ಹಣಕಾಸಿನ ವಿಚಾರಕ್ಕೆ ಶಾಸಕ ಅರವಿಂದ್​ ಬೆಲ್ಲದ ಮುಂದೆಯೇ ಡಿಶುಂ ಡಿಶುಂ

ಹಣಕಾಸಿನ ವಿಚಾರಕ್ಕೆ ಶಾಸಕ ಅರವಿಂದ್​ ಬೆಲ್ಲದ ಮುಂದೆಯೇ ಡಿಶುಂ ಡಿಶುಂ

ಧಾರವಾಡ: ಶಾಸಕ ಅರವಿಂದ್​ ಬೆಲ್ಲದ ಮುಂದೆಯೇ ಜನ ಹಣಕಾಸಿನ ವಿಚಾರಕ್ಕೆ ಕಿತ್ತಾಡಿಕೊಂಡ ಘಟನೆ ನಗರದ ಆಶ್ರಯ ಕಾಲೋನಿಯಲ್ಲಿ ನಡೆದಿದೆ.

ಶಾಸಕ ಅರವಿಂದ ಬೆಲ್ಲದ ಪಾಲಿಕೆ ಚುನಾವಣೆ ಪ್ರಯುಕ್ತ ಆಶ್ರಯ ಕಾಲೋನಿಗೆ ಪ್ರಚಾರಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಧಾರವಾಡ ಹೊರವಲಯದ ಸತ್ತೂರ ಆಶ್ರಯ ಕಾಲೋನಿಯಲ್ಲಿ‌ ಮನೆಗಳ ಹಕ್ಕು ಪತ್ರ ಕೊಡಿಸುವುದಾಗಿ ಬಸಣ್ಣ ಎಂಬಾತ ಪ್ರತಿ ಮನೆಯವರಿಂದ ಎರಡು ಸಾವಿರ ರೂಪಾಯಿಗಳನ್ನು ಪಡೆದು, ಇದುವರೆಗೂ ಯಾವುದೇ ಹಕ್ಕು ಪತ್ರ ನೀಡಿಲ್ಲ ಎಂದು ಆರೋಪಿಸಲಾಗಿದೆ.

ಈ ವಿಚಾರವನ್ನು ಕಾಲೋನಿ ಜನರು ಶಾಸಕರು ಪ್ರಚಾರಕ್ಕೆ ಬಂದಾಗ ಅವರ ಮುಂದೆ ಪ್ರಸ್ತಾಪಿಸಿದ್ದಾರೆ. ಈ ವೇಳೆ ಹಣ ಪಡೆದಿದ್ದ ಎನ್ನಲಾದ ಬಸಣ್ಣ ಜನರ ಆರೋಪವನ್ನು ನಿರಾಕರಿಸಿದ್ದು, ಕಾಲೋನಿ ಜನರು ಮತ್ತು ಬಸಣ್ಣನ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಸ್ಥಳದಲ್ಲಿ ಕ್ಷೇತ್ರದ ಶಾಸಕರಿದ್ದರೂ ಕ್ಯಾರೆ ಅನ್ನದ ಜನ ಕಿತ್ತಾಡಿಕೊಳ್ಳಲು ಶುರು ಮಾಡಿದ್ದಾರೆ. ಹೀಗೆ ಮುಂದುವರೆದ ಜಗಳ ದೇವಸ್ಥಾನದ ಮೆಟ್ಟಿಲೇರಿ ಆಣೆ, ಪ್ರಮಾಣದವರೆಗೂ ತಲುಪಿದೆ.

ಇದನ್ನೂ ಓದಿ:  ಅವಶ್ಯಕತೆ ಬಿದ್ದರೆ ಅವರದ್ದೇ ನೆಲಕ್ಕೆ ನುಗ್ಗಿ ಉಗ್ರವಾದಿಗಳನ್ನ ಮಟ್ಟ ಹಾಕುತ್ತೇವೆ- ರಾಜನಾಥ್ ಸಿಂಗ್

Source: newsfirstlive.com Source link