BREAKING: ಕಾಬೂಲ್​​ನಲ್ಲಿ ಮತ್ತೊಂದು ಬಿಗ್​ ಬ್ಲಾಸ್ಟ್​; ಸಾವು ನೋವಿನ ಆತಂಕ

BREAKING: ಕಾಬೂಲ್​​ನಲ್ಲಿ ಮತ್ತೊಂದು ಬಿಗ್​ ಬ್ಲಾಸ್ಟ್​; ಸಾವು ನೋವಿನ ಆತಂಕ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​​ನಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ಈ ಮೂಲಕ ಒಂದು ವಾರದ ಅಂತರದಲ್ಲಿ ಕಾಬೂಲ್ ಒಂದರಲ್ಲೇ 3 ಬಾರಿ ಸ್ಫೋಟ ಸಂಭವಿಸಿದೆ.

ಭೀಕರ ಶಬ್ದದೊಂದಿಗೆ ಸ್ಫೋಟಗೊಂಡಿದ್ದು, ಸುತ್ತಮುತ್ತ ಜನ ಬೆಚ್ಚಿಬಿದ್ದು ಓಡಿದ್ದಾರೆ. ಇನ್ನು ಸಾವು ನೋವು ಸಂಭವಿಸಿರುವ ಆತಂಕ ಎದುರಾಗಿದೆ. ಕಾಬೂಲ್ ಏರ್​ಪೋರ್ಟ್​ ಸುತ್ತ ದಟ್ಟವಾದ ಹೊಗೆ ಆವರಿಸಿಕೊಂಡಿದೆ.

ಕೆಲವು ವರದಿಗಳ ಪ್ರಕಾರ, ಅಮೆರಿಕ ಸೈನಿಕರನ್ನ ಗುರಿಯಾಗಿಸಿಕೊಂಡು ರಾಕೆಟ್​ ಮೂಲಕ ದಾಳಿ ನಡೆಸಲಾಗಿದೆ ಅಂತಾ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಸಾವು ನೋವಿನ ಬಗ್ಗೆ ಇದುವರೆಗೆ ಯಾವುದೇ ವರದಿಯಾಗಿಲ್ಲ.

Source: newsfirstlive.com Source link