ಹೈದರಾಬಾದ್​ನಲ್ಲಿ ಮಾರ್ಟಿನ್ ಫೈಟಿಂಗ್ ಶೂಟ್.. ಕೋಟಿ ವೆಚ್ಚದ ಸೆಟ್​​​ನಲ್ಲಿ ಧ್ರುವನ ಆ್ಯಕ್ಷನ್

ಹೈದರಾಬಾದ್​ನಲ್ಲಿ ಮಾರ್ಟಿನ್ ಫೈಟಿಂಗ್ ಶೂಟ್.. ಕೋಟಿ ವೆಚ್ಚದ ಸೆಟ್​​​ನಲ್ಲಿ ಧ್ರುವನ ಆ್ಯಕ್ಷನ್

ಮಾರ್ಟಿನ್ ಸೆಟ್ಟೇರಿದಾಗಿನಿಂದಲೂ ಸ್ಯಾಂಡಲ್​ವುಡ್​ನಲ್ಲಿ ಸೌಂಡ್​ ಮಾಡ್ತಿರೋ ಸಿನಿಮಾ.. ಆಕ್ಷನ್​ ಪ್ರಿನ್ಸ್​ ಧ್ರುವಾ ಸರ್ಜಾ ಹಾಗೂ ಎಪಿ ಅರ್ಜುನ್​ ಕಾಂಬಿನೇಷನ್​ ಸಖತ್​ ಕ್ರೇಜ್​ ಕ್ರಿಯೇಟ್​ ಮಾಡಿದೆ. ಅದ್ಧೂರಿ ಜೋಡಿ ಒಂದಾಗ್ತಿದ್ದಂತೆ ಪೊಗರು ಪೋರನ ಅಭಿಮಾನಿಗಳು ಮಾರ್ಟಿನ್ ಅಪ್ಡೇಟ್​ಗಾಗಿ ಬಕಪಕ್ಷಿಗಳ ತರ ಕಾಯ್ತಿದ್ರು.. ಈಗ ಮಾರ್ಟಿನ್​ ಬಳಗದಿಂದ ಶೂಟಿಂಗ್​ ವಿಚಾರವಾಗಿ ಸಿಹಿ ಸುದ್ದಿಯೊಂದು ಬಂದಿದೆ..ಇನ್ನು ಆ ಸುದ್ದಿ ಕೇಳಿದ್ರೆ ಆಕ್ಷನ್​ ಫ್ರಿನ್ಸ್​ ವಿಐಪಿಗಳು ಥ್ರಿಲ್​ ಆಗೋದಂತೂ ಗ್ಯಾರಂಟಿ..

ಕಟ್​ ಮಸ್ತಾದ ತೋಳು, ಕಣ್​ ಅಲ್ಲೇ ಕೊಲ್ಲೋತರ ಲುಕ್ಕು, ಪಡ್ಡೆ ಹುಡುಗರು ಫಾಲೋ ಮಾಡೋ ಹೇರ್​ ಸ್ಟೈಲ್​, ಇಷ್ಟೆಲ್ಲ ಕುತೂಹಲಕಾರಿ ಅಂಶ ‘ಮಾರ್ಟಿನ್​’ ಚಿತ್ರದ ಫಸ್ಟ್​ ಲುಕ್​ನಲ್ಲಿದೆ. ಇಷ್ಟೆಲ್ಲ ಕ್ವಾಲಿಟಿ ಇದ್ದಮೇಲೆ ಕೇಳಬೇಕಾ, ಮಾರ್ಟಿನ್​ ಚಿತ್ರವನ್ನು ಹೊತ್ತು ಮೆರವಣಿಗೆ ಮಾಡೋಕೆ ಈಗಾಗಲೇ ಧ್ರುವ ಸರ್ಜಾ ಅಭಿಮಾನಿಗಳು ಸಜ್ಜಾಗಿದ್ದಾರೆ.

ಮಾರ್ಟಿನ್​ ಚಿತ್ರದ ಫಸ್ಟ್​ಲುಕ್​ ಟೀಸರ್ ನೋಡಿ ಸೈಕ್​ ಆಗಿದ್ದ, ಆಕ್ಷನ್​ ಫ್ರಿನ್ಸ್​ ವಿಐಪಿಗಳು, ಯಾವಾಗ ಮಾರ್ಟಿನ್​ ಅಡ್ಡದಲ್ಲಿ ಅದ್ಧೂರಿ ಹೈದ ಕಾಣಿಸ್ತಾರೆ ಅಂತ ಕಾಯ್ತಿದ್ರು.. ಅಭಿಮಾನಿಗಳ ಬಯಕೆಯಂತೆ ಆಕ್ಷನ್ ಫ್ರಿನ್ಸ್​ ಧ್ರುವ ಸರ್ಜಾ ಸೈಲೆಂಟ್​ ಆಗಿ ‘ಮಾರ್ಟಿನ್​’ ಶೂಟಿಂಗ್​ ಅಡ್ಡದಲ್ಲಿ ಸೆಟಲ್​ ಆಗಿದ್ದಾರೆ..

