಂದಲ್ಲೇ ಅವರ ಅಭಿಮಾನಿಯ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ. ಅಲ್ಲದೇ ಸರ್​ಪ್ರೈಸ್ ಕೊಟ್ಟು ಅಭಿಮಾನಿಯ ಸಂತಸ ಹೆಚ್ಚಿಸಿದ್ದಾರೆ.

ಯೆಸ್​ ಉಪ್ಪಿ ತಮ್ಮ ಅಭಿಮಾನಿ ವಿನಯ್​ ಮದುವೆಯ ದಿನ ವಿಡಿಯೋ ಕಾಲ್​ ಮೂಲಕ ಅವರ ಅಭಿಮಾನಿ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲ, ನವವಧುವರರಿಗೆ ಶುಭಾಶಯ ಹೇಳಿ ಹಾರೈಸಿದ್ದಾರೆ. ಅಲ್ಲದೇ ಬೆಂಗಳೂರಿನಿಂದ ಹೋಗಿದ್ದ ಉಪೇಂದ್ರ ಅವರ ಅಭಿಮಾನಿಗಳ ಮೂಲಕ ವಿಶೇಷ ಫೋಟೊವೊಂದನ್ನು ಉಡುಗೊರೆಯಾಗಿ ಕಳುಹಿಸಿ ಕೊಟ್ಟಿದ್ದಾರೆ. ಉಪೇಂದ್ರ ಅವರ ಅಭಿಮಾನಿ ಮದುವೆಗೆ ವಿಡಿಯೋ ಕಾಲ್​ ವಿಡಿಯೋ ಈಗ ಉಪ್ಪಿ ಫ್ಯಾನ್ಸ್​ಗಳ ಅಡ್ಡದಲ್ಲಿ ಸಖತ್​ ಸೌಂಡ್​ ಮಾಡ್ತಿದ್ದು, ಉಪ್ಪಿಯ ಸರಳತೆಗೆ ಅವರ ಅಭಿಮಾನಿ ದೇವರುಗಳು ಪುಲ್​ ಫಿದಾ ಆಗಿದ್ದಾರೆ.

Source: newsfirstlive.com Source link