ವಿಶ್ವದ ಅತೀ ಎತ್ತರದಲ್ಲಿರುವ ಲಡಾಖ್​​ನ ‘ಮೊಬೈಲ್​ ಥಿಯೇಟರ್’​​ನಲ್ಲಿ ‘ಬೆಲ್​ ಬಾಟಮ್’ ಚಿತ್ರ ಪ್ರದರ್ಶನ

ವಿಶ್ವದ ಅತೀ ಎತ್ತರದಲ್ಲಿರುವ ಲಡಾಖ್​​ನ ‘ಮೊಬೈಲ್​ ಥಿಯೇಟರ್’​​ನಲ್ಲಿ ‘ಬೆಲ್​ ಬಾಟಮ್’ ಚಿತ್ರ ಪ್ರದರ್ಶನ

ಅಗಸ್ಟ್​ 19 ರಂದು ಬಿಡುಗಡೆಯಾದ ಅಕ್ಷಯ್ ಕುಮಾರ್ ಅಭಿನಯದ ‘ಬೆಲ್​ಬಾಟಂ’ ನಿಧಾನವಾಗಿ ಬಾಕ್ಸಾಫೀಸ್​ನಲ್ಲಿ ಸದ್ದು ಮಾಡ್ತಿದೆ.

ಕೊರೊನಾ ಎರಡನೇ ಅಲೆಯಿಂದ ಚಿತ್ರಮಂದಿರಗಳು ಬಂದ್​ ಆಗಿ ಮತ್ತೆ ಓಪನ್ ಆಗುತ್ತಿರುವ ಹೊತ್ತಿನಲ್ಲಿ ರಿಲೀಸ್ ಆಗಿರುವ ಮೊದಲ ಬಾಲಿವುಡ್ ಚಿತ್ರ ಇದಾಗಿದೆ. ವಿಶೇಷ ಅಂದ್ರೆ ಇದೀಗ ಲಡಾಖ್‌ನಲ್ಲಿರುವ ವಿಶ್ವದ ಅತಿ ಎತ್ತರದಲ್ಲಿರುವ ಮೊಬೈಲ್ ಥಿಯೇಟರ್‌ನಲ್ಲಿ ಈ ಚಿತ್ರ ಪ್ರದರ್ಶನ ಕಾಣ್ತಿದೆ.

ಈ ವಿಚಾರವನ್ನ ಖುದ್ದು ಅಕ್ಷಯ್ ಕುಮಾರ್ ಅವರೇ ಹಂಚಿಕೊಂಡಿದ್ದಾರೆ. ಮೊಬೈಲ್ ಥಿಯೇಟರ್​ ಚಿತ್ರವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅಕ್ಷಯ್ ಕುಮಾರ್.. ಲಡಾಖ್‌ನ ಲೇಹ್‌ನಲ್ಲಿರುವ ವಿಶ್ವದ ಅತ್ಯುನ್ನತ ಮೊಬೈಲ್ ಥಿಯೇಟರ್‌ನಲ್ಲಿ ಬೆಲ್ ಬಾಟಮ್ ಚಿತ್ರ ಪ್ರದರ್ಶಿಸಲಾಯಿತು. ಇದು ನನಗೆ ತುಂಬಾ ಹೆಮ್ಮೆ ಎನಿಸಿದೆ. ಥಿಯೇಟರ್ 11,562 ಅಡಿ ಎತ್ತರದಲ್ಲಿದೆ. -28 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿಯೂ ಚಿತ್ರ ಮಂದಿರ ಕಾರ್ಯನಿರ್ವಹಿಸುತ್ತಿದೆ. ಎಂಥಹ ಅದ್ಭುತ ಸಾಧನೆ ಅಂತಾ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

Source: newsfirstlive.com Source link