ನಾಳೆ ತಜ್ಞರು ಗ್ರೀನ್​​ ಸಿಗ್ನಲ್ ಕೊಟ್ರೆ ತಕ್ಷಣವೇ 1 ರಿಂದ 8ನೇ ತರಗತಿ ಆರಂಭ -ರಾಜ್ಯ ಸರ್ಕಾರ

ನಾಳೆ ತಜ್ಞರು ಗ್ರೀನ್​​ ಸಿಗ್ನಲ್ ಕೊಟ್ರೆ ತಕ್ಷಣವೇ 1 ರಿಂದ 8ನೇ ತರಗತಿ ಆರಂಭ -ರಾಜ್ಯ ಸರ್ಕಾರ

ಚಿಕ್ಕಮಗಳೂರು: 9 ರಿಂದ 12 ಶಾಲೆ ಪ್ರಾರಂಭವಾದ ನಂತರ ಪೋಷಕರು ಹಾಗೂ ಮಕ್ಕಳ ಉತ್ಸಾಹ ಚೆನ್ನಾಗಿತ್ತು ಅಂತ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಜಿಲ್ಲೆಯಲ್ಲಿ​ ಹೇಳಿಕೆ ನೀಡಿದ್ದಾರೆ.

blank

ಹಲವು ಶಾಲೆಗಳಿಗೆ ಭೇಟಿ ನೀಡಿದಾಗ ಎಲ್ಲರ ಅಭಿಪ್ರಾಯವೂ ಪೂರ್ಣವಾಗಿ ಶಾಲೆಯನ್ನು ತೆರೆಯುವಂತೆ ಅಪೇಕ್ಷಯಿತ್ತು. ಆದರೆ ಕೋವಿಡ್ ಇರೋದ್ರಿಂದ ತಜ್ಞರ ಅಭಿಪ್ರಾಯ ಇಲ್ಲದೆ ನಿರ್ಣಯ ತೆಗೆದುಕೊಳ್ಳೋ ಪ್ರಯತ್ನವನ್ನ ಸರ್ಕಾರ ಮಾಡ್ಲಿಲ್ಲ. ಹೀಗಾಗಿ ನಾಳೆ ಮುಖ್ಯ ಮಂತ್ರಿ ಅವ್ರು ತಜ್ಞರು ಜೊತೆ ಸಭೆ ನಡೆಸ್ತಾರೆ. ಸಭೆಯ ನಂತರ ಮುಖ್ಯಮಂತ್ರಿ ತೆಗೆದುಕೊಳ್ಳೋ ನಿರ್ಣಯಕ್ಕೆ ಶಿಕ್ಷಣ ಇಲಾಖೆ ಬದ್ಧವಾಗಿರುತ್ತೆ. ಶಿಕ್ಷಣ ಇಲಾಖೆ ಪೂರ್ಣವಾಗಿ ಎಲ್ಲದಕ್ಕೂ ತಯಾರಾಗಿದೆ.

ತಜ್ಞರು ಗ್ರೀನ್ ಸಿಗ್ನಲ್ ನೀಡಿದ್ರೆ ತಕ್ಷಣವೇ ಪ್ರಾರಂಭಕ್ಕೆ ತಯಾರಿದ್ದೇವೆ. ಮೊದಲು 6 ರಿಂದ 8 ನಂತ್ರ 1 ರಿಂದ 5 ಪ್ರಾರಂಭಿಸುವ ಅಭಿಪ್ರಾಯವಿದೆ. ಹೀಗಾಗಿ ನಾಳೆ ಸಿಎಂ ನೇತೃತ್ವದಲ್ಲಿ ತಜ್ಞರ ಅಭಿಪ್ರಾಯ ಬಂದ ಮೇಲೆ ಏನೂ ಅನ್ನೋದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಅಂತ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದಾರೆ.

blank

 

Source: newsfirstlive.com Source link