ಶೃತಿ ಹಾಸನ್​ ಫೋಟೋಗೆ ಫ್ಯಾನ್ಸ್ ಫುಲ್​​ ಶಾಕ್​​​; ಇದು ನಿವೇನಾ ಎಂದು ಪ್ರಶ್ನೆ ಮಾಡಿದ್ಯಾಕೆ?

ಶೃತಿ ಹಾಸನ್​ ಫೋಟೋಗೆ ಫ್ಯಾನ್ಸ್ ಫುಲ್​​ ಶಾಕ್​​​; ಇದು ನಿವೇನಾ ಎಂದು ಪ್ರಶ್ನೆ ಮಾಡಿದ್ಯಾಕೆ?

ನಟ ಕಮಲ್​ ಹಾಸನ್​ ಪುತ್ರಿ ಶೃತಿ ಹಾಸನ್​ ಸದ್ಯ ಸೌಥ್​ ಸಿನಿ ದುನಿಯಾದ ಬಹುಬೇಡಿಕೆಯ ನಟಿಮಣಿಯರಲ್ಲೊಬ್ಬರು. ಸದಾ ಸುದ್ದಿಯಲಿರೋ ಈ ನಟಿಮಣಿ ಸಾಲು ಸಾಲು ಸಿನಿಮಾಗಳಲ್ಲಿ ಫುಲ್​ ಬ್ಯುಸಿಯೋ ಬ್ಯುಸಿ.

blank

ಸೋಶಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​ ಆಗಿರೋ ಶೃತಿ ಹಾಸನ್​ ಆಗಾಗ ತಮ್ಮ ಬ್ಯೂಟಿಫುಲ್​ ಪೋಟೋಗಳನ್ನ ಅಪ್​ಲೋಡ್​ ಮಾಡ್ತಾನೆ ಇರ್ತಾರೆ. ಅದರಂತೇ ಈ ಬಾರಿಯೂ ಶೃತಿ ತಮ್ಮ 17 ನೇ ವಯಸ್ಸಿನಲ್ಲಿ ಆಗಷ್ಟೇ ಮೋಡಲಿಂಗ್​ ಕ್ಷೇತ್ರಕೆ ಕಾಲಿಟ್ಟ ಸಂದರ್ಭದಲ್ಲಿ ಕ್ಲಿಕಿಸಿದ ಒಂದಿಷ್ಟು ಪೋಟೋಗಳನ್ನ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

blank

ಇನ್ನು ಈ ಪೋಟೋಗಳನ್ನು ನೋಡಿ ಶೃತಿ ಫ್ಯಾನ್ಸ್​ ಫುಲ್​ ಶಾಕ್​ ಅಗಿದ್ದಾರೆ. ಕೆಲವರು ಶೃತಿ ಪೋಟೋಸ್​ ನೋಡಿ ಖುಷಿ ಪಟ್ಟರೆ ಇನ್ನು ಕೆಲ ಅಭಿಮಾನಿಗಳು ಇದು ನಿಜಕೂ ನೀವೆನಾ ಅಂತಾ ಶೃತಿ ಪೋಟೋಸ್​ಗೆ ಕಮೆಂಟ್​ ಮಾಡಿದ್ದಾರೆ.

Source: newsfirstlive.com Source link