ಸಮೋಸ, ಕಬಾಬ್ ವ್ಯಾಪಾರಿಗಳು ಕದ್ದಿದ್ದು ಬರೋಬ್ಬರಿ 10 ಲಕ್ಷ ಮೌಲ್ಯದ ಬೈಕ್ಸ್.. ನಾಲ್ವರು ಅಂದರ್

ಸಮೋಸ, ಕಬಾಬ್ ವ್ಯಾಪಾರಿಗಳು ಕದ್ದಿದ್ದು ಬರೋಬ್ಬರಿ 10 ಲಕ್ಷ ಮೌಲ್ಯದ ಬೈಕ್ಸ್.. ನಾಲ್ವರು ಅಂದರ್

ಶಿವಮೊಗ್ಗ: ಜಿಲ್ಲೆಯ ತುಂಗಾ ನಗರ ಠಾಣೆಯ ಪೊಲೀಸರು 4 ಜನ ಆರೋಪಿಗಳನ್ನು ಬಂಧಿಸಿ ಬರೋಬ್ಬರಿ ₹10,52,450 ರೂಪಾಯಿ ಮೌಲ್ಯದ 22 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಭದ್ರಾವತಿ ಟೌನ್ ನೇತಾಜಿ ಆಟೋ ಸ್ಟಾಂಡ್ ಹತ್ತಿರ ಸಮೋಸ ವ್ಯಾಪಾರ ಮಾಡುವ ಸುಹೇಲ್ ಪಾಷಾ @ ಸುಹೇಲ್ ಖಾನ್ @ ಸಮೋಸ ರಾಜ ಬಿನ್ ಯೂನುಸ್ ಖಾನ್ (22), ಶಿವಮೊಗ್ಗ ಭರ್ಮಪ್ಪ ನಗರದ ಮೊಹ್ಮದ್ ಹ್ಯಾರೀಸ್ ಬಿನ್ ಮೊಹ್ಮದ್ ಇಸ್ಮಾಯಿಲ್ (22), ಶಿವಮೊಗ್ಗ ಹಳೆ ಮಂಡ್ಲಿ ಅಮೃತ ರೈಸ್ ಮಿಲ್ ಎದುರು ಕಬಾಬ್ ವ್ಯಾಪಾರ ಮಾಡುವ ಫಜಲು @ ಚಬಾಜಾ ಬಿನ್ ಸೈಯದ್ ಅಕ್ರಮ್ (20) ಮತ್ತು ಶಿವಮೊಗ್ಗ ಆರ್.ಎಂ.ಎಲ್ ನಗರ 2 ನೇ ಹಂತ ಯುನಿಟಿ ಹಾಲ್ ಹಿಂಭಾಗದ ಸಾಹೀಲ್ ಶೇಟ್ ಥಿ ಅಬ್ದುಲ್ ಹಾಫೀಜ್ ಉಲ್ಲಾ ಶೇಟ್ ಬಿನ್ ನಯೀಮ್ @ ಮೂಸಾಶೇಟ್‌ (20) ಬಂಧಿತ ಆರೋಪಿಗಳು.

ಆರೋಪಿಗಳ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ 3, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 5, ವಿನೋಬ ನಗರ ಪೊಲೀಸ್ ಠಾಣೆಯಲ್ಲಿ 2 , ಜಯನಗರ ಪೊಲೀಸ್ ಠಾಣೆಯಲ್ಲಿ 2 , ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ 1, ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ 1, ಕುಂಸಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ , ಶಿರಾಳಕೊಪ್ಪ ಠಾಣೆಯಲ್ಲಿ 3 ಪ್ರಕರಣ , ಅಂತರ್ ಜಿಲ್ಲೆಗಳಾದ ದಾವಣಗೆರೆ ಜಿಲ್ಲೆ ಹೊನ್ನಾಳಿ ಪರ ಲೀಸ್ ಠಾಣೆಯ 02 ಪ್ರಕರಣ , ಚಿಕ್ಕಮಂಗಳೂರು ಜಿಲ್ಲೆ ಬೀರೂರು ಪೊಲೀಸ್ ಠಾಣೆಯ 01 ಪ್ರಕರಣ ಮತ್ತು ಕಡೂರು ಪೊಲೀಸ್ ಠಾಣೆಯ 01 ಪ್ರಕರಣ ಸೇರಿ ಒಟ್ಟು 22 ಪ್ರಕರಣ ದಾಖಲಾಗಿದೆ.

Source: newsfirstlive.com Source link