ಮುಗ್ಧೆಯಾಗಿ ‘ಹಿಟ್ಲರ್​ ಕಲ್ಯಾಣ’ಗೆ ಎಂಟ್ರಿ ಕೊಟ್ಟ ಸೌಮ್ಯಾ ಭಟ್​..!

ಮುಗ್ಧೆಯಾಗಿ ‘ಹಿಟ್ಲರ್​ ಕಲ್ಯಾಣ’ಗೆ ಎಂಟ್ರಿ ಕೊಟ್ಟ ಸೌಮ್ಯಾ ಭಟ್​..!

ಹಿಟ್ಲರ್​ ಕಲ್ಯಾಣ ದಿನೆ ದಿನೇ ಹೊಸ ಟ್ವಿಸ್ಟ್ ನೀಡುತ್ತಾ ಸಿರಿಯಲ್ ಬಗೆಗಿನ ಕುತೂಹಲವನ್ನು ಹೆಚ್ಚಿಸುತ್ತಿದೆ. ಇಷ್ಟು ದಿನ ಏಜೆ ಕಂಡ್ರೆ ಉರಿದು ಬೀಳುತ್ತಿದ್ದ ಲೀಲಾ, ಇದೀಗ ಅವರ ಹತ್ತಿರವೇ ಸಹಯವನ್ನು ಕೇಳಿದ್ದಾರೆ. ತನ್ನ ತಂಗಿಯ ಪ್ರಾಣವನ್ನು ಉಳಿಸಿ ಆ ದೇವ್​ನಿಂದ ಕಾಪಡಿ ಎಂದು ಅಂಗಲಾಚಿದ್ದಾಳೆ. ಇದಕ್ಕೆ ಎಜೆ ಕೂಡಾ ಒಪ್ಪಿಕೊಂಡಿದ್ದಾರೆ.

blank

ಮೊನ್ನೆ ಮೊನ್ನೆಯಷ್ಟೆ ದೇವ್​ ಪಾತ್ರಕ್ಕೆ ಬಣ್ಣ ಹಚ್ಚಿದವರು ಯಾರು ಎಂಬ ಮಾಹಿತಿಯನ್ನ ನಾವು ನಿಮಗೆ ನೀಡಿದ್ವಿ.. ಇದೀಗ ದೇವ್​ ಪತ್ನಿ ರೋಲ್​ನಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬವುದನ್ನು ತಿಳಿಸ್ತಿವಿ.
ಯೆಸ್​, ಲಕ್ಷ್ಮಿ ಭಾರಮ್ಮ ಧಾರಾವಾಹಿಯಲ್ಲಿ ಮೇಧಾ ಪಾತ್ರಕ್ಕೆ ಬಣ್ಣ ಹಿಚ್ಚಿದ್ದ ಸೌಮ್ಯ ಭಟ್ ಒಂದು ಪಾಸಿಟೀವ್​ ರೋಲ್​ ಮೂಲಕ ಜನರನ್ನು ರಂಜಿಸಿದ್ರು. ಪ್ರೇಕ್ಷಕರಿಗೆ ಮೇಧಾ ಪಾತ್ರ ತುಂಬಾನೆ ಇಷ್ಟವಾಗಿತ್ತು..
ಬಳಿಕ ಸೌಮ್ಯಾ ಭಟ್​ ಕನ್ನಡತಿ ಧಾರಾವಾಹಿಯಲ್ಲಿ ಆಶಿತಾ ಅಂದ್ರೆ ಹರ್ಷನ ಸೆಕ್ರೆಟರಿ ಪಾತ್ರಕ್ಕೆ ಜೀವ ತಂಬಿದ್ದಾರೆ. ಆ ರೋಲ್​ ಚನ್ನಾಗಿ ಮೂಡಿ ಬಂದಿದೆ..

blank

ಇದೀಗ ಟಾಪ್​ ಒನ್​ನಲ್ಲಿ ಇರುವ ಹಿಟ್ಲರ್​ ಕಲ್ಯಾಣ ಧಾರಾವಾಹಿಯಲ್ಲಿ ದೇವ್​ ಪತ್ನಿ ಪಾತ್ರದಲ್ಲಿ ಸೌಮ್ಯಾ ಅಭಿನಯಿಸ್ತಾಯಿದ್ದು.. ಪವಿತ್ರ ಒಬ್ಬ ಮುಗ್ಧ ಮಹಿಳೆಯಾಗಿದ್ದು ತನ್ನ ಗಂಡನನ್ನು ಅತಿಯಾಗಿ ನಂಬುವ ಪತ್ನಿಯಾಗಿರುತ್ತಾಳೆ.. ಯಾರು ಏನೇ ಹೇಳಿದ್ರು ತನ್ನ ಗಂಡನ ಬಗ್ಗೆ ಒಂಚೂರು ಅನುಮಾನ ಪಡದಂತೆಯೇ ಇರುತ್ತಾಳೆ.. ಅದೇ ರೀತಿ ಗಂಡ ದೇವ್ ತನ್ನ ಪತ್ನಿಯ ಮುಗ್ಧತೆಯನ್ನು ಚನ್ನಾಗಿ ಬಳಸಿಕೊಂಡು ಮೋಸ ಮಾಡುತ್ತಿರುತ್ತಾರೆ. ಇದು ಸೌಮ್ಯಾ ಭಟ್​ ಅವರ ಹೊಸ ಪ್ರಾಜೆಕ್ಟ್​ನ ಪಾತ್ರವಾಗಿದೆ.. ನಮ್ಮ ಕಡೆಯಿಂದ ಸೌಮ್ಯಾ ಅವರಿಗೆ ಅಲ್​ ದಿ ಬೆಸ್ಟ್.​

Source: newsfirstlive.com Source link