ಜಮೀನು ವಿಚಾರಕ್ಕೆ ಕುಟುಂಬದ ನಾಲ್ವರ ಬರ್ಬರ ಕೊಲೆ ಕೇಸ್​​; 9 ಮಂದಿ ಪೊಲೀಸ್ ವಶಕ್ಕೆ

ಜಮೀನು ವಿಚಾರಕ್ಕೆ ಕುಟುಂಬದ ನಾಲ್ವರ ಬರ್ಬರ ಕೊಲೆ ಕೇಸ್​​; 9 ಮಂದಿ ಪೊಲೀಸ್ ವಶಕ್ಕೆ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಜಮೀನು ವಿಚಾರವಾಗಿ ನಡೆದ ನಾಲ್ವರ ಕೊಲೆ ಪ್ರಕರಣ ಸಂಬಂಧ 12 ಜನ ಆರೋಪಿಗಳ ಹೆಸರನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಜಿಲ್ಲೆಯ ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮದಲ್ಲಿ ನಾಲ್ವರು ಸಹೋದರರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು.

ಈ ಪ್ರಕರಣದಲ್ಲಿ ನಂದೀಶ್, ನಾಗಪ್ಪ, ಪರಪ್ಪ, ಈರಪ್ಪ, ಶಿವಾನಂದ, ಶಂಕರ್, ಅಂಬವ್ವ, ರುಕ್ಮವ್ವ, ಮಾಲಾಶ್ರಿ, ಸುನಂದಾ ಪುಟಾಣಿ ಮನೆತನದವರು ಆರೋಪಿಗಳು. ಇನ್ನುಳಿದ ಮೂವರು ಆರೋಪಿಗಳು ಪ್ರೇಮಾ ನಿಡೋಣಿ, ಚನಬಸಪ್ಪ ನಿಡೋಣಿರನ್ನ ನಿಡೋಣಿ ಮನೆತನದವರು ಎಂದು ಗುರುತಿಸಲಾಗಿದೆ.

ಪ್ರಕರಣ ಸಂಬಂಧ ಸದ್ಯ ಒಂಬತ್ತು ಜನರನ್ನು ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಚ್ಚಿಬಿದ್ದ ಬಾಗಲಕೋಟೆ..! ಜಮೀನು ವಿಚಾರಕ್ಕೆ ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ

Source: newsfirstlive.com Source link