ಕೇರಳಕ್ಕೂ ಕಾಬೂಲ್​ಗೂ ಏನಿದು ಲಿಂಕ್..? : ಭಯೋತ್ಪಾದಕರಿಗೆ ನೆಲೆಯಾಗುತ್ತಿದೆಯಾ ದೇವರ ನಾಡು..?

ಕೇರಳಕ್ಕೂ ಕಾಬೂಲ್​ಗೂ ಏನಿದು ಲಿಂಕ್..? : ಭಯೋತ್ಪಾದಕರಿಗೆ ನೆಲೆಯಾಗುತ್ತಿದೆಯಾ ದೇವರ ನಾಡು..?

ಕಾಬೂಲ್​ ಏರ್​​ಪೋರ್ಟ್​​ನಲ್ಲಿ ಮಾರಣಹೋಮ ನಡೆಸಿದ ಐಸಿಸ್-​ಕೆ ಉಗ್ರ ಸಂಘಟನೆ ಇದೀಗ ಜಾಗತಿಕ ಆತಂಕಕ್ಕೆ ಕಾರಣವಾಗಿದೆ. ಆದ್ರೆ ಇದೇ ಭಯಾನಕ ಉಗ್ರ ಸಂಘಟನೆಯಲ್ಲಿ ಕೇರಳ ಮೂಲದ ಯುವಕರು ಇರುವ ಕುರಿತ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಕೇರಳದ ಯುವಕರಿಗೆ ಉಗ್ರರ ಲಿಂಕ್​ ಇರುವ ಕುರಿತ ಮಾತುಗಳು ಕೇಳಿ ಬಂದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಕೇರಳದ ಹಲವು ಯುವಕರು ಉಗ್ರ ಸಂಘಟನೆಯ ಜೊತೆ ಕೈ ಜೋಡಿಸಿ, ಪೈಶಾಚಿಕ ಕೃತ್ಯ ನಡೆಸಿದ್ರು.

ಜಸ್ಟ್​ ಕೆಲವೇ ಕೆಲ ಸೆಕೆಂಡುಗಳು ಅಷ್ಟೇ.. ಕಾಬೂಲ್​ ಏರ್​ಪೋರ್ಟ್​ನ ಪಕ್ಕದಲ್ಲಿರುವ ಕೊಳಚೆ ಚರಂಡಿಯಲ್ಲಿ ನೆತ್ತರಿನ ಹೊಳೆ ಹರಿದೇ ಹೋಗಿತ್ತು. 13 ಅಮೆರಿಕ ಸೈನಿಕರು, ಇಬ್ಬರು ಇಂಗ್ಲೆಂಡ್ ನಾಗರಿಕರು ಸೇರಿದಂತೆ 160ಕ್ಕೂ ಅಧಿಕ ಜನರ ಮಾರಣಹೋಮ ನಡೆಸಿದ ಐಸಿಸ್​ಕೆ ಪಾಪಿಗಳು ಅಕ್ಷರಶಃ ಪೈಶಾಚಿಕತೆ ಮೆರೆದಿದ್ರು. ಪರಿಣಾಮ ಏರ್​ಪೋರ್ಟ್​​ ನೆಲವೂ, ಛಿದ್ರಗೊಂಡ ಮೃತ ದೇಹಗಳಿಂದ, ಗಾಯಗೊಂಡವರ ನೆತ್ತರಿನಿಂದ ತೊಯ್ದು ಹೋಗಿತ್ತು. ದಶಕದ ಬಳಿಕ ಅಫ್ಘಾನ್​ ನೆಲದಲ್ಲಿ ನಡೆದ ಅತೀ ದೊಡ್ಡ ದಾಳಿಗೆ ಇಡೀ ಜಗತ್ತೇ ಒಂದು ಕ್ಷಣ ಬೆಚ್ಚಿ ಬಿದ್ದಿತ್ತು. ಇಂಥ ಹೊತ್ತಲ್ಲೇ, ಇಸ್ಲಾಮಿಕ್ ಸ್ಟೇಟ್ ಖೋರಾಸನ್ ಅಂದ್ರೆ ಐಸಿಸ್​-ಕೆ ಉಗ್ರ ಸಂಘಟನೆಯೂ, ಈ ಭೀಕರ ದಾಳಿ ನಡೆಸಿದ್ದು ನಾವೇ ಎಂದು ದಾಳಿಯ ಹೊಣೆಯನ್ನ ಹೊತ್ತುಕೊಂಡಿತ್ತು.

blank

ಭಯಾನಕ ಉಗ್ರ ಸಂಘಟನೆಯಾಗಿರುವ ಈ ಐಸಿಸ್​​-ಕೆ ಅನ್ನೋದು ತಾಲಿಬಾನ್​​ಗಳಿಗಿಂತಲೂ ಅಪಾಯಕಾರಿ. ಇದೇ ಭಯಾನಕ ಉಗ್ರ ಸಂಘಟನೆಯ ಜೊತೆ ಇದೀಗ ಕೇರಳಿಗರು ಇರುವ ಕುರಿತು ಸ್ಫೋಟಕ ಮಾಹಿತಿ ಹೊರ ಬಿದ್ದಿದೆ.

