ಉಡುಪಿ DC ಜಿ.ಜಗದೀಶ್ ವರ್ಗಾವಣೆ.. ಎಂ.ಕೂರ್ಮರಾವ್​ ನೂತನ ಜಿಲ್ಲಾಧಿಕಾರಿ

ಉಡುಪಿ DC ಜಿ.ಜಗದೀಶ್ ವರ್ಗಾವಣೆ.. ಎಂ.ಕೂರ್ಮರಾವ್​ ನೂತನ ಜಿಲ್ಲಾಧಿಕಾರಿ

ಉಡುಪಿ: ಜಿಲ್ಲಾಧಿಕಾರಿ ಜಿ.ಜಗದೀಶ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ಜಗದೀಶ್​ ಅವರನ್ನ ನೇಮಕ ಮಾಡಲಾಗಿದೆ.

ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎಂ.ಕೂರ್ಮರಾವ್​ ಅವರನ್ನ ನೇಮಿಸಲಾಗಿದೆ. ಈಶಾನ್ಯ ಸಾರಿಗೆಯ ವ್ಯವಸ್ಥಾಪಕರಾಗಿದ್ದ ನಿರ್ದೇಶಕರಾಗಿದ್ದ ಎಂ.ಕೂರ್ಮರಾವ್​ ಅವರು ಇದೀಗ ಉಡುಪಿಯ ಹೊಸ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

ಈ ಹಿಂದೆ ಜಿ.ಜಗದೀಶ್​ ಕೊರೊನಾ ನಿರ್ವಹಣೆಯ ಸಂದರ್ಭದಲ್ಲಿ ತಮ್ಮ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ, ಎಚ್ಚರಿಕೆ, ಮುಂಜಾಗ್ರತಾ ಕ್ರಮಗಳನ್ನು ಹಂಚಿಕೊಳ್ಳುತ್ತಿದ್ದರು. ಜಿಲ್ಲೆಯಲ್ಲಿ ಕೊರೊನಾ ನಿರ್ವಹಣೆ ವಿಚಾರದಲ್ಲಿ ಜನಪ್ರಿಯತೆ ಗಳಿಸಿದ್ದರು.

Source: newsfirstlive.com Source link