ಸಾವಿನಲ್ಲೂ ಒಂದಾದ ಅಣ್ಣ-ತಮ್ಮ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಸಾವಿನಲ್ಲೂ ಒಂದಾದ ಅಣ್ಣ-ತಮ್ಮ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಬೆಳಗಾವಿ: ವಿದ್ಯುತ್ ಮೋಟರ್ ಸ್ಟಾರ್ಟ್ ಮಾಡುವಾಗ​ ಶಾಕ್ ಹೊಡೆದು ಸಹೋದರರಿಬ್ಬರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ರಾಯಬಾಗ ತಾಲೂಕಿನ ನೀಲಜಿ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ.

25 ವರ್ಷದ ರಾಜು ಹಾಗೂ 24 ವರ್ಷದ ಶಂಕರ್ ಸಾವನ್ನಪ್ಪಿದ ದುರ್ದೈವಿಗಳು. ಮೃತ ಸಹೋದರರಿಬ್ಬರು ಬೆಳಗ್ಗೆ ಹೊಲಕ್ಕೆ ನೀರು ಹಾಯಿಸಲು ಮೋಟರ್ ಪ್ರಾರಂಭಿಸುವಾಗ ಈ ಘಟನೆ ನಡೆದಿದೆ.

blank

ತೀವ್ರ ಅಸ್ವಸ್ಥಗೊಂಡಿದ್ದ ಸಹೋದರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ‌ಕುಡಚಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ಇದನ್ನೂ ಓದಿ: ಸತ್ತರೆ ಉಚಿತ ಶವ ಸಂಸ್ಕಾರ: ಬಿಜೆಪಿ ಪ್ರಣಾಳಿಕೆ ಬಗ್ಗೆ ನ್ಯೂಸ್​ಫಸ್ಟ್​ ವರದಿಗೆ DKS ಮೆಚ್ಚುಗೆ

Source: newsfirstlive.com Source link