ಐಸಿಸ್​​-ಕೆ ಬಣದಲ್ಲಿ 14 ಮಂದಿ ಕೇರಳಿಗರು
ಏರ್​ಪೋರ್ಟ್​ ಅಂಗಳವನ್ನ ಸ್ಮಶಾನವಾಗಿ ಪರಿವರ್ತಿಸಿದ್ದ ಐಸಿಸ್​ಕೆ ಉಗ್ರ ಸಂಘಟನೆಯಲ್ಲಿ ನೆರೆ ರಾಜ್ಯದ 14 ಯುವಕರು ಇದ್ದಾರೆನ್ನುವ ಶಂಕೆ ಇದೀಗ ವ್ಯಕ್ತವಾಗಿದೆ.

ಐಸಿಸ್​-ಕೆ ಬಣದಲ್ಲಿ ಕೇರಳಿಗರು
ಅಫ್ಘಾನಿಸ್ತಾನದ ಕಾಬೂಲ್​ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಾಹುತಿ ಬಾಂಬ್​ ದಾಳಿಯಿಂದಾಗಿ 13 ಅಮೆರಿಕ ಸಿಬ್ಬಂದಿ ಸೇರಿದಂತೆ 170 ಜನರು ಉಸಿರು ಚೆಲ್ಲಿದ್ರು. ಈ ಭೀಕರ ದಾಳಿಯ ಹೊಣೆಯನ್ನು ಇಸ್ಲಾಮಿಕ್​ ಸ್ಟೇಟ್​-ಖೋರಸಾನ್​ ಹೊತ್ತುಕೊಂಡಿತ್ತು. ಮತ್ತೊಂದು ಆಘಾತಕಾರಿ ಇಸ್ಲಾಮಿಕ್​ ಸ್ಟೇಟ್​-ಖೋರಸಾನ್ ಸಂಘಟನೆಯಲ್ಲಿ, 14 ಕೇರಳ ಮಂದಿ ಕೂಡ ಇದ್ದಾರೆ ಎಂಬ ಆತಂಕಕಾರಿ ಸುದ್ದಿ ಇದೀಗ ಹೊರ ಬಿದ್ದಿದೆ. ಅಫ್ಘಾನ್​ ತಾಲಿಬಾನ್​ ತೆಕ್ಕೆಗೆ ಜಾರುತ್ತಿದ್ದಂತೆ, ಅಫ್ಘಾನ್​ನ ಬಗ್ರಾಮ್​ ಜೈಲಿನಲ್ಲಿದ್ದ ಎಲ್ಲಾ ಉಗ್ರರನ್ನ ತಾಲಿಬಾನ್​​ ಬಿಡುಗಡೆಗೊಳಿಸಿತ್ತು. ಹೀಗೆ ಜೈಲಿನಿಂದ ಬಿಡುಗಡೆಗೊಂಡವರ ಪೈಕಿ, 14 ಜನರು ಕೇರಳದವರು ಇದ್ದಾರೆ ಎನ್ನಲಾಗಿದೆ.