ಯೆಸ್​. ಕಳೆದ ಒಂದು ವಾರದಿಂದ ಅಂದ್ರೆ ಆ.17ರಿಂದ ಹೈದರಬಾದ್​ನಲ್ಲಿ ಸದ್ದಿಲ್ಲದೆ ಮಾರ್ಟಿನ್​ ಚಿತ್ರದ ಶೂಟಿಂಗ್​ ಶುರು ಮಾಡಿದ್ದಾರೆ ನಿರ್ದೇಶಕ ಎಪಿ ಅರ್ಜುನ್. ವಿಶೇಷ ಅಂದ್ರೆ ಮೂರು ದಿನಗಳು ಟಾಕಿ ಪೋಶನ್​ ಶೂಟಿಂಗ್​ ಮಾಡಿರುವ ಮಾರ್ಟಿನ್​ ಚಿತ್ರತಂಡ, 4 ನೇ ದಿನದಿಂದ ಆಕ್ಷನ್​ ಸೀಕ್ವೆನ್ಸ್​ ಶೂಟ್​ ಮಾಡೋದ್ರಲ್ಲಿ ನಿರತರಾಗಿದ್ದಾರೆ..

ಬಾಂಬೆ ಫೈಟ್​ ಮಾಸ್ಟರ್​ ರಾಮ್​ ಲಕ್ಷಣ್ ಆಕ್ಷನ್​ ಪ್ರಿನ್ಸ್​ಗೆ ಸ್ಟಂಟ್​ ಕಂಪೋಸ್​ ಮಾಡ್ತಿದ್ರೆ. ಫೈಟ್ ಸೀನ್​ ಶೂಟ್​ ಮಾಡುವ ಸಲುವಾಗಿ ಕೋಟಿ ವೆಚ್ಚದ ಸೆಟ್​ ಹಾಕಲಾಗಿ ಎಂದು ನಿರ್ದೇಶಕ ಎಪಿ ಅರ್ಜುನ್​ ಚಿತ್ರಪ್ರೇಮಿಗಳೇ ತಂಡಕ್ಕೆ ತಿಳಿಸಿದ್ದಾರೆ.. ಅಲ್ಲದೆ ಇನ್ನು 3ದಿನಗಳು ಹೈದರಬಾದ್​ನಲ್ಲೇ ಮಾರ್ಟಿನ್​ ಚಿತ್ರತಂಡ ಫೈಟಿಂಗ್​ ಶೂಟ್​ಗಾಗಿ ಠಿಕಾಣಿ ಹೂಡಲಿದೆ.

ಹೈದರಾಬಾದ್​ನಲ್ಲಿ ಆಕ್ಷನ್​ ಸೀಕ್ವೆನ್ಸ್​ ಕಂಪ್ಲೀಟ್​ ಆಗ್ತಿದಂತೆ ಮಾರ್ಟಿನ್​ ಟೀಂ ಬೆಂಗಳೂರಿಗೆ ವಾಪಸ್ಸಾಗಿ, ಎರಡು ದಿನ ಗ್ಯಾಪ್​​ ಕೊಟ್ಟು ಹೀರೋಯಿನ್​ ಫೈನಲ್​ ಮಾಡ್ಕೊಂಡು, ಬಂಗಾರ ಪೇಟೆಯಲ್ಲಿ ಮತ್ತೆ ಶೂಟಿಂಗ್​ ಶುರು ಮಾಡಲಿದ್ದಾರೆ ಮಾರ್ಟಿನ್​ ಸಿನಿತಂಡ. ಮಾರ್ಟಿನ್​ ಶೂಟಿಂಗ್​ಗಾಗಿ ಬಂಗಾರ ಪೇಟೆಯಲ್ಲಿ 3 ಕೋಟಿ ವೆಚ್ಚದ ಸೆಟ್​ ಈಗಾಗಲೇ ತಲೆ ಎತ್ತಿದ್ದು, ಆ ಸೆಟ್​ನಲ್ಲಿ ಕೆಲವು ಸೀನ್ಗಳನ್ನು ಚಿತ್ರೀಕರಿಸಲು ಅರ್ಜುನ್ ಪ್ಲಾನ್​ ಮಾಡಿಕೊಂಡಿದ್ದಾರೆ.

 

Source: newsfirstlive.com Source link