ಈ ಬ್ಯೂಟಿಗೆ ಬಿತ್ತು 340 ಕೋಟಿ ದಂಡ.. ಮಾಜಿ ಗಂಡ ಬಿಚ್ಚಿಟ್ಟ ರಹಸ್ಯದಿಂದ ಇಕ್ಕಟ್ಟಿಗೆ ಸಿಲುಕಿದ್ಳು ಫೇಮಸ್ ನಟಿ

ಈ ಬ್ಯೂಟಿಗೆ ಬಿತ್ತು 340 ಕೋಟಿ ದಂಡ.. ಮಾಜಿ ಗಂಡ ಬಿಚ್ಚಿಟ್ಟ ರಹಸ್ಯದಿಂದ ಇಕ್ಕಟ್ಟಿಗೆ ಸಿಲುಕಿದ್ಳು ಫೇಮಸ್ ನಟಿ

ತೆರಿಗೆ ವಂಚನೆ ಅನ್ನೋದು ಯಾವುದೇ ದೇಶದಲ್ಲಿ ಆದ್ರೂ ಅದು ಅಪರಾಧವೇ ಆಗಿರುತ್ತೆ. ವಂಚನೆಗೆ ತಕ್ಕಂತೆ ದಂಡವನ್ನು ಹಾಕಲಾಗುತ್ತದೆ, ಶಿಕ್ಷೆ ವಿಧಿಸಲಾಗುತ್ತದೆ. ಆದ್ರೆ, ಚೀನಾದ ಖ್ಯಾತ ನಟಿ ಜೆಂಗ್‌ ಶುವಾಂಗ್‌ಗೆ ಹಾಕಿರುವ ದಂಡ ಕೇಳಿದ್ರೆ ಬೆಚ್ಚಿ ಬೀಳುತ್ತೀರಿ. ಹಾಗಾದ್ರೆ ಆಕೆಗೆ ವಿಧಿಸಿದ ದಂಡ ಎಷ್ಟು?

ವಿಜಯ್​ಗೆ ದಂಡ ಎಷ್ಟು ?

ತಮಿಳಿನ ಖ್ಯಾತ ನಟರಾದ ದಳಪತಿ ವಿಜಯ್‌ ಮತ್ತು ಧನುಷ್‌ ಭಾರೀ ಫೇಮಸ್‌ ನಟರಾಗಿದ್ದಾರೆ. ಈ ಇಬ್ಬರು ನಟರಿಗೆ ಕೋಟ್ಯಂತರ ಜನ ಅಭಿಮಾನಿಗಳಿದ್ದಾರೆ. ಅವರದೇ ಸ್ಟೈಲ್‌ ಅನ್ನು ಅದೆಷ್ಟೋ ಜನ ಫಾಲೋ ಮಾಡ್ತಾರೆ. ಅದೆಷ್ಟೋ ಜನ ಅವರನ್ನು ದೇವರಂತೆ ಪೂಜಿಸುತ್ತಾರೆ. ಆದ್ರೆ, ಈ ಇಬ್ಬರು ಮಹಾನ್‌ ನಟರನ್ನು ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿತ್ತು. ಅದು ಕೂಡ ತೆರಿಗೆ ವಿಚಾರಕ್ಕಾಗಿಯೇ ಆಗಿತ್ತು. ಹೌದು, ನಟ ದಳಪತಿ ವಿಜಯ್‌ ತಾವು ವಿದೇಶದಿಂದ ತರಿಸಿದ್ದ ರೋಲ್ಸ್ ರಾಯ್ಸ್ ಮಾದರಿಯ ಕಾರಿಗೆ ಪೂರ್ಣ ತೆರಿಗೆ ಕಟ್ಟಿರಲಿಲ್ಲ. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್‌ ದಳಪತಿ ವಿಜಯ್‌ ಅವರಿಗೆ, ನಿಜವಾದ ಹೀರೋಗಳು ಸಮಯಕ್ಕೆ ಸರಿಯಾಗಿ ತೆರಿಗೆ ಕಟ್ಟುತ್ತಾರೆ. ನೀವು ಬರೀ ತೆರೆಯ ಮೇಲೆ ಮಾತ್ರ ಹೀರೋಗಳಾಗಿ ಉಳಿಯಬೇಡಿ, ನಿಜ ಜೀವನದಲ್ಲಿಯೂ ಹೀರೋಗಳಾಗಿ ಎಂದು ಛಾಟಿ ಬೀಸಿತ್ತು. ತೆರಿಗೆ ಕಟ್ಟುವ ಸೂಚನೆಯ ಜೊತೆಗೆ 1 ಲಕ್ಷ ರೂಪಾಯಿ ದಂಡ ಹಾಕಿತ್ತು.

