ಕೈ ಮುಗಿದು ಕಾಂಗ್ರೆಸ್​​ಗೆ ಮತ ಹಾಕಿ ಎಂದ ಡಿ.ಕೆ ಶಿವಕುಮಾರ್.. ಎಲ್ಲಿ?!

ಕೈ ಮುಗಿದು ಕಾಂಗ್ರೆಸ್​​ಗೆ ಮತ ಹಾಕಿ ಎಂದ ಡಿ.ಕೆ ಶಿವಕುಮಾರ್.. ಎಲ್ಲಿ?!

ಬೆಳಗಾವಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಮಹಾಜನತೆ ಕಾಂಗ್ರೆಸ್​ನ ವಿಶ್ವಾಸ ಹೆಚ್ಚಿಸಿದೆ ಅಂತ ಡಿ.ಕೆ.ಶಿವಕುಮಾರ್​ ಕೈ ಮುಗಿದಿದ್ದಾರೆ.  ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ, ಜಿಲ್ಲೆಯ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪತ್ರಿಕಾಗೋಷ್ಠಿ ನಡೆಸಿ ಮಾತ್ನಾಡಿದ್ದಾರೆ. ಬಿಜೆಪಿಯವರು ಒಂದೇ ಒಂದು ಪ್ರಣಾಳಿಕೆ ಕಾರ್ಯರೂಪಕ್ಕೆ ತಂದಿಲ್ಲ, ಹೈಸ್ಪೀಡ್ ರೈಲು ಬಿಡಿ ಅಂದ್ರು, ಆದ್ರೆ ಬಿಜೆಪಿಯವರು ಅದೆಲ್ಲಿ ರೈಲು ಬಿಟ್ಟರೂ ಗೊತ್ತಿಲ್ಲ ಅಂತ ಬಿಜೆಪಿ ಪ್ರಣಾಳಿಕೆ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.

ಇಬ್ಬರು ಡಬ್ಬಲ್​ ಎಂಜಿನ್​ನಂತೆ ಇದ್ದಾರೆ

ಬೆಳಗಾವಿಯಲ್ಲಿ ಇಬ್ಬರು ಡಬಲ್ ಎಂಜಿನನಂತೆ ಶಾಸಕರು ಇದ್ದಾರೆ.ನಾನು ನೀವು ಹೋರಾಟ ಮಾಡಿ ಸುವರ್ಣ ಸೌಧ ಕಟ್ಟಿಸಿದ್ದೇವೆ.
ಕಳೆದ ಎರಡು ವರ್ಷದಲ್ಲಿ ಬೆಳಗಾವಿಯಲ್ಲಿ ಅಧಿವೇಶನ ಮಾಡ್ತಿಲ್ಲ,ಅಧಿವೇಶನ ಮಾಡಿದ್ರೆ ಬೆಳಗಾವಿ ನಗರದ ಆರ್ಥಿಕ ಚೈತನ್ಯ ಸಿಗುತ್ತದೆ
ಆದ್ರೆ ಇವರು ಅಧಿವೇಶನ ಮಾಡಿಲ್ಲ ಅನ್ನೋದನ್ನ ಜ‌ನರು ತೀರ್ಮಾನ ಮಾಡ್ತಾರೆ. ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮವಾದ ಜೀವನ ನೀಡಬೇಕಿದೆ, ಗ್ರಾಮೀಣ ಪ್ರದೇಶದ ಜನರೂ ಸಹ ತೆರಿಗೆಯನ್ನ ಕಟ್ಟುತ್ತಿದ್ದಾರೆ. ಬೆಳಗಾವಿ ನಗರ ಅಭಿವೃದ್ಧಿ ಆಗಬೇಕು ಅಂತ ಹೇಳಿದ್ದಾರೆ.

ನನ್ನ ಮಿತ್ರ ಸುರೇಶ ಅಂಗಡಿ ಕೊರೊನಾದಿಂದ ಮೃತಪಟ್ಟರೂ ಸುರೇಶ ಅಂಗಡಿ ಮೃತದೇಹವನ್ನ ಅವರ ಕುಟುಂಬಕ್ಕೆ ತಂದುಕೊಡಲಿಲ್ಲ.
ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆ, ಔಷಧಿ, ಆಕ್ಸಿಜನ್ ಕೊಡಕ್ಕೆ ಆಗಲಿಲ್ಲ. ಇಂಥವರಿಗೆ ಜನಾ ವೋಟ್ ಹಾಕಬೇಕಾ? ಸರ್ಕಾರದ ಕೋವಿಡ್ ಪರಿಹಾರ ಜನರಿಗೆ ಇನ್ನೂ ತಲುಪಿಲ್ಲ. ಯಾವ ಬೀದಿ ವ್ಯಾಪಾರಿ, ನೇಕಾರರು, ಕೂಲಿ ಕಾರ್ಮಿಕರಿಗೆ ಪರಿಹಾರ ಕೊಟ್ಟಿದ್ದಿರೀ? ಎಂದು ಡಿಕೆಶಿ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಶೇ.25ರಷ್ಟು ಕಮೀಷನ್, ಶೇ.50ರಷ್ಟು ಕೆಲಸ ಆಗಿದೆ ಅದೂ ಇದು ಅಂತಿರಲ್ಲಾ? ಅಂತ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ ಬಗ್ಗೆ ಕಾಂಗ್ರೆಸ ಪಕ್ಷ ಕಮಿಟಿ ಮಾಡಿ ತನಿಖೆ ಮಾಡ್ತಿನಿ, ಸ್ಮಾರ್ಟ್ ಸಿಟಿ ಕಾಮಗಾರಿ ಬಗ್ಗೆ ವರದಿ ತರೆಸಿಕೊಳ್ಳುತ್ತೇನೆ, ಎಲ್ಲರೂ, ಕಾಂಗ್ರೆಸ್​ಗೆ ಮತ ಹಾಕಿ ಅಂತ ಕೈಮುಗಿದಿದ್ದಾರೆ ಡಿ.ಕೆ ಶಿವಕುಮಾರ್.

Source: newsfirstlive.com Source link