ಶಿರಸಿಯ ದಟ್ಟಾರಣ್ಯದಲ್ಲಿ ಭಯಾನಕ ಭೂಕುಸಿತ; ವನ್ಯ ಸಂಪತ್ತಿಗೆ ಭಾರೀ ಹಾನಿ

ಶಿರಸಿಯ ದಟ್ಟಾರಣ್ಯದಲ್ಲಿ ಭಯಾನಕ ಭೂಕುಸಿತ; ವನ್ಯ ಸಂಪತ್ತಿಗೆ ಭಾರೀ ಹಾನಿ

ಶಿರಸಿ: ಪ್ರವಾಹ ನಿಂತರೂ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸುತ್ತಲೇ ಇದೆ. ಇದೀಗ ಶಿರಸಿಯ ಗದ್ದೆಹಳ್ಳಿ ಅರಣ್ಯ ಪ್ರದೇಶದಲ್ಲಿ ಭಾರೀ ಭೂಕುಸಿತ ಉಂಟಾಗಿದೆ ಅಂತಾ ವರದಿಯಾಗಿದೆ.

ಜಿಲ್ಲೆಯ ಹಲವೆಡೆ ಈ ಹಿಂದೆ ಭೂಕುಸಿತ ಸಂಭವಿಸಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ರೌಂಡ್ಸ್​ಗೆ  ಹೋಗಿದ್ದಾಗ ಭೂಕುಸಿತ ಸಂಭವಿಸಿರೋದು ಬೆಳಕಿಗೆ ಬಂದಿದೆ. ದಟ್ಟಾರಣ್ಯ ಆಗಿದ್ರಿಂದ ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ.

ಇನ್ನು ಭಾರೀ ಭೂಕುಸಿತದ ದೃಶ್ಯ ಸ್ಥಳೀಯರೊಬ್ಬರ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 100 ಅಡಿಗಳಷ್ಟು ಭೂಕುಸಿತವಾಗಿದೆ ಅಂತಾ ಅಂದಾಜು ಮಾಡಲಾಗಿದೆ.

Source: newsfirstlive.com Source link