ಮದುವೆ ಮನೆಯಲ್ಲೇ ಗಂಡನಿಗೆ ಸವಾಲ್; ಮಂಟಪದಲ್ಲೇ ವ್ಯಾಯಾಮ ಮಾಡಿ ದಂಗುಬಡಿಸಿದ ವಧು-ವರ

ಮದುವೆ ಮನೆಯಲ್ಲೇ ಗಂಡನಿಗೆ ಸವಾಲ್; ಮಂಟಪದಲ್ಲೇ ವ್ಯಾಯಾಮ ಮಾಡಿ ದಂಗುಬಡಿಸಿದ ವಧು-ವರ

ಮದುವೆ ಅನ್ನೋ ಸಂಭ್ರಮ ಇದ್ಯಲ್ಲ, ಅದು ಹೇಳೋದಕ್ಕೆ ಆಗಲ್ಲ. ಡ್ಯಾನ್ಸು, ಹಾಡು, ಮೆಹಂದಿ, ಬಟ್ಟೆ ಖರೀದಿ ಅಂತ ಅಬ್ಬಬ್ಬ ಎಷ್ಟ್​ ಕೆಲಸವೋ. ಅದ್ರಲ್ಲೂ ಇತ್ತೀಚಿಗೆ ಈ ಸಾಮಾಜಿಕ ಜಾಲತಾಣದಲ್ಲಿ ಬರೀ ಮದುವೆ ಸಂಭ್ರಮಗಳ ವಿಡಿಯೋಗಳೇ ಹೆಚ್ಚು. ಅದ್ರಲ್ಲೂ ಈಗ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗ್ತಾಯಿದೆ. ಅದನ್ನ ಗಂಡ್​ ಮಕ್ಕಳು ನೋಡಿ, ಸಿಕ್ಕರೆ ನಂಗೂ ಇಂಥ ಹೆಂಡ್ತಿ ಸಿಗಬೇಕಪ್ಪ ಅಂತಂದ್ರೆ, ಹೆಣ್ಮಕ್ಕಳು, ನಾನು ಹಂಗೇ ಆಗ್ಬೇಕು ಅಂತ ಹೇಳ್ತಾಯಿದ್ದಾರೆ.

ಪುಷಪ್ಸ್​ ಮಾಡಿದ ವಧು- ವರ 

ಫಿಟ್ನೆಸ್​ ಕೋಚ್​ ಅಕ್ಷಿತಾ ಅರೋರ ಮಹಜನ್​ ಹಾಗೂ ಅವ್ರ ಗಂಡ ಆದಿತ್ಯ ಮಹಜನ್​ ಇಬ್ಬರೂ ಮದುವೆ ಬಟ್ಟೆಯಲ್ಲಿ ಅಂದ್ರೆ ಅಕ್ಷಿತಾ, ರೆಡ್​ ಲೆಹಂಗಾ ಹಾಗೂ ಆದಿತ್ಯ ಜುಬ್ಬಾ ಹಾಕಿಕೊಂಡು ಇಬ್ಬರೂ ಸ್ಟೇಜ್​ ಮೇಲೆ ಪುಷಪ್ಸ್​ ಮಾಡಿದ್ದಾರೆ. ಈ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದ್ದು, ಎಲ್ಲೆಡೆ ಜನ ಇದನ್ನ ಇಷ್ಟಪಡ್ತಿದ್ದಾರೆ.

 

 

View this post on Instagram

 

A post shared by Parul Garg (@parulgargmakeup)

Source: newsfirstlive.com Source link