ತಾಳಿ ಕಟ್ಟುವ ಶುಭ ವೇಳೆ.. ಗಂಡನಿಗೆ ಕಾಪಾಳಮೋಕ್ಷ ಮಾಡಿದ ಮದುಮಗಳು..!

ತಾಳಿ ಕಟ್ಟುವ ಶುಭ ವೇಳೆ.. ಗಂಡನಿಗೆ ಕಾಪಾಳಮೋಕ್ಷ ಮಾಡಿದ ಮದುಮಗಳು..!

ಗುಟುಕಾ, ತಂಬಾಕು ಅಗೆಯೋದು ಆರೋಗ್ಯಕ್ಕೆ ಹಾನಿಕಾರ. ಈ ಎಚ್ಚರಿಕೆಯ ಕರೆಗಂಟೆ ನಮ್ಮನ್ನ ಆಗಾಗ ಬಡಿದೆಬ್ಬಿಸುತ್ತ ಇರುತ್ತದೆ. ಆದರೆ ಇದಕ್ಕೆ ಅಡಿಕ್ಟ್ ಆದವರು ಯಾರು ಏನೇ ಹೇಳಿದ್ರೂ ತಮ್ಮ ಚಟ ಮಾತ್ರ ಬಿಡಲ್ಲ. ಅದು ಎಷ್ಟರ ಮಟ್ಟಿಗೆ ಅಂದರೆ ಗುಟುಕಾ ನಮ್ಮ ದೇಹದ ಅವಿಭಾಜ್ಯ ವಸ್ತು, ಅದಿಲ್ಲದೇ ಯಾವ ಕೆಲಸವೂ ಆಗಲ್ಲ ಅನ್ನೋ ನಿರ್ಧಾರಕ್ಕೆ ಬಂದಂತೆ ಕೆಲವರು ವರ್ತಿಸುತ್ತಾರೆ.

ಅದೇನೇ ಇರಲಿ, ಸದ್ಯ ವೈರಲ್ ಆಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡ್ತಿದೆ. ನೋಡೋಕೆ ಸ್ವಲ್ಪ ತಮಾಷೆಯಾಗಿ ಕಂಡರೂ, ಒಂದು ರೀತಿ ಸಮಾಜಕ್ಕೆ ಸಂದೇಶಕೊಟ್ಟಂತೆ ಇದೆ. ವಿಡಿಯೋದಲ್ಲಿ ಮದುವೆ ಸಮಾರಾಂಭ ನಡೆಯುತ್ತಿರುತ್ತದೆ. ಈ ವೇಳೆ ಮದುವೆ ಮಂಟಪದಲ್ಲಿ ಗುಟುಕಾ ಹಾಕಿಕೊಂಡು ಕೂತಿದ್ದ ಮದುಮಗನಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಇದಾಗಿದೆ.

ಪತ್ನಿಯಿಂದ ಕಪಾಳಮೋಕ್ಷ ಮಾಡಕೊಂಡ ವರ, ಕೂತ ಜಾಗದಿಂದ ಎದ್ದು, ಹಾಕಿದ್ದ ಗುಟ್ಕಾವನ್ನ ಹೊರಗಡೆ ಉಗಿದು ಮತ್ತೆ ಶಾಸ್ತ್ರಕ್ಕೆ ಕೂತಿದ್ದಾನೆ. ಮೂರು ವಾರಗಳ ಹಿಂದೆ ನಿರಂಜನ್ ಎಂ ಅನ್ನೋರು ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಈ ಘಟನೆ ಎಲ್ಲಿ ನಡೆದಿರೋದು ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Source: newsfirstlive.com Source link