blank

ಧನುಷ್​ಗೆ ದಂಡ ಎಷ್ಟು ? 

ಅದೇ ರೀತಿ ನಟ ಧನುಷ್‌ ಕೂಡ ವಿದೇಶದಿಂದ ತರಿಸಿಕೊಂಡಿದ್ದ ದುಬಾರಿ ಬೆಲೆಯ ಕಾರಿಗೆ ಪೂರ್ಣ ತೆರಿಗೆ ಕಟ್ಟಿರಲಿಲ್ಲ. ಇದು ಮದ್ರಾಸ್‌ ಹೈಕೋರ್ಟ್‌ ಮುಂದೆ ವಿಚಾರಣೆ ಬಂದಿತ್ತು. ಆ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌, ಹಾಲು ಮಾರುವವರು, ದಿನಗೂಲಿ ನೌಕರರು ಕೂಡ ತೆರಿಗೆ ಕಟ್ಟುತ್ತಾರೆ. ಪ್ರತಿಯೊಬ್ಬ ನಾಗರಿಕ ತಾನು ಖರೀದಿಸುವ ಹಾಲಿಗೆ ಕೂಡ ತೆರಿಗೆ ಕಟ್ಟುತ್ತಾನೆ. ಅವರ ತೆರಿಗೆಯಲ್ಲಿ ನಿರ್ಮಿಸಿದ ರಸ್ತೆಯಲ್ಲಿಯೇ ನೀವು ಐಷಾರಾಮಿ ಕಾರು ಓಡಿಸುತ್ತೀರಿ. ಮೊದಲು ಸಂಪೂರ್ಣ ತೆರಿಗೆ ಕಟ್ಟಿ ಅಂತ ಖಡಕ್‌ ಸೂಚನೆ ನೀಡಿತ್ತು.. ಈ ಎರಡು ವಿಷ್ಯ ಪ್ರಸ್ತಾಪಕ್ಕೆ ಕಾರಣ ಚೀನಾ ನಟಿ ಜೆಂಗ್‌ ಶುವಾಂಗ್‌ ಆಗಿದ್ದಾಳೆ. ಆಕೆ, ಮಾಡಿದ್ದಾದರೂ ಏನು? ಆಕೆ ಮಾಡಿದ ತೆರಿಗೆ ವಂಚನೆಗೆ ಬಿದ್ದ ದಂಡವಾದ್ರು ಎಷ್ಟು ಗೊತ್ತಾ?

