ಕುಕ್ಕರ್​ನೊಳಗೆ ತಲೆ ಸಿಕ್ಕಿಸಿಕೊಂಡ ಮಗು.. ಸತತ 2 ಗಂಟೆ ಹರಸಾಹಸಪಟ್ಟ ವೈದ್ಯರು

ಕುಕ್ಕರ್​ನೊಳಗೆ ತಲೆ ಸಿಕ್ಕಿಸಿಕೊಂಡ ಮಗು.. ಸತತ 2 ಗಂಟೆ ಹರಸಾಹಸಪಟ್ಟ ವೈದ್ಯರು

ಉತ್ತರ ಪ್ರದೇಶ: ಮಕ್ಕಳು ತುಂಟಾಟ ಮಾಡಿದ್ರೆ ತುಂಬಾ ಚೆನ್ನಾಗಿರುತ್ತೆ. ಅವ್ರ ಕೀಟ್ಲೆಗಳನ್ನ ನೋಡ್ತಾ, ಅವ್ರನ್ನ ಮುದ್ದಾಡ್ಬೇಕು ಅನ್ಸುತ್ತೆ. ಆದ್ರೆ, ಕೆಲವು ಮಕ್ಕಳು ಆ ಕೀಟ್ಲೆ, ತುಂಟಾಟದಲ್ಲೇ ಏನೋ ಒಂದು ಅನಾಹುತವನ್ನ ಮಾಡಿಕೊಂಡ್​ ಬಿಟ್ಟಿರುತ್ತೆ. ಇದೀಗ, ಒಂದೂವರೆ ವರ್ಷದ ಗಂಡು ಮಗು ಕುಕ್ಕರ್​ನಲ್ಲಿ ಆಟ ಆಡ್ಬೇಕಾದ್ರೆ ತಲೆಯನ್ನ ಆ ಕುಕ್ಕರ್​ ಒಳಗೆ ಹಾಕೊಂಡ್​ಬಿಟ್ಟಿದೆ.

ಹೌದು, ಉತ್ತರ ಪ್ರದೇಶದ ಅಗ್ರಾದಲ್ಲಿ ಚಿಕ್ಕ ಬಾಲಕನೊಬ್ಬ, ತನ್ನ ಮಾವನ ಮನೆಯಲ್ಲಿ ಆಟ ಆಡಿಕೊಂಡಿದ್ದ, ಈ ವೇಳೆ, ಕುಕ್ಕ್​ರ್​ನೊಳಗೆ ತನ್ನ ತಲೆಯನ್ನ ಹಾಕಿ, ಹೊರಗೆ ಬರೋದಕ್ಕೆ ಆಗ್ದೇ ಒದ್ದಾಡಿದ್ದಾನೆ. ತಕ್ಷಣ, ಮಗುವಿನ ಮನೆಯವರೇ ಬಾಲಕನ ತಲೆಯಿಂದ ಕುಕ್ಕರ್​ನ್ನು ಹೊರಗೆ ತೆಗೆಯಲು ಪ್ರಯತ್ನಿಸಿದ್ದಾರೆ. ಆದ್ರೆ, ಸಾಧ್ಯವಾಗಿಲ್ಲ, ಹತ್ತಿರದ ಎಸ್​ ಎಂ ಚಾರಿಟಬಲ್​ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ವೈದ್ಯರು ಸತತ ಎರಡು ಗಂಟೆಗಳ ಕಾಲಾವಕಾಶ ತೆಗೆದುಕೊಂಡು ಮಗುವನ್ನ ರಕ್ಷಿಸಿದ್ದಾರೆ.

ಗ್ರೈಂಡರ್​ನಿಂದ ಕುಕ್ಕರ್​ ತೆಗೆದಿದ್ದಾರೆ.

ಡಾ. ಫರ್ಹತ್​ ಖಾನ್​ ಹಾಗೂ ಅವ್ರ ತಂಡ ಮಗು ತಲೆ ಸಿಕ್ಕಿಹಾಕೊಂಡಿದ್ದ ಕುಕ್ಕರ್​ನ ಗ್ರೈಂಡಿಂಗ್​ ಮಷಿನ್​ ಮೂಲಕ ನಿಧಾನವಾಗಿ, ಮಗುವಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕುಕ್ಕರ್​ನ ಸೀಳಿ ಮಗುವಿನ ತಲೆಯಿಂದ ಕುಕ್ಕರ್​ನ್ನು ಹೊರಗೆ ತೆಗೆದಿದ್ದಾರೆ. ಸದ್ಯ, ಮಗು ಹುಷಾರಾಗಿದ್ದು, ಎಂದಿನಂತೆ ಆಟವಾಡಿಕೊಂಡಿದೆ ಅಂತ ಕುಟುಂಬಸ್ಥರು ತಿಳಿಸಿದ್ದಾರೆ.

Source: newsfirstlive.com Source link