blank

ಪಾಕಿಸ್ತಾನದ ಸುನ್ನಿ ಪಶ್ತೂನ್​ ಭಯೋತ್ಪಾದಕರು, ಆಗಸ್ಟ್​ 26ರಂದು ಕಾಬೂಲ್​ನ ತುರ್ಕಮೆನಿಸ್ತಾನ್​ನ ರಾಯಭಾರ ಕಚೇರಿ ಎದುರು ಐಇಡಿ ಬಾಂಬ್​ ಸ್ಪೋಟಿಸಲು ಸಂಚು ರೂಪಿಸಿದ್ರು. ಆದ್ರೆ ಪ್ಲಾನ್​ ಫೈಲೂರ್​​ ಆಗಿ ಅವರೆಲ್ಲಾ ಪೊಲೀಸರ ಕೈಯಲ್ಲಿ ತಗ್ಲಾಕೊಂಡಿದ್ರು. ಕಾಬೂಲ್ ವಿಮಾನ ನಿಲ್ದಾಣ ಸ್ಫೋಟ ಯತ್ನದ ನಂತರ ಇಬ್ಬರು ಪಾಕಿಸ್ತಾನಿ ಪ್ರಜೆಗಳಿಂದ ಐಇಡಿ ಪೊಲೀಸರು ವಶಪಡಿಸಿಕೊಂಡಿದ್ರು. ಈ ಇಬ್ಬರು ಪಾಕಿಸ್ತಾನಿ ಉಗ್ರರ ಜೊತೆ ಈ 14 ಮಂದಿ ಕೇರಳಿಯರು ಸಂಪರ್ಕ ಹೊಂದಿರುವ ಅಂಶ ಕೂಡ ಬಯಲಾಗಿದೆ. ಈ ಪೈಕಿ ಒಬ್ಬ ಕೇರಳದಲ್ಲಿರುವ ತಮ್ಮ ಕುಟುಂಬ ಸದಸ್ಯರನ್ನ ಸಂಪರ್ಕಿಸಿದ್ದು, ಉಳಿದವರು ಇನ್ನೂ ಕೂಡ ಉಗ್ರ ಸಂಘಟನೆಯ ಬಲೆಯಲ್ಲಿಯೇ ಇದ್ದಾರೆ. 2014 ರಲ್ಲಿ ಸಿರಿಯಾ ಮತ್ತು ಲೆವಂತ್ ಮೊಸುಲವನ್ನ ವಶಪಡಿಸಿಕೊಂಡ ವೇಳೆ, ಮಲಪ್ಪುರಂ, ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆ ಕೆಲವರು ಈ ಪಶ್ಚಿಮ ಏಷ್ಯಾದ ಜಿಹಾದಿ ಗುಂಪಿನ ಜೊತೆ ಕೈಜೋಡಿಸಿದ್ರು. ಭಾರತ ತೊರೆದಿರುವ ಇವರೆಲ್ಲಾ ಅಫ್ಘಾನಿಸ್ತಾನದ ನಂಗರ್ಹರ್ ಪ್ರಾಂತ್ಯದಲ್ಲಿದ್ದಾರೆ. ಇದೇ ನಂಗರ್ಹರ್ ಪ್ರಾಂತ್ಯದಲ್ಲೇ ಐಸಿಸ್​-ಕೆ ಬಲಿಷ್ಠವಾಗಿದೆ. ಐಸಿಸ್​-ಕೆ ಸಂಘಟನೆಯನ್ನು ತಾಲಿಬಾನ್ ತನ್ನ ವಿರೋಧಿ ಸಂಘಟನೆ ಎಂದು ಗುರುತಿಸಿಸಿದ ಕಾರಣ, ಐಸಿಸ್-​ಕೆಯಲ್ಲಿರುವ ಕೇರಳಿಗರ ಪರಿಸ್ಥಿತಿ ಅಪಾಯದಲ್ಲಿದೆ. ಇದೇ ಕಾರಣಕ್ಕೆ ಅವರು ದೇಶಕ್ಕೆ ಮರಳಲು ಕಾತುರರಾಗಿದ್ದಾರೆ ಎನ್ನಲಾಗಿದೆ.

ಮಾಡಿದ್ದುಣ್ಣೋ ಮಹಾರಾಯ ಎಂಬಂತೆ, ವರ್ಷಗಳ ಹಿಂದೆ ಐಸಿಸ್​​ಕೆ ಜೊತೆ ಕೈ ಜೋಡಿಸಿ ವಿಧ್ವಂಸಕ ಕೃತ್ಯ ಎಸಗುತ್ತಿದ್ದ ಇವರೆಲ್ಲರೂ ಇದೀಗ ತಾಲಿಬಾನ್​ ಭೀತಿಯಲ್ಲಿ ಬದುಕುತ್ತಿದ್ದಾರೆ. ಇವರೆಲ್ಲರ ಕಣ್ಣ ಮುಂದೆ ಇರುವುದು ಈಗ ಒಂದೇ ಆಪ್ಷನ್.. ಒಂದಾ ತಾಲಿಬಾನ್ ರಕ್ಕಸರ ಮುಂದೆ ಶರಣಾಗಬೇಕು, ಇಲ್ಲಾ ತಾಲಿಬಾನ್​ಗಳ ಕೈಯಲ್ಲಿ ಸಮಾಧಿಯಾಗಬೇಕು. ಇದೇ ಕಾರಣಕ್ಕೆ ಈ 14ಜನರ ಪೈಕಿ ಒಬ್ಬ ತಮ್ಮ ಕುಟುಂಬ ಸದಸ್ಯವನ್ನ ಸಂರ್ಪರ್ಕಿಸಿದ್ದು, ದೇಶಕ್ಕೆ ಮರಳಲು ಕಾತುರರಾಗಿದ್ದಾರೆ ಎನ್ನಲಾಗಿದೆ.

blank

ಉಗ್ರರ ಜೊತೆ ಕೇರಳದ ಹಲವು ಯುವಕರಿಗೆ ಲಿಂಕ್ ಇರುವ ವಿಷ್ಯ ಹೊರ ಬಂದಿರುವುದು ಇದೇ ಮೊದ್ಲೇನಲ್ಲ.. ವಾರಗಳ ಹಿಂದೆ ತಾಲಿನ್ ಅಫ್ಘಾನ್​ನನ್ನ ತನ್ನ ತೆಕ್ಕೆಗೆ ಹಾಕಿಕೊಂಡಾಗಲೇ, ಈ ಪೈಕಿ ಉಗ್ರನೊಬ್ಬ ಮಲಯಾಳಂ ಮತನಾಡುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿತ್ತು..

