ಪ್ಯಾರಾ ಒಲಿಂಪಿಕ್​​ನಲ್ಲಿ ಇಂದು ಭಾರತಕ್ಕೆ 3 ಪದಕ; ದೇಶದ ಕೀರ್ತಿ ಪತಾಕೆ ಹಾರಿಸಿದ ಸಾಧಕರಿಗೆ ಗಣ್ಯರ ಶುಭಾಶಯ

ಪ್ಯಾರಾ ಒಲಿಂಪಿಕ್​​ನಲ್ಲಿ ಇಂದು ಭಾರತಕ್ಕೆ 3 ಪದಕ; ದೇಶದ ಕೀರ್ತಿ ಪತಾಕೆ ಹಾರಿಸಿದ ಸಾಧಕರಿಗೆ ಗಣ್ಯರ ಶುಭಾಶಯ

ನವದೆಹಲಿ: ಟೊಕಿಯೋ ಪ್ಯಾರಾ ಒಲಿಂಪಿಕ್ಸ್​​ನಲ್ಲಿ ಭಾರತಕ್ಕೆ ಇಂದು 3 ಪದಕಗಳು ಬಂದಿವೆ. ರಾಷ್ಟ್ರೀಯ ಕ್ರೀಡಾ ದಿನದಂದೇ ಭಾರತಕ್ಕೆ ಪದಕ ಬಂದಿದ್ದು, ಮತ್ತಷ್ಟು ವಿಶೇಷ ಎನಿಸಿದೆ. ಭಾರತದ ಹಿರಿಮೆಯನ್ನ ಎತ್ತಿಹಿಡಿದ ಕ್ರೀಡಾ ಸಾಧಕರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಪ್ಯಾರಾ ಒಲಿಂಪಿಕ್ಸ್​​​ನಲ್ಲಿ ಭಾರತಕ್ಕೆ ಮೂರನೇ ಪದಕ: ಡಿಸ್ಕಸ್​ ಥ್ರೋನಲ್ಲಿ ವಿನೋದ್​​ಗೆ ಕಂಚು

ಮಿಂಚಿದ ಭವಿನಾ
ಮಹಿಳಾ ಟೇಬಲ್ ಟೆನಿಸ್ ಸಿಂಗಲ್ಸ್​ನಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆ ಮೂಡಿಸಿದ್ದ ಭವಿನಾ, ಇಂದು ನಡೆದ ಫೈನಲ್​ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ ಜೋ ಯಿಂಗ್ ಎದುರು 3-0 (11-7, 11-5, 11-6) ಸೆಟ್​​ಗಳ ಅಂತರದಿಂದ ಸೋಲು ಅನುಭವಿಸಿದರು. ಇದರಿಂದಾಗಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

ಇದನ್ನೂ ಓದಿ: GOOD NEWS: ಟೊಕಿಯೋ ಪ್ಯಾರಾ ಒಲಿಂಪಿಕ್; ಹೈ-ಜಂಪ್​​​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ

ನಿಶದ್ ಕುಮಾರ್
ನಿಶದ್ ಕುಮಾರ್ ಹೊಸ ದಾಖಲೆ ಸೃಷ್ಟಿಸಿದ್ದು, ಹೈ-ಜಂಪ್​​ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಪುರುಷರ ಹೈ ಜಂಪ್​ ವಿಭಾಗದಲ್ಲಿ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ. ಪುರುಷರ ಟಿ 47 ಹೈ ಜಂಪ್​ನಲ್ಲಿ 2.06 ಮೀಟರ್ ಜಿಗಿದಿದ್ದಾರೆ. ನಿಶಾದ್​ ಮೊದಲ ಪ್ರಯತ್ನದಲ್ಲಿ ಜಿಗಿಯುವಲ್ಲಿ ವಿಫಲರಾದ ನಿಶಾದ್​ ಕುಮಾರ್, ಎರಡನೇ ಪ್ರಯತ್ನದಲ್ಲಿ 2.06 ಮೀಟರ್​ ಎತ್ತರಕ್ಕೆ ಜಿಗಿಯುವ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ರು.

ವಿನೋದ್ ಕುಮಾರ್
ಪುರುಷರ ಡಿಸ್ಕಸ್​ ಥ್ರೋ-F52 ವಿಭಾಗದಲ್ಲಿ ವಿನೋದ್​ ಕುಮಾರ್​ ಕಂಚಿಕ ಪದಕ ಗೆದ್ದುಕೊಂಡಿದ್ದಾರೆ. 17.46 ಮೀಟರ್​ ದೂರ ಎಸೆದಿರುವ ವಿನೋದ್​ ಕುಮಾರ್ ಕಂಚಿನ ಪದಕ ಗೆದ್ದರೆ, 20.02 ಮೀಟರ್​​ ದೂರ ಚಕ್ರ ಎಸೆದಿರುವ ಪೋಲೆಂಡ್​​​ನ ಪಿ ಕೊಸೆವಿಕ್​ ಚೆನ್ನ ಗೆದ್ದಿದ್ದಾರೆ. 19.98 ಮೀಟರ್​​ ದೂರ ಎಸೆದ ವೆಲಿಮಿರ್​​ ಸ್ಯಾಂಡೋರ್​​ ಬೆಳ್ಳಿ ಪದಕ ಗೆದ್ದಕ ಗೆದ್ದುಕೊಂಡಿದ್ದಾರೆ. ಪ್ಯಾರಾಲಿಂಪಿಕ್ಸ್​​​​ನಲ್ಲಿ ಮೊದಲ ಪದಕವನ್ನ ಟೇಬಲ್​ ಟೆನ್ನಿಸ್​​ನಲ್ಲಿ ಭಾವಿನಾ ಪಟೇಲ್​ ಗೆದ್ದಿದ್ದಾರೆ. ಇಂದು ಹೈಜಂಪ್ಸ್​​​ನಲ್ಲಿ ನಿಶಾದ್​​ ಕುಮಾರ್​ ಕೂಡ ಬೆಳ್ಳಿ ಗೆದ್ದಿದ್ದಾರೆ.

ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭವಿನಾಗೆ ಕ್ರಿಕೆಟ್​ ದಿಗ್ಗಜರಿಂದ ಅಭಿನಂದನೆಗಳ ಮಹಾಪೂರ

Source: newsfirstlive.com Source link