‘ನಡುವೆ ಅಂತರವಿರಲಿ’ ಪ್ರಖ್ಯಾತ್​ ಈಗ ರಾಮಾ ರಾಮಾ ರೇ ನಿರ್ದೇಶಕರ ಜೊತೆಯಲ್ಲಿ ಮತ್ತೆ ಪ್ರತ್ಯಕ್ಷ

‘ನಡುವೆ ಅಂತರವಿರಲಿ’ ಪ್ರಖ್ಯಾತ್​ ಈಗ ರಾಮಾ ರಾಮಾ ರೇ ನಿರ್ದೇಶಕರ ಜೊತೆಯಲ್ಲಿ ಮತ್ತೆ ಪ್ರತ್ಯಕ್ಷ

ನಡುವೆ ಅಂತರವಿರಲಿ ಚಿತ್ರ ಯಾರಿಗೆ ತಾನೇ ನೆನಪಿಲ್ಲ ಹೇಳಿ.. ಶಾಂಕುತಲೆ ಸಿಕ್ಕಳು ಸುಮ್ ಸುಮ್ನೆ ನಕ್ಕಳು ಈ ಹಾಡು ಅಷ್ಟರ ಮಟ್ಟಿಗೆ ಹರಿಹರೆಯದ ಹೃದಯಗಳ ಕ್ಲೀನ್​ ಬೋಲ್ಡ್​ ಮಾಡಿತ್ತು.. ಈ ಸಿನಿಮಾ ನೋಡಿದವರು ಚಿತ್ರದ ನಾಯಕನ ನೋಡಿ ಚಂದನವನಕ್ಕೆ ಚೆಂದದ ಹುಡುಗನೊಬ್ಬ ಸಿಕ್ಕಿದ ಅಂತ ಅಂದಾಜು ಮಾಡಿದ್ರು.ಅದ್ರೆ ಅದ್ಯಾಕೋ ಗೊತ್ತಿಲ್ಲ,ನಡುವೆ ಅಂತರ ವಿರಲಿ ನಂತ್ರ ಪ್ರಖ್ಯಾತ್ ಸಿನಿಮಾ ರಂಗದಿಂದ ಸ್ವಲ್ಪ ಅಂತರ ಕಾಯ್ದು ಕೊಂಡಿದ್ರು.ಈ ಗ್ಯಾಪ್​ನಲ್ಲಿ ಪ್ರಖ್ಯಾತ್​ ಒಂದೊಳ್ಳೆ ಟೀಂ ಜೊತೆ ಸೇರಿ ಮತ್ತೆ ಮೇಕಪ್​ ಹಚ್ಚೋ ಸೂಚನೆ ಕೊಟ್ಟಿದ್ದಾರೆ.

blank

ಅದೃಷ್ಟ ಅನ್ನೋದೇ ಹಾಗೆ. ಯಾರಿಗೆ ಯಾವಾಗ ಬರುತ್ತೆ ಅಂತ ಹೇಳೋಕೆ ಆಗಲ್ಲ. ಯಾಕಂದ್ರೆ ಅದೃಷ್ಠ ಅದರ ಇಷ್ಟದಂತೆ ಅಧೃಷ್ಠವಂತರನ್ನು ಹುಡುಕಿಕೊಂಡು ಹೋಗುತ್ತೆ. ಈಗ ಅದೇ ರೀತಿ ಅದೃಷ್ಟ ನವ ನಟ ನಡುವೆ ಅಂತರ ವಿರಲಿ ಖ್ಯಾತಿಯ ಪ್ರಖ್ಯಾತ್​ನ ಹುಡುಕಿಕೊಂಡು ಹೋಗುವ ಸೂಚನೆ ಸಿಕ್ಕಿದೆ. ರಾಜಕೀಯ ಕುಟುಂಬದ ಹಿನ್ನೆಲೆಯಿರುವ ಪ್ರಖ್ಯಾತ್​ ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆ ಮಾಡಿ ಗಮನ ಸೆಳೆದಿದ್ರು. ಅದರೆ ನಡುವೆ ಅಂತರವಿರಲಿ ಚಿತ್ರದ ನಂತರ ಪ್ರಖ್ಯಾತ್ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಪ್ರತ್ಯಕ್ಷ ವಾಗಿದ್ರು. ಅಲ್ಲದೇ 5 ನಿರ್ದೇಶಕರ ಚಿತ್ರದಲ್ಲಿ ಪ್ರಖ್ಯಾತ್ ಶಶಾಂಕ್​ ಕತೆಗೆ ಜೀವ ತುಂಬಿದ್ದಾರೆ. ಈ ಸಿನಿಮಾ ರಿಲೀಸ್​ ಆಗೋಕು ಮುಂಚೆನೇ ಈಗ ಪ್ರಖ್ಯಾತ್​ ಒಬ್ಬ ಪ್ರಖ್ಯಾತ ನಿರ್ದೇಶಕನ ಜೊತೆ ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ.

ಯೆಸ್​..ಪ್ರಖ್ಯಾತ್ ರಾಮಾ ರಾಮಾ ಖ್ಯಾತಿಯ ಸತ್ಯ ಪ್ರಕಾಶ್​ ಜೊತೆ ಈಗಾಗಲೇ ಸಿನಿಮಾ ತಯಾರಿ ಮಾಡಿದ್ದಾರೆ.. ಅದ್ರೆ ಕೊರೊನಾ ಕಾರಣ ಈ ಸಿನಿಮಾ ಕೊಂಚ ತಡವಾಗಿದ್ದು, ಶೀಘ್ರದಲ್ಲೇ ಸೆಟ್ಟೇರುವ ಸಾಧ್ಯತೆ ಇದೆ.. ವಿಶೇಷ ಅಂದ್ರೆ ಈ ಸಿನಿಮಾ ಪವರ್ ಸ್ಟಾರ್ ಪುನೀತ್​ ರಾಜ್​ ಕುಮಾರ್​ ಅವರ ಪಿಅರ್​ಕೆ ಪ್ರೋಡಕ್ಷನ್​ನಲ್ಲಿ ನಿರ್ಮಾಣವಾದ್ರು ಅಚ್ಚರಿಯಿಲ್ಲ. ನಟಿಸಿದ ಮೊದಲ ಚಿತ್ರ ಒಂದು ಹಂತಕ್ಕೆ ನೇಮು ಫೇಮು ತಂದು ಕೊಟ್ಟಿದ್ರು ಪ್ರಖ್ಯಾತ್​ ಅಳೆದು ತೂಗಿ ಸಿನಿಮಾ ಮಾಡ್ತಿದ್ದು, ಒಂದೊಳ್ಳೆ ತಂಡದ ಜೊತೆ ಉತ್ತಮ ಸಿನಿಮಾ ಮಾಡುವ ಕನಸು ಕಾಣ್ತಿದ್ದಾರೆ. ಆ ಕನಸು ಯಾವಾಗ ನನಸಾಗುತ್ತೆ ಕಾದು ನೋಡಬೇಕು.

Source: newsfirstlive.com Source link