ವಿಚ್ಛೇದನಕ್ಕೆ ಮುಂದಾದ್ರಾ ಸಮಂತಾ, ನಾಗಚೈತನ್ಯ?

ಹೈದರಾಬಾದ್: ದಕ್ಷಿಣ ಭಾರತ ಸಿನಿ ಅಂಗಳದ ಸೂಪರ್ ಹಿಟ್ ಜೋಡಿ ಸಮಂತಾ ಮತ್ತು ನಾಗಚೈತನ್ಯ. ಪ್ರೇಮಪಕ್ಷಿಗಳ ಹಾಗೆ ಹಾರಡುತ್ತಿದ್ದ ಈ ಜೋಡಿ ನಡುವೆ ಬಿರುಕು ಮೂಡಿದ್ದು, ಈಗ ವಿಚ್ಛೇದನದವರೆಗೂ ಹೋಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

2010ರಲ್ಲಿ ತೆರೆಕಂಡ ‘ಯೇ ಮಾಯಾ ಚೆಸಾವಾ’ ಸಿನಿಮಾದಲ್ಲಿ ತೆರೆ ಮೇಲೆ ಜೋಡಿಯಾಗಿದ್ದ ಇವರು 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ದಾಂಪತ್ಯ ಜೀವನ ಪ್ರಾರಂಭವಾಗಿ ಕೇವಲ ನಾಲ್ಕು ವರ್ಷಗಳವಷ್ಟೇ ಆಗಿದೆ. ಈಗ ಇವರ ನಡುವೆ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿಬರುತ್ತಿದೆ.ಇದನ್ನೂ ಓದಿ:ಯುವನಟನಿಗೆ ಲಾಂಗ್ ಹಿಡಿಯುವುದನ್ನು ಹೇಳಿಕೊಟ್ಟ ಜೋಗಿ

ಯಾಕೆ ಈ ಗುಸುಗುಸು?
‘ಅಕ್ಕಿನೇನಿ’ ಸೊಸೆಯಾದ ಸಮಂತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಅಕ್ಕಿನೇನಿ ಎಂದು ಮದುವೆ ನಂತರ ಹಾಕಿಕೊಂಡಿದ್ದರು. ಈ ಹೆಸರಿನಿಂದಲ್ಲೇ ಇವರನ್ನು ಕರೆಯಲಾಗುತ್ತಿತ್ತು. ಆದರೆ ದಿಢೀರ್ ಎಂದು ಸಮಂತಾ ತಮ್ಮ ಫೇಸ್‍ಬುಕ್, ಇನ್‍ಸ್ಟಾಗ್ರಾಮ್ ಹಾಗೂ ಟ್ವೀಟರ್‍ನಲ್ಲಿ ‘ಅಕ್ಕಿನೇನಿ’ ಹೆಸರನ್ನು ತೆಗೆದುಹಾಕಿದ್ದಾರೆ. ಇದು ಸಂದೇಹಕ್ಕೆ ಕಾರಣವಾಗಿದೆ.ಇದನ್ನೂ ಓದಿ:ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ?: ಶ್ರುತಿ

Source: publictv.in Source link