ನೀರಜ್ ಚೋಪ್ರಾ ಕೋಚ್​​ಗೆ ಸನ್ಮಾನ; ಶಿರಸಿಯಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪನೆಗೆ ಆಸೆ ವ್ಯಕ್ತಪಡಿಸಿದ ಕಾಶಿನಾಥ್

ನೀರಜ್ ಚೋಪ್ರಾ ಕೋಚ್​​ಗೆ ಸನ್ಮಾನ; ಶಿರಸಿಯಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪನೆಗೆ ಆಸೆ ವ್ಯಕ್ತಪಡಿಸಿದ ಕಾಶಿನಾಥ್

ಉತ್ತರ ಕನ್ನಡ: ರಾಷ್ಟ್ರೀಯ ಕ್ರೀಡಾದಿನದ ಅಂಗವಾಗಿ ರಾಷ್ಟ್ರೀಯ ಸೇನಾ ಅಕಾಡೆಮಿಯ ಜಾವೆಲಿನ್ ಕೋಚ್​ ಕಾಶಿನಾಥ ನಾಯ್ಕ್​ ಅವರನ್ನು ಕ್ರೀಡಾ ಇಲಾಖೆ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಸನ್ಮಾನಿಸಲಾಯಿತು.

blank

ಒಲಿಂಪಿಕ್​ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾರವರಿಗೆ ತರಬೇತಿ ನೀಡಿದ್ದ ಕಾಶಿನಾಥ ನಾಯ್ಕ, ಕ್ರೀಡಾ ಸಾಧಕನ ಜತೆ ತರಬೇತುದಾರರನ್ನೂ ಗುರುತಿಸಿದ್ದು ಅವಿಸ್ಮರಣೀಯ ಅಂದ್ರು. ಕ್ರೀಡಾ ಅಕಾಡೆಮಿ ಸ್ಥಾಪಿಸುವ ಗುರಿಯಿದೆ. ಖೇಲೊ ಇಂಡಿಯಾ ಸೇರಿದಂತೆ ಕ್ರೀಡೆಗೆ ಸಂಬಂಧಿಸಿದ ಸೌಲಭ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ ಅಂತಾ ಇದೇ ವೇಳೆ ಅವರು ತಿಳಿಸಿದರು.

blank

ವಿದೇಶಿ ಕೋಚ್​ಗಳಿಗೆ ಸಿಕ್ಕ ಪ್ರೋತ್ಸಾಹ, ಸ್ವದೇಶಿ ಕೋಚ್​ಗಳಿಗೆ ಮೊದಲು ಸಿಗುತ್ತಿರಲಿಲ್ಲ ಅನ್ನೋ ಬೇಸರವಿತ್ತು. ಈಗ ಬೆಂಬಲ ಸಿಗೋ ಭರವಸೆ ಮೂಡಿದೆ ಅಂತಾ ಇದೇ ವೇಳೆ ಹೇಳಿದ್ರು. ಇನ್ನೂ ಈ ಕಾರ್ಯಕ್ರಮದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.

blank

 

Source: newsfirstlive.com Source link