ಛೇ ಇವರೇನು ಮನುಷ್ಯರ? ವ್ಯಕ್ತಿಯನ್ನ ಟ್ರಕ್​ಗೆ ಕಟ್ಟಿ ಎಳೆದು ಕೊಂದ ಪಾಪಿಗಳು

ಛೇ ಇವರೇನು ಮನುಷ್ಯರ? ವ್ಯಕ್ತಿಯನ್ನ ಟ್ರಕ್​ಗೆ ಕಟ್ಟಿ ಎಳೆದು ಕೊಂದ ಪಾಪಿಗಳು

ಭೋಪಲ್​​: 45 ವರ್ಷದ ಅಮಾಯಕ ಆದಿವಾಸಿ ವ್ಯಕ್ತೊಯೋರ್ವನನ್ನು ಗುಂಪೊಂದು ಥಳಿಸಿದ್ದಲ್ಲದೇ ಟ್ರಕ್​​ವೊಂದಕ್ಕೆ ಕಟ್ಟಿ ರಸ್ತೆ ಮಧ್ಯೆಯೇ ಧರಧರನೇ ಎಳೆದೊಯ್ದು ಕೊಂದ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ನೀಮಚ್​ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕನ್ನಯ್ಯಲಾಲ್​​ ಭೀಲ್​ ಎಂಬ ಆದಿವಾಸಿ ದುರಂತ ಸಾವನ್ನಪ್ಪಿದ್ದಾನೆ.

ಹಾಲು ಮಾರಾಟಗಾರ ಗುರ್ಜರ್​​ ಎಂಬಾತ ಬೈಕಿನಲ್ಲಿ ಬರುತ್ತಿದ್ದ. ಈ ವೇಳೆ ರಸ್ತೆ ಮಧ್ಯೆ ಗುರ್ಜಾರ್​​ ಬೈಕಿಗೆ ಕನ್ನಯ್ಯಲಾಲ್​​​ ಅಡ್ಡ ಬಂದಿದ್ದಾನೆ. ಇದರಿಂದ ದಿಢೀರ್​​ ಅಪಘಾತ ಸಂಭವಿಸಿದ ಪರಿಣಾಮ ಬೈಕಿನಲ್ಲಿದ್ದ ಎಲ್ಲಾ ಹಾಲು ಹಾಳಾಗಿದೆ. ಇದರಿಂದ ಸಿಟ್ಟಿಗೆದ್ದ ಗುರ್ಜಾರ್​​​ ತನ್ನ ಸ್ನೇಹಿತರನ್ನು ಕರೆಸಿ ಕನ್ನಯ್ಯಲಾಲ್​​ ಎಂಬಾತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಇನ್ನು, ಕನ್ನಯ್ಯಲಾಲ್​​ ಎಂಬ ಆದಿವಾಸಿಯನ್ನು ಗುಂಪು ಥಳಿಸಿದಲ್ಲದೇ ಟ್ರಕ್​​ವೊಂದಕ್ಕೆ ಕಟ್ಟಿ ರಸ್ತೆ ಮಧ್ಯೆಯಲ್ಲೇ ಧರಧರನೆ ಎಳೆದೊಯ್ಯಲಾಗಿದೆ. ಇದರ ಪರಿಣಾಮ ಕನ್ನಯ್ಯಲಾಲ್​​ ತನ್ನ ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ಈ ಸಂಬಂಧ ಮಾತಾಡಿದ ನೀಚಮ್ ಜಿಲ್ಲೆಯ ಎಸ್​​ಪಿ ಸೂರಜ್​​​ ಕುಮಾರ್​​ ವರ್ಮಾ, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಎಸ್​​ಸಿ, ಎಸ್​​ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಂಟು ಮಂದಿ ವಿರುದ್ಧ ಎಫ್​ಐಆರ್​​ ದಾಖಲಾಗಿದೆ ಎಂದರು.

Source: newsfirstlive.com Source link