ಈ ಹಿಂದೆ ಕೂಡ ಹಲವು ಬಾರಿ ಕೇರಳಕ್ಕೆ ಉಗ್ರರ ಲಿಂಕ್ ಕುರಿತ ವರದಿಯಾಗಿದ್ದವು. ಕಳೆದ ವರ್ಷ ರಾಷ್ಟ್ರೀಯ ತನಿಖಾ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಅಲ್​​ಖೈದಾ ಸಂಘಟನೆಯಲ್ಲಿದ್ದ ಕೇರಳದ ಯುವಕರನ್ನ ಬಂಧಿಸಿ ಜೈಲಿಗಟ್ಟಿತ್ತು.

ಅಲ್​ಖೈದಾ ಉಗ್ರರು NIA ವಶಕ್ಕೆ
ಕಳೆದ ವರ್ಷ ಭಯೋತ್ಪಾದಕ ಬೇಟೆಗೆ ಇಳಿದಿದ್ದ ರಾಷ್ಟ್ರೀಯ ತನಿಖಾ ಸಂಸ್ಥೇ ಕೇರಳ , ಪಶ್ವಿಮ ಬಂಗಾಳದಲ್ಲಿ ಕಾರ್ಯಾಚರಣೆ ನಡೆಸಿ , ಅಲ್​ಖೈದಾ ಉಗ್ರ ಸಂಘಟನೆಯ 9 ಜನರನ್ನ ಬಂಧಿಸಿ ಜೈಲಿಗಟ್ಟಿತ್ತು. ಕೇರಳದ ಎರ್ನಾಕುಲಂ ಜಿಲ್ಲೆಯ ಮುರ್ಷಿದ್ ಹಸನ್, ಇಯಾಕುಬ್ ಬಿಸ್ವಾಸ್ ಮತ್ತು ಮೊಸರಫ್ ಹುಸೇನ್ ಕೈಗೆ ಕೋಳ ತೊಡಿಸುವ ಮೂಲಕ ದೊಡ್ಡ ಅಪಾಯವನ್ನ ತಪ್ಪಿಸಿತ್ತು. ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ ದಾಳಿ ಮಾಡಲು ಸಂಚು ಹಾಕಿದ್ದ ಇವರು, ಶಸ್ತ್ರಾಸ್ತ್ರಗಳ ಸಹಿತ NIA ಬಲೆಗೆ ಬಿದ್ದಿದ್ರು. ಕೇರಳದ ಈ ಉಗ್ರರೆಲ್ಲಾ ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನ ಮೂಲದ ಅಲ್ ಖೈದಾ ಭಯೋತ್ಪಾದಕ ಸಂಘಟನೆ ಮುಖಂಡರ ನೆಟ್​ವರ್ಕ್​ ಬೆಳೆಸಿದ್ರು. ಈ ಉಗ್ರ ಮುಖಂಡರ ಸೂಚನೆಯಂತೆ ದೇಶದ ಹಲವೆಡೆ ವಿಧ್ವಂಸಕ ಕೃತ್ಯಗಳನ್ನ ನಡೆಸಲು ಸಂಚು ಹಾಕಿದ್ರು. ಆದ್ರೆ NIA ಅಧಿಕಾರಿಗಳ ಮಿಂಚಿನ ದಾಳಿಯಿಂದ ಉಗ್ರರ ಪ್ಲಾನ್ ಫೈಲೂರ್ ಆಗಿತ್ತು.

blank

2014ರ ನಂತರದಲ್ಲಿ ಕೇರಳದ ಕೆಲ ಯುವಕರು ಐಸಿಸ್​ ಸಂಘಟನೆಯ ಕೈ ಜೈಡೋಸಿ, ದುಷ್ಕೃತ್ಯ ಎಸಗುತ್ತಿದ್ರು. ಈ ವೇಳೆ ಹಲವರು ಸತ್ತು ಸಮಾಧಿ ಸೇರಿದ್ದಾರೆ.

ಐಸಿಸ್​ ಸೇರಿದ್ದ ಕೇರಳಿಗ ಸಾವು
2015ರಲ್ಲಿ ಕೇರಳದ 11 ಯುವಕರು ನಿಗೂಢವಾಗಿ ನಾಪತ್ತೆಯಾಗಿದ್ರು. ಯುವಕರ ನಿಗೂಢ ನಾಪತ್ತೆಯ ಮೂಲ ಹುಡುಕಿದಾಗ ಅವರೆಲ್ಲ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರಿದ್ದ ಗೊತ್ತಾಗಿತ್ತು. 2015ರಲ್ಲಿ ಅಫ್ಘಾನ್​ ಸೇನೆಯು ಐಸಿಸ್​ ಉಗ್ರರ ಮೇಲೆ ವಾಯು ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಕೇರಳದ ಮರ್ವಾನ್ ಇಸ್ಮಾಯಿಲ್ ಕೂಡ ಸಾವನ್ನಪ್ಪಿದ್ದಾನೆ. ಈ ಘಟನೆ ನಡೆದ ಮರುದಿನವೇ, ಕೇರಳದ ಕಾಸರಗೋಡಿನಲ್ಲಿರುವ ಮರ್ವಾನ್ ಇಸ್ಮಾಯಿಲ್ ಪೋಷಕರಿಗೆ ಟೆಲಿಗ್ರಾಮ್ ಮೂಲಕ ಸಂದೇಶ ಕಳುಹಿಸಿದ್ದ ಉಗ್ರರು, ಇಸ್ಮಾಯಿಲ್ ಸತ್ತಿರುವ ಸಂದೇಶ ರವಾನಿಸಿದ್ದಾರೆ.