blank

ಚೀನಾ ನಟಿ ಜೆಂಗ್‌ ಶುವಾಂಗ್‌ಗೆ 340 ಕೋಟಿ ದಂಡ
ಶಾಂಘೈ ತೆರಿಗೆ ಅಧಿಕಾರಿಗಳಿಂದ ದಂಡ

ನಮ್ಮ ದೇಶದಲ್ಲಿ ಸಿನಿಮಾ ನಟರು, ನಟಿಯರು ತೆರಿಗೆ ವಂಚಿಸಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆ ಕಂಡುಬಂದಾಗ ದಂಡ ಹಾಕಿದ್ದಾರೆ. ದಂಡದ ಮೊತ್ತ ಅಮ್ಮಮ್ಮಾ ಅಂದ್ರೆ ಐದೋ ಹತ್ತೋ ಕೋಟಿ ರೂಪಾಯಿ ದಾಟುವುದನ್ನು ಕೇಳಿಲ್ಲ. ಒಮ್ಮೆ ಕೇಳಿ ಬಂದ್ರೂ ಅದು ಅಪರೂಪದ ಘಟನೆಯಾಗಿರುತ್ತೆ. ಆ ದಂಡವನ್ನು ಕಟ್ಟಲ್ಲ ಅಂತ ಅದೆಷ್ಟೋ ಮಂದಿ ಕೋರ್ಟ್‌ ಮೆಟ್ಟಿಲೇರುವವರನ್ನು ನೋಡಿದ್ದೇವೆ. ಆದ್ರೆ, ಚೀನಾದಲ್ಲಿ ಮನೆ ಮಾತಾಗಿರೋ ಜಿಂಗ್‌ ಶುವಾಂಗ್‌ಗೆ ಹಾಕಿರೋ ದಂಡ ಎಷ್ಟು ಗೊತ್ತಾ? ಬರೋಬ್ಬರಿ 299 ದಶಲಕ್ಷ ಯುವಾನ್‌ ಆಗಿದೆ. ಅಂದ್ರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ ಅದು ಬರೋಬ್ಬರಿ 340 ಕೋಟಿ ರೂಪಾಯಿ. ಈ ದಂಡದ ಮೊತ್ತ ಕೇಳಿದ್ರೆ, ತಲೆತಿರುಗಿ ಬಿಡುತ್ತೆ. ಹಾಗಾದ್ರೆ, ಈಕೆ ಎಷ್ಟು ತೆರಿಗೆ ವಂಚಿಸಿರಬಹುದು? ಅದು ಬೆಳಕಿಗೆ ಬಂದಿದ್ದು ಹೇಗೆ ? ಅನ್ನೋವಂತಹ ನಾನಾ ರೀತಿಯ ಪ್ರಶ್ನೆಗಳು ಎದುರಾಗುತ್ತವೆ.

blank

 

2019 ರಿಂದ 2020 ರ ಅವಧಿಯಲ್ಲಿ ತೆರಿಗೆ ವಂಚನೆ
ಸಿನಿಮಾ, ರಿಯಾಲಿಟಿ ಶೋಗಳಲ್ಲಿ ದುಬಾರಿ ಸಂಭಾನೆ ಪಡೆಯುತ್ತಿದ್ದ ನಟಿ
ಸಂಭಾವನೆಯನ್ನು ಮುಚ್ಚಿಟ್ಟು, ತೆರಿಗೆ ವಂಚನೆ ಮಾಡ್ತಾ ಇದ್ಲು

ಜೆಂಗ್‌ ಶುವಾಂಗ್‌ ಎಂಬ ಈ ಸುಂದರ ನಟಿ ಚೀನಾದಲ್ಲಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಯಾಗಿದ್ದು 2009ರಲ್ಲಿ. ಅದಕ್ಕೂ ಮುನ್ನ ಅನೇಕ ಟಿವಿ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ಲು. ಅನೇಕ ರಿಯಾಲಿಟಿ ಶೋಗಳಲ್ಲಿ ವಿಜೇತಳಾಗಿದ್ಲು. ಆದ್ರೆ, ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಮೇಲೆ ಹೆಚ್ಚಿನ ಜನಪ್ರಿಯತೆ ಹುಟ್ಟಿಕೊಂಡಿತು. ಫ್ಯಾನ್ಸ್‌ಗಳು ಅಪಾರ ಪ್ರಮಾಣದಲ್ಲಿ ಹುಟ್ಟಿಕೊಂಡಿದ್ರು. ಈಕೆ ಅಭಿನಯಿಸಿದ ಚಲನಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಧೂಳ್‌ ಎಬ್ಬಿಸುತ್ತಿದ್ವು. ಇದೇ ಕಾರಣಕ್ಕೆ ದಿನಕಳೆದಂತೆ ಬೇಡಿಕೆ ಹೆಚ್ಚಾಯಿತು. ಅದರಲ್ಲಿಯೂ 2019 ಮತ್ತು 2020 ಅವಧಿಯಲ್ಲಿ ಹೆಚ್ಚಿನ ಅವಕಾಶಗಳು ಹರಿದು ಬರುತ್ತವೆ. ಅನೇಕ ಸಿನಿಮಾಗಳಲ್ಲಿ, ಹಲವು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳುತ್ತಾಳೆ. ಅದಕ್ಕೆ ಅವಳು ದುಬಾರಿ ಸಂಭಾವನೆಯನ್ನು ಪಡೆಯುತ್ತಾಳೆ. ಆದ್ರೆ, ದುಬಾರಿ ಸಂಭಾವನೆಯ ವಿಷಯವನ್ನು ಮುಚ್ಚಿಡುತ್ತಾಳೆ. ನಾಲ್ಕೈದು ವರ್ಷದ ಹಿಂದೆ ಪಡೆಯುತ್ತಿದ್ದ ಸಂಭಾವನೆಯನ್ನೇ ತೋರಿಸುತ್ತಾಳೆ. ಇದು ಬೆಳಕಿಗೆ ಬಂದಿದ್ದೇ ತಡ ಶಾಂಘೈ ತೆರಿಗೆ ಅಧಿಕಾರಿಗಳು ಬರೋಬ್ಬರಿ 340 ಕೋಟಿ ರೂಪಾಯಿ ದಂಡ ವಿಧಿಸಿದ್ದಾರೆ. ಇಷ್ಟೇ ಅಲ್ಲ, ಇನ್ನು ಏನೇನು ಆಗಿದೆ ಗೊತ್ತಾ?

blank

ಜೆಂಗ್‌ ಶುವಾಂಗ್‌ಗೆ ಅವಕಾಶ ನೀಡದಂತೆ ನಿರ್ಮಾಪಕರಿಗೆ ಸೂಚನೆ
ಸಾಮಾಜಿಕ ಜಾಲತಾಣಗಳು ನಿಷ್ಕ್ರಿಯ
ಈಕೆಯ ಕೈತಪ್ಪುತ್ತೆ ಬ್ರಾಂಡ್‌ ಅಂಬಾಸಿಡರ್‌ ಸ್ಥಾನ

ತೆರಿಗೆ ವಂಚನೆ ಮಾಡಿರುವುದು ಖಚಿವಾಗುತ್ತಿದ್ದಂತೆ ಅಧಿಕಾರಿಗಳು ದುಬಾರಿ ದಂಡ ಹಾಕಿ ಕೈಬಿಟ್ಟಿಲ್ಲ. ಇನ್ಮೇಲೆ ಜೆಂಗ್‌ ಶುವಾಂಗ್‌ಗೆ ಸಿನಿಮಾಗಳಲ್ಲಿ, ಟಿವಿ ಶೋಗಳಲ್ಲಿ ಅವಕಾಶ ನೀಡದಂತೆ ನಿರ್ಮಾಪಕರಿಗೆ ಸೂಚನೆ ನೀಡಿದ್ದಾರೆ. ಚೀನಾದಲ್ಲಿ ಸರ್ಕಾರಿ ಅಧಿಕಾರಿಗಳಿಂದ ಸೂಚನೆ ಹೋದ್ರೆ ಮುಗಿಯಿತು. ಅದನ್ನು ಕಡ್ಡಾಯವಾಗಿ ಪಾಲಿಸಬೇಕು. ಒಮ್ಮೆ ಉಲ್ಲಂಘನೆ ಮಾಡಿದ್ರೆ ನಿರ್ಮಾಪಕರ ಮೇಲೂ ದುಬಾರಿ ದಂಡ ಬೀಳುತ್ತೆ, ಶಿಕ್ಷೆ ಪ್ರಕಟವಾಗುತ್ತೆ. ಹೀಗಾಗಿ ಇನ್ಮೇಲೆ ಚೀನಾದ ಮನೆ ಮಗಳಂತೆ ಇದ್ದ ಜೆಂಗ್‌ ಶುವಾಂಗ್‌ ಅಭಿನಯ ನೋಡೋ ಭಾಗ್ಯ ಚೀನಿಯರಿಗೆ ಸಿಗುವ ಸಾಧ್ಯತೆ ಇಲ್ಲ. ಇದರ ಜೊತೆಗೆ ಅಧಿಕಾರಿಗಳು ಆಕೆಯ ಸಾಮಾಜಿಕ ಜಾಲತಾಣಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಇದೆಲ್ಲದಕ್ಕೂ ಮುಖ್ಯವಾಗಿ ಆಕೆ ಅನೇಕ ಕಂಪನಿಗಳಿಗೆ ಬ್ರಾಂಡ್‌ ಅಂಬಾಸಿಡರ್‌ ಆಗಿದ್ಲು. ಅದೆಲ್ಲವೂ ಈಗ ಕೈತಪ್ಪುವ ಆತಂಕ ಎದುರಾಗಿದೆ. ಅಷ್ಟಕ್ಕೂ ಈ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ಗೊತ್ತಾ? ಅದ ಹಿಂದೊಂದು ರೋಚಕ ಕಥೆ ಇದೆ.

blank

2019ರಲ್ಲಿ ಗೆಳೆಯನನ್ನ ಮದುವೆಯಾಗಿದ್ದ ನಟಿ
ಒಂದೇ ವರ್ಷದಲ್ಲಿಯೇ ವಿಚ್ಛೇದನ ಪಡೆದಿದ್ರು

30 ವರ್ಷದ ಈ ಸುಂದರ ನಟಿ ಮತ್ತು ನಿರ್ಮಾಪಕ ಜಾಂಗ್‌ ಹೆಂಗ್‌ 2018 ರಲ್ಲಿ ಟಿವಿ ಕಾರ್ಯಕ್ರಮವೊಂದಕ್ಕೆ ಜೊತೆಯಾಗಿ ಕೆಲಸ ಮಾಡುತ್ತಾರೆ. ಹಾಗೆ ಇಬ್ಬರಿಗೂ ಲವ್‌ ಆಗಿ ಬಿಡುತ್ತದೆ. ಡೇಟಿಂಗ್‌ ಆರಂಭಿಸುತ್ತಾರೆ. ದೇಶ ವಿದೇಶಗಲ್ಲಿ ಸುತ್ತಾಡುತ್ತಾರೆ. ಹಾಗೇ ಮದುವೆಯಾಗಲು ನಿರ್ಧರಿಸುತ್ತಾರೆ. ಅಂತಿಮವಾಗಿ ಅಮೆರಿಕಗೆ ಹೋಗಿ 2019 ಜನವರಿಯಲ್ಲಿ ವಿವಾಹವಾಗುತ್ತಾರೆ. ಆದ್ರೆ, ಆ ಸಂಬಂಧ ಬಹಳ ದಿನ ಉಳಿಯುವುದಿಲ್ಲ. ಬಹುಬೇಗನೆ ಭಿನ್ನಾಭಿಪ್ರಾಯಗಳು ಉದ್ಭವಗೊಳ್ಳುತ್ತವೆ. ಹೀಗಾಗಿ ಇಬ್ಬರೂ ಬೇರೆ ಬೇರೆಯಾಗಲು ನಿರ್ಧರಿಸುತ್ತಾರೆ. 2019 ಡಿಸೆಂಬರ್‌ನಲ್ಲಿ ಬ್ರೇಕ್‌ಅಪ್‌ ಮಾಡಿಕೊಳ್ಳುತ್ತಾರೆ. ಇಷ್ಟೇ ಆದ್ರೆ, ನಟಿಯ ತೆರಿಗೆ ವಂಚನೆ ತಿಳಿಯುತ್ತಿರಲಿಲ್ಲ. ಹಾಗಾದ್ರೆ ಏನಾಯ್ತು ಗೊತ್ತಾ?

blank

ನಟಿಯ ತೆರಿಗೆ ವಂಚನೆ ತಿಳಿಸಿದ ಮಾಜಿ ಗಂಡ
ತನಿಖೆ ಆರಂಭಿಸಿದ ಶಾಂಘೈ ತೆರಿಗೆ ಅಧಿಕಾರಿಗಳು
ದೊಡ್ಡ ಪ್ರಮಾಣದ ತೆರಿಗೆ ವಂಚನೆ ಬೆಳಕಿಗೆ

ಇಬ್ಬರೂ ವಿಚ್ಛೇದನ ಪಡೆದು ತಮ್ಮ ಪಾಡಿಗೆ ತಾವು ಇದ್ರೆ ಈ ಪ್ರಕರಣ ಬೆಳಕಿಗೆ ಬರ್ತಾನೆ ಇರಲಿಲ್ಲ. ಆದ್ರೆ, ಯಾವಾಗ ಇಬ್ಬರ ನಡುವೆ ಕಚ್ಚಾಟ ಆರಂಭವಾಯ್ತೋ ಒಂದೊಂದು ವಿಷಯಗಳು ಹೊರ ಬರಲು ಶುರುವಾಯ್ತು. ನಟಿ ತೆರಿಗೆ ವಂಚಿಸುತ್ತಿದ್ದಾಳೆ ಅಂತ ಜಾಂಗ್‌ ಹೆಂಗ್‌ ಹೇಳಿ ಬಿಡ್ತಾನೆ. ಅದು ಚೀನಾದಲ್ಲಿ ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗುತ್ತೆ. ತೆರಿಗೆ ಅಧಿಕಾರಿಗಳ ಕಿವಿಗೂ ಬೀಳುತ್ತದೆ. ಶಾಂಘೈ ತೆರಿಗೆ ಅಧಿಕಾರಿಗಳು ತನಿಖೆ ಆರಂಭಿಸುತ್ತಾರೆ. 2019 ಮತ್ತು 2020ರ ಅವಧಿಯಲ್ಲಿ ದುಬಾರಿ ಸಂಭಾವನೆ ಪಡೆದು, ತೆರಿಗೆ ವಂಚನೆ ಮಾಡಿರುವುದು ಸಾಬೀತಾಗುತ್ತದೆ. ಹೀಗಾಗಿಯೇ ಅಧಿಕಾರಿಗಳು ನಟಿಗೆ ದುಬಾರಿ ದಂಡ ವಿಧಿಸುತ್ತಾರೆ. ಜೊತೆಗೆ ಆಕೆ ಇನ್ಮೇಲೆ ಸಿನಿಮಾ ಮತ್ತು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳದಂತೆ ಏನು ಮಾಡಬೇಕೋ ಅದನ್ನೆಲ್ಲಾ ಮಾಡಿ ಬಿಟ್ಟಿದ್ದಾರೆ.

blank

 

ಕ್ಷಮೆಯಾಚನೆ ಮಾಡಿದ ಜೆಂಗ್‌ ಶುವಾಂಗ್‌
ಮತ್ತೆ ಅಭಿನಯ ಮಾಡಲು ಅವಕಾಶ ಸಿಗುತ್ತಾ?

ಚಲನಚಿತ್ರ, ಶಾರ್ಟ್‌ ಮೂವಿಗಳು, ಕಿರುತೆರೆಯಲ್ಲಿ ಜೆಂಗ್‌ ಶುವಾಂಗ್‌ ದೊಡ್ಡ ಪ್ರಮಾಣದಲ್ಲಿ ಹೆಸರು ಮಾಡಿರುತ್ತಾಳೆ. ಅಪಾರ ಪ್ರಮಾಣದ ಆದಾಯಗಳಿಸುತ್ತಾಳೆ. ಆದ್ರೆ, ತೆರಿಗೆ ವಂಚನೆ ಪ್ರಕರಣದಿಂದಾಗಿ ಆಕೆ ಸಿನಿಮಾ ಕ್ಷೇತ್ರದಿಂದಲೇ ಹಿಂದೆ ಸರಿಯುವ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಆದ್ರೆ, ಆಕೆ ಈ ಬಗ್ಗೆ ದೇಶದ, ಅಭಿಮಾನಿಗಳ ಕ್ಷಮೆ ಯಾಚಿಸಿದ್ದಾಳೆ. ತನ್ನ ತಪ್ಪಿಗೆ ಕ್ಷಮೆ ಇರಲಿ. ಇನ್ನು ಮುಂದೆ ಹಾಗೇ ಮಾಡಲಾರೆ, ಸರಿಯಾದ ಸಮಯಕ್ಕೆ ಟ್ಯಾಕ್ಸ್‌ ಕಟ್ಟುತ್ತೇನೆ ಅಂತ ಹೇಳಿದ್ದಾಳೆ. ಹೀಗಾಗಿ ಈಗ ಎದುರಾಗಿರೋ ಪ್ರಶ್ನೆ ಅಂದ್ರೆ, ಆಕೆ ಮತ್ತೆ ಸಿನಿಮಾ ಕ್ಷೇತ್ರಕ್ಕೆ ಬರಲು ಅವಕಾಶ ಸಿಗುತ್ತಾ ಅನ್ನುವುದು. ಆದ್ರೆ, ಇಲ್ಲಿಯವರೆಗೂ ಕ್ಷಮೆಗೆ ಒಪ್ಪಿಗೆ ನೀಡುವ ಬಗ್ಗೆ ಅಧಿಕಾರಿಗಳು ಏನನ್ನೂ ಹೇಳಿಲ್ಲ. ಒಮ್ಮೆ ಕಾನೂನು ಹೋರಾಟ ನಡೆದ್ರೆ ಏನಾಗುತ್ತದೆ ಅಂತ ಹೇಳಲು ಆಗುವುದಿಲ್ಲ. ಹೀಗಾಗಿ ಟಾಪ್‌ ನಟಿಯ ಸಿನಿಮಾ ಅಭಿನಯ ಅತಂತ್ರವಾಗಿಯೇ ಉಳಿದಿದೆ.

ಸಿನಿಮಾ ತಾರೆಯರೇ ಟ್ಯಾಕ್ಸ್‌ ವಂಚಿಸಿದ್ರೆ ಹೇಗೆ?
ಅವರನ್ನೇ ಫಾಲೋ ಮಾಡುವರು ಏನು ಮಾಡ್ತಾರೆ?

ಸಿನಿಮಾ ಹೀರೋ, ಹೀರೋಯಿನ್‌ಗಳಿಗೆ ಅವರದೇ ಆದ ಫಾಲೋವರ್ಸ್‌ಗಳು ಇರ್ತಾರೆ. ತಾರೆಯರನ್ನು ದೇವರಂತೆ ನೋಡುತ್ತಾರೆ. ತಾರೆಯರ ಸ್ಟೈಲ್‌, ಮಾತು, ನಡೆ ನುಡಿಗಳನ್ನು ಅಭಿಮಾನಿಗಳು ಫಾಲೋ ಮಾಡ್ತಾರೆ. ಆದ್ರೆ, ಸಮಾಜಕ್ಕೆ ಆದರ್ಶವಾಗಿ ಇರಬೇಕಾದವರೇ ಟ್ಯಾಕ್ಸ್‌ ವಂಚಿಸಿದ್ರೆ ಹೇಗೆ? ಇದು ಒಂದೆರಡು ದೇಶದ ಕಥೆಯಲ್ಲ. ಎಲ್ಲಾ ದೇಶಗಳಲ್ಲಿಯೂ ಟ್ಯಾಕ್ಸ್‌ ವಂಚಕ ಸೆಲೆಬ್ರಿಟಿಗಳು ಇದ್ದಾರೆ. ಆದರ್ಶ ಸಂದೇಶ ಸಾರಬೇಕಾದವರೇ ಹೀಗೆ ವಂಚಿಸುತ್ತಿರುವುದು ಸಮಂಜಸವಲ್ಲ.

Source: newsfirstlive.com Source link