ಕಾಬೂಲ್​​ನಲ್ಲಿ ರಾಕೆಟ್ ಮೂಲಕ ಅಟ್ಯಾಕ್ & ಸ್ಫೋಟ; ಮಗು ಸೇರಿ ಇಬ್ಬರು ಸಾವು

ಕಾಬೂಲ್​​ನಲ್ಲಿ ರಾಕೆಟ್ ಮೂಲಕ ಅಟ್ಯಾಕ್ & ಸ್ಫೋಟ; ಮಗು ಸೇರಿ ಇಬ್ಬರು ಸಾವು

ಇಂದು ಸಂಜೆ ವೇಳೆಗೆ ಕಾಬೂಲ್​​ನ ಖಾಜೆ ಬಘ್ರಾದ ಗುಲಾಯ್ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಂದು ಮಗು ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಅಮೆರಿಕ ಸೈನಿಕರನ್ನ ಗುರಿಯಾಗಿಸಿಕೊಂಡು ಬಘ್ರಾದ ಗುಲಾಯ್ ಪ್ರದೇಶದಲ್ಲಿರುವ ಮನೆಯೊಂದರ ಮೇಲೆ ರಾಕೆಟ್ ಮೂಲಕ ದಾಳಿ ನಡೆದಿದೆ. ರಾಕೆಟ್ ದಾಳಿಯ ಭೀಕರತೆಗೆ ಇಡೀ ಕಟ್ಟಡ ಸ್ಫೋಟಗೊಂಡು ದಟ್ಟವಾದ ಹೊಗೆ ಆವರಿಸಿದೆ.

ಭೀಕರವಾದ ಸದ್ದು ಕೇಳಿದ ಅಕ್ಕಪಕ್ಕದ ನಿವಾಸಿಗಳು ಗಾಬರಿಗೊಂಡು ಓಡಿದ್ದಾರೆ. ಇನ್ನು ಈ ಸ್ಫೋಟದಲ್ಲಿ ಇಬ್ಬರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:  ಕಾಬೂಲ್​​ನಲ್ಲಿ ಮತ್ತೊಂದು ಬಿಗ್​ ಬ್ಲಾಸ್ಟ್​; ಸಾವು ನೋವಿನ ಆತಂಕ

 

Source: newsfirstlive.com Source link