ಹೀಗೆ ವರ್ಷದಿಂದ ವರ್ಷಕ್ಕೆ ಕೇರಳದಿಂದ ನಾಪತ್ತೆಯಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ಹೀಗೆ ನಿಗೂಢವಾಗಿ ನಾಪತ್ತೆಯಾದವರೆಲ್ಲಾ, ಉಗ್ರ ಸಂಘಟನೆ ಸೇರಿರುವ ಸಾಧ್ಯತೆ ಕೂಡ ಇದೆ. ವರ್ಷಗಳ ಹಿಂದೆ ಕೂಡ ಇದೇ ಐಸಿಸ್​ಕೆ ಜೊತೆ ಕೈ ಜೋಡಿಸಿ ನಾಲ್ವರು ಕೇರಳಿಗರು ಸಾವನಪ್ಪಿದ್ರು.

ಐಸಿಸ್​​-ಕೆ ಸೇರಿದ್ದ ಕೇರಳಿಗರ ಸಾವು
2016 ರಲ್ಲಿ ಕೇರಳದ ನಾಲ್ಕು ಜೋಡಿ, ಅಫ್ಘಾನಿಸ್ತಾನದ ನಂಗಹಾರ್ಗೆ ಹೋಗಿ ಇಸ್ಲಾಮಿಕ್​ ಸ್ಟೇಟ್ ಆಫ್ ಖೊರಾಸನ್ ಉಗ್ರ ಸಂಘಟನೆ ಸೇರಿದ್ರು. ಆದ್ರೆ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಐಸಿಸ್​-ಕೆ ಸೇರಿದ್ದ ಕೇರಳದ ನಾಲ್ವರು ಸಾವನ್ನಪ್ಪುತ್ತಾರೆ. ಗಂಡಂದಿರ ಸಾವಿನಿಂದ ಕಂಗಲಾದ, ಸೋನಿಯಾ ಸೆಬಾಸ್ಟಿಯನ್ ಅಲಿಯಾಸ್ ಆಯಿಷಾ, ರಾಫೆಲಾ, ಮೆರಿನ್ ಜಾಕೋಬ್ ಅಲಿಯಾಸ್ ಮರಿಯಮ್ಮ ಮತ್ತು ನಿಮಿಷಾ ಅಲಿಯಾಸ್ ಫಾತಿಮಾ ಇಸಾ ಎಂಬ ನಾಲ್ವರು ಮಹಿಳೆಯರು ಅಫ್ಘಾನಿಸ್ತಾನದ ಅಧಿಕಾರಿಗಳ ಮುಂದೆ ಮಂಡಿಯೂರುತ್ತಾರೆ. ಅಲ್ಲದೆ ಮತ್ತೆ ಭಾರತಕ್ಕೆ ಮರಳಲು ಪ್ರಯತ್ನ ಮಾಡುತ್ತಾರೆ. ಆದ್ರೆ ಮಹಿಳೆಯರು ಅದಾಗ್ಲೆ ಉಗ್ರ ಸಂಘಟನೆಯ ಸಿದ್ಧಾಂತವನ್ನ ಮೈಗೂಡಿಸಿಕೊಂಡ ಕಾರಣ, ಆ ಮಹಿಳೆಯರಿಗೆ ಭಾರತ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.

blank

ಐಸಿಸ್​​ಕೆ ಸಿದ್ದಾಂತವನ್ನ ಮೈಗೂಡಿಸಿಕೊಂಡಿದ್ದ ಕೇರಳದ ನಾಲ್ವರು ಇಂದಿಗೂ ಎಲ್ಲಿದ್ದಾರೆ ಅನ್ನೋದರ ಕುರಿತು ಯಾರಿಗೂ ಸಂಪೂರ್ಣ ಮಾಹಿತಿ ಇಲ್ಲ. ಒಂದು ವೇಳೆ ಇವರು ಭಾರತಕ್ಕೆ ಮರಳಿದ್ರೆ, ದೇಶದಲ್ಲಿ ತಮ್ಮ ಉಗ್ರ ಜಾಲವನ್ನ ಬಿತ್ತರಿಸುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಇವರಿಗೆ ನಿಷೇಧ ಹೇರಲಾಗಿದೆ. ಹೀಗೆ ನೆರೆ ಕೇರಳ ಉಗ್ರ ನೆಲೆಯಾಗುತ್ತಿರುವ ಕುರಿತು ಈ ಹಿಂದೆ ವಿಶ್ವಸಂಸ್ಥೆ ಕೂಡ ವರದಿ ಮಾಡಿತ್ತು.

ಉಗ್ರರ ನೆಲೆಯಾಗುತ್ತಿದೆ ಕೇರಳ
ಕೇರಳ ಉಗ್ರರ ನೆಲೆಯಾಗುತ್ತಿದೆ ಅನ್ನೋದನ್ನ ಈ ಹಿಂದೆ ವಿಶ್ವಸಂಸ್ಥೆ ಸಿದ್ಧಪಡಿಸಿದ್ದ ವರದಿ ಕೂಡ ಹೇಳಿತ್ತು. ಈ ಕುರಿತು ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧಗಳ ಕಣ್ಗಾವಲು ತಂಡ ತನ್ನ 26ನೇ ವರದಿಯಲ್ಲಿ ಹೇಳಿತ್ತು. ಕೇರಳದ ಕೆಲ ಯುವಕರು ಉಗ್ರ ಸಂಘಟನೆಯ ಮುಖಂಡರ ಜೊತೆ ಸಂಪರ್ಕ ಇರುವುದನ್ನ ಕೂಡ ಈ ವರದಿಯು ಸ್ಪಷ್ಟಪಡಿಸಿತ್ತು. ಈ ಮೂಲಕ ಭಾರತವನ್ನ ಎಚ್ಚರಿಸಿತ್ತು.

ಇದನ್ನೂ ಓದಿ: ‘ಸತ್ತರೆ ಉಚಿತವಾಗಿ ಶವ ಸಂಸ್ಕಾರ’: ಬಿಜೆಪಿ ಪ್ರಣಾಳಿಕೆ ಕಂಡು ಗಾಬರಿ ಬಿದ್ದ ಜನರು

ಕೇರಳ ಉಗ್ರರ ನೆಲೆಯಾಗುತ್ತಿದೆ ವಿಶ್ವಸಂಸ್ಥೆ ಮಾತ್ರವಲ್ಲ, ಸ್ವತಃ ಕೇರಳದ ಡಿಜಿಪಿಯವರು ಕೂಡ ಮಾಹಿತಿ ನೀಡಿದ್ರು.

ಕೇರಳ ಉಗ್ರರ ನೆಲೆ-DGP
ದೇಶದಲ್ಲಿ ನಡೆಯುತ್ತಿರುವ ವಿದ್ವಂಸಕ ಕೃತ್ಯ, ಭಯೋತ್ಪಾದನಾ ದಾಳಿ ಸೇರಿದಂತೆ ಹಲವು ಉಗ್ರರ ಚಟುವಟಿಕೆಗಳಿಗೆ ಕೇರಳ ಪ್ರಮುಖ ಕೇಂದ್ರವಾಗುತ್ತಿದೆ ಎಂದು ಕೇರಳದ ಡಿಜಿಪಿಯೊಬ್ಬರು ಈ ಹಿಂದೆ ಹೇಳಿದ್ರು. ಕೇರಳದಲ್ಲಿ ಯುವಕ ಯುವತಿಯರು ವಿದೇಶದ ಪ್ರಮುಖ ಭಯೋತ್ಪಾದನಾ ಗುಂಪುಗಳಲ್ಲಿ ಕಾಣಿಸಿಕೊಂಡ ಹಲವು ಉದಾಹರಣೆಗಳಿವೆ. ಭಯೋತ್ಪಾದಕ ಗುಂಪುಗಳಿಗೆ ಅಮಾಯಕರು ಸಿಲುಕದಂತೆ ತಡೆಯಲು ಕೇರಳ ಪೊಲೀಸ್ ಹಲವು ಪ್ರಯತ್ನಗಳನ್ನು ಮಾಡಿದೆ.

ಹೀಗೆ ಇಂದಿಗೂ ಕೇರಳದ ಹಲವು ಯುವಕರು ಉಗ್ರರ ಜಾಲವನ್ನ ಹಿಂಬಾಲಿಸಿಕೊಂಡು ಹೊರಟಿದ್ದಾರೆ. ವರ್ಷಗಳ ಹಿಂದೆ ಐಸಿಸ್​ ಉಗ್ರ ಸಂಘಟನೆಗೆ ಕೇರಳದ ಯುವಕರನ್ನ ಸಾಗಿಸಿದ ಪ್ರಕರಣದಲ್ಲಿ ಮಹಿಳೆಯೊಬ್ಬರು 7 ವರ್ಷಗಳ ಶಿಕ್ಷೆಗೆ ಒಳಪಟ್ಟಿದ್ನನ ಕೂಡ ಇಲ್ಲಿ ನಾವು ಮರೆಯುವಂತಿಲ್ಲ.

ಇದನ್ನೂ ಓದಿ: ಅವಶ್ಯಕತೆ ಬಿದ್ದರೆ ಅವರದ್ದೇ ನೆಲಕ್ಕೆ ನುಗ್ಗಿ ಉಗ್ರವಾದಿಗಳನ್ನ ಮಟ್ಟ ಹಾಕುತ್ತೇವೆ- ರಾಜನಾಥ್ ಸಿಂಗ್

15 ಕೇರಳಿಗರನ್ನ ಐಸಿಸ್​​ಗೆ ಸೇರಿಸಿದ ಮಹಿಳೆ
ಕಾಸರಗೋಡು ನಿವಾಸಿಗಳಾದ 15 ಯುವಕರನ್ನು ಅಫ್ಘಾನಿಸ್ತಾನದ ಐಸಿಸ್​-ಕೆ ಕೇಂದ್ರಕ್ಕೆ ಸಾಗಿಸಿದ್ದ ಆರೋಪದಲ್ಲಿ ಯಾಸ್ಮಿನ್ಅಹಮ್ಮದ್ ಎಂಬ ಮಹಿಳೆಯನ್ನ ವರ್ಷದ ಹಿಂದೆ ರಾಷ್ಟ್ರೀಯ ತನಿಖಾ ದಳ ಬಂಧಿಸಿ ಜೈಲಿಗಟ್ಟಿತ್ತು. ಈಕೆಯ ಗಂಡ ಅಫ್ಘಾನಿಲ್ಲಿದ್ದು, ಈಕೆ ಇಲ್ಲಿಂದಲೇ ಹಲವರನ್ನ ಉಗ್ರ ಸಂಘಟನೆಗೆ ಸೇರಿಸಿದ್ದಾಳೆ ಎನ್ನಲಾಗಿದೆ. ಯಾಸ್ಮಿನ್ಅಹಮ್ಮದ್ಏಳು ವರ್ಷ ಕಠಿಣ ಸಜೆ ಹಾಗೂ 25,000 ರುಪಾಯಿ ದಂಡ ವಿಧಿಸಿ ಎರ್ನಾಕುಳಂ ನ್ಯಾಯಾಲಯ ತೀರ್ಪು ನೀಡಿತ್ತು. ಸದ್ಯ ಈಕೆ ಜೈಲಿನಲ್ಲಿದ್ದಾಳೆ ಎನ್ನಲಾಗಿದೆ.

ಕೇರಳದ ಕೆಲ ಯುವಕರು ಐಸಿಸ್​, ಐಸಿಸ್​-ಕೆ, ಅಲ್​ಖೈದಾ ಸೇರಿದಂತೆ ಹಲವು ಉಗ್ರ ಸಂಘಟನೆಯ ಜೊತೆ ಕೈಜೋಡಿಸಿರುವ ಸಾಧ್ಯತೆ ಇದೆ. ಇದ್ರಿಂದ ದೇಶಕ್ಕೆ ಗಂಡಾತರ ಎದುರಾಗುವ ಸಾಧ್ಯತೆ ಇದೆ..

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ ಕೇಸ್; ತಪ್ಪೊಪ್ಪಿಕೊಂಡ ಆರೋಪಿಗಳು

ಐಸಿಸ್​​ಕೆಯಿಂದ ಭಾರತಕ್ಕೆ ಗಂಡಾಂತರ..?
ಕೇರಳದ ಹಲವು ಈಗಾಗಲೇ ಐಸಿಸ್​-ಕೆ ಸೇರಿರುವ ಕುರಿತು ವರದಿಯಾಗಿದೆ. ಇದ್ರಿಂದ ಭಯನಾಕ ಉಗ್ರ ಸಂಘಟನೆ ಐಸಿಸ್​-ಕೆ ತನ್ನ ಕರಾಳ ಕಬಂಧ ಬಾಹುಗಳನ್ನ ಭಾರತಕ್ಕೂ ಚಾಚಿರುವುದು ಕನ್​ಫರ್ಮ್​ ಆಗಿದೆ. ಈ ಹಿಂದೆ ಇದೇ ಖೋರಾಸನ್ ಉಗ್ರರು ಅಫ್ಘಾನಲ್ಲಿರುವ ಸಿಖ್ಖರ ಗುರುದ್ವಾರದ ಮೇಲೆ ಅಟ್ಯಾಕ್ ಮಾಡಿ 25 ಜನರನ್ನ ಹತ್ಯೆ ಮಾಡಿದ್ರು. ಈ ದಾಳಿ ಮಾಡಿದ್ದು ಕೂಡ ಕೇರಳ ಮೂಲದ ವ್ಯಕ್ತಿನೇ ಎನ್ನಲಾಗಿತ್ತು. ಹೀಗೆ ಐಸಿಸ್​​ಕೆ ಜೊತೆ ಸೇರಿ ವಿಧ್ವಂಸಕ ಕೃತ್ಯ ಎಸಗುತ್ತಿದ್ದ ಈ ಪಾಪಿಗಳು ಒಂದು ವೇಳೆ ಭಾರತದ ಮಡಿಲನ್ನ ಸೇರಿದ್ರೆ ದೇಶದಲ್ಲಿ ವಿಧ್ವಂಸಕ ಕೃತ್ಯಗಳು ನಡೆಯುವ ಸಾಧ್ಯತೆ ಇದೆ. ಅಲ್ಲದೆ ಇಲ್ಲಿಯ ಹಲವು ಯುವಕರ ಬ್ರೈನ್ ವಾಶ್ ಮಾಡಿ, ಅವರನ್ನ ಕೂಡ ಇಂತಹ ದುಷ್ಕೃತ್ಯಗಳಿಗೆ ಬಳಸುವ ಸಾಧ್ಯತೆ ಕೂಡ ಅಧಿಕವಾಗಿದೆ. ಆದ್ದರಿಂದ ಇಂತಹ ಹೇಡಿಗಳನ್ನ ಆರಂಭದ ಹಂತದಲ್ಲೇ ಮಟ್ಟಹಾಕಬೇಕಾದ ಅನಿವಾರ್ಯತೆ ಇದೆ.

ಕಾಬೂಲ್​ ಉಗ್ರರ ದಾಳಿ ಹಿನ್ನೆಲೆ ಬೆಂಗಳೂರಿನಲ್ಲೂ ಅಲರ್ಟ್​ ಆಗಿರುವಂತೆ ಈಗಾಗಲೇ ಕೇಂದ್ರದ ಏಜೆನ್ಸಿಗಳು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಮಾಹಿತಿ ನೀಡಿದೆ. ಏಜೆನ್ಸಿಗಳು ಕೊಟ್ಟ ಎಚ್ಚರಿಕೆಯ ಬೆನ್ನಲ್ಲೇ ಇದೀಗ ಕೇರಳದ ಯುವಕರು ಕೂಡ ಭಯಾನಕ ಐಸಿಸ್​ ಸಂಘಟನೆಯ ಜೊತೆ ಕೈ ಜೋಡಿಸಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ತಾಳಿ ಕಟ್ಟುವ ಶುಭ ವೇಳೆ.. ಗಂಡನಿಗೆ ಕಾಪಾಳಮೋಕ್ಷ ಮಾಡಿದ ಮದುಮಗಳು..!

ಒಟ್ಟಿನಲ್ಲಿ ನೆರೆ ರಾಷ್ಟ್ರದಲ್ಲಿ ಏನೇ ಡೆವಲಪ್​ಮೆಂಟ್ಸ್​​ ನಡೆದ್ರೂ ಅದ್ರ ಎಫೆಕ್ಟ್​​ ಇತರೆ ದೇಶಗಳಿಗೂ ತಟ್ಟಲಿದೆ. ಅಫ್ಘಾನ್ ತಾಲಿಬಾನ್​ ಹಿಡಿತಲ್ಲಿದ್ರೆ, ಐಸಿಸ್​​ಕೆಯಲ್ಲಿ ನಮ್ಮದೇ ದೇಶದ ಕೆಲ ಯುವಕರು ಕಾಣಿಸಿಕೊಂಡಿದ್ದಾರೆ. ಇದ್ರಿಂದ ದೇಶದಲ್ಲಿ ಮತ್ತೆ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಉಗ್ರ ಮನಸ್ಥಿಯ ಬೇರು ಸಮೇತ ಕಿತ್ತು ಹಾಕಬೇಕಾದ ಅನಿವಾರ್ಯತೆ ಅಧಿಕವಾಗಿದೆ.

ದೇಶದ ಯಾವುದೇ ಮೂಲೆಯಲ್ಲಿದ್ರೂ ಇಂತಹ ಉಗ್ರ ಮನಸ್ಥಿತಿಯ ಜನರಿದ್ರೆ ದೇಶಕ್ಕೆ ಅಪಾಯ ತಪ್ಪಿದ್ದಲ್ಲ. ಆದ್ದರಿಂದ ಇಂತವರು ದೇಶದೊಳಗೆ ಹೊಕ್ಕದಂತೆ ನೋಡಿಕೊಳ್ಳಬೇಕಾಗಿದೆ. ಒಂದು ವೇಳೆ ಐಸಿಸ್​ ಮನಸ್ಥಿತಿಯ ಜನರು ಭಾರತದ ಬಾಗಿಲನ್ನ ದಾಟಿ ಈಗಾಗಲೇ ಒಳ ಬಂದಿದ್ರೆ, ಅಂಥವರನ್ನ ಜೈಲಿಗಟ್ಟುವ ಕಾರ್ಯವು ತ್ವರಿತವಾಗಿ ಸಾಗಬೇಕಾಗಿದೆ.

– ವಿಶೇಷ ಬರಹ: ಅಬ್ದುಲ್ ಸತ್ತಾರ್, ಸ್ಪೆಷಲ್ ಡೆಸ್ಕ್

Source: newsfirstlive